ಕರ್ನಾಟಕ

karnataka

ETV Bharat / sports

ಐವರು ನೆಚ್ಚಿನ ಬಾಕ್ಸರ್​ಗಳನ್ನು ಹೆಸರಿಸಿದ ಮೈಕ್ ಟೈಸನ್​: ಆ್ಯಂಥೊನಿ ಜೋಶುವಾಗೆ ಇಲ್ಲ ಸ್ಥಾನ - ಆ್ಯಂಥೊನಿ ಜೋಶುವಾಗೆ ಇಲ್ಲ ಸ್ಥಾನ

1990ರ ದಶಕದಲ್ಲಿ ಹೆವಿ ವೇಯ್ಟ್ ಕಿಂಗ್​ ಆಗಿದ್ದ ಟೈಸನ್, ಪ್ರಸ್ತುತ ಆಟದಲ್ಲಿರುವ ಐವರು ಹೆವಿ ವೇಯ್ಟ್ ಬಾಕ್ಸರ್​ಗಳನ್ನು ಆಯ್ಕೆ ಮಾಡಿದ ನಂತರ ಬಾಕ್ಸಿಂಗ್ ಉತ್ಸಾಹಿಗಳ ಗಮನ ಸೆಳೆದಿದ್ದಾರೆ.

Mike Tyson names his top 5 favourite current boxers
ಐವರು ನೆಚ್ಚಿನ ಬಾಕ್ಸರ್​ಗಳನ್ನು ಹೆಸರಿಸಿದ ಮೈಕ್ ಟೈಸನ್​

By

Published : Dec 11, 2020, 9:18 PM IST

ಹೈದರಾಬಾದ್:ಬಾಕ್ಸಿಂಗ್​ ದಂತಕಥೆ ಮೈಕ್ ಟೈಸನ್, ತಮ್ಮ ಐವರು ನೆಚ್ಚಿನ ಬಾಕ್ಸಿಂಗ್​ ಆಟಗಾರರನ್ನು ಹೆಸರಿಸಿದ್ದು, ಇಂಗ್ಲೆಂಡ್​ನ ಪ್ರಸಿದ್ಧ ಬಾಕ್ಸರ್​ ಆ್ಯಂಥೊನಿ ಜೋಶುವಾ ಸ್ಥಾನ ಪಡೆದಿಲ್ಲ.

ಆ್ಯಂಥೊನಿ ಜೋಶುವಾ 2016 ಮತ್ತು 2019ರ ಜೂನ್​ ನಡುವೆ ಎರಡು ಬಾರಿ ಹೆವಿ ವೇಯ್ಟ್ ಚಾಂಪಿಯನ್ ಆಗಿದ್ದು, ಡಬ್ಲ್ಯೂಬಿಎ, ಐಬಿಎಫ್, ಡಬ್ಲ್ಯೂಬಿಒ ಮತ್ತು ಐಬಿಒ ಪ್ರಶಸ್ತಿಗಳನ್ನು ಗೆದ್ದಿದ್ದರೂ ಬಾಕ್ಸಿಂಗ್‌ ದಂತಕಥೆ ಮೈಕ್ ಟೈಸನ್ ಅವರ ನೆಚ್ಚಿನ ಆಟಗಾರನಾಗಿಲ್ಲ.

1990ರ ದಶಕದಲ್ಲಿ ಹೆವಿ ವೇಯ್ಟ್ ಕಿಂಗ್​ ಆಗಿದ್ದ ಟೈಸನ್, ಪ್ರಸ್ತುತ ಆಟದಲ್ಲಿರುವ ಐವರು ಹೆವಿ ವೇಯ್ಟ್ ಬಾಕ್ಸರ್​​ಗಳನ್ನು ಆಯ್ಕೆ ಮಾಡಿದ ನಂತರ ಬಾಕ್ಸಿಂಗ್ ಉತ್ಸಾಹಿಗಳ ಗಮನ ಸೆಳೆದಿದ್ದಾರೆ.

ಮೈಕ್ ಟೈಸನ್​

ಡಬ್ಲ್ಯೂಬಿಸಿ ಚಾಂಪಿಯನ್ ಟೈಸನ್ ಫ್ಯೂರಿ ಮತ್ತು ಮಾಜಿ ಡಬ್ಲ್ಯೂಬಿಸಿ ಚಾಂಪಿಯನ್ ಡಿಯೊಂಟೇ ವೈಲ್ಡರ್ ಟೈಸನ್ ಅವರ ಮೊದಲ ಎರಡು ಆಯ್ಕೆಯಾಗಿದೆ. ಟೈಸನ್‌ನ ಪಟ್ಟಿಯಲ್ಲಿ ಆಂಡಿ ರೂಯಿಜ್ ಜೂನಿಯರ್ ಅವರ ಹೆಸರೂ ಸೇರಿದೆ. ಇವರು 2019ರಲ್ಲಿ ಜೋಶುವಾ ಅವರಿಗೆ ಮೊದಲ ಬಾರಿಗೆ ಸೋಲುಣಿಸಿದ್ದರು. ನಂತರ ವಾಸಿಲ್ ಲೋಮಾಚೆಂಕೊ ಅವರನ್ನು ಆಯ್ಕೆ ಮಾಡಿದ್ರೆ, ಐದನೇಯದಾಗಿ ಗೆರ್ವೊಂಟಾ ಡೇವಿಸ್ ಅವರನ್ನು ಟೈಸನ್ ಆಯ್ಕೆ ಮಾಡಿದ್ದಾರೆ.

ಆ್ಯಂಥೊನಿ ಜೋಶುವಾ, ಟೈಸನ್‌ ಅವರ ಅಗ್ರ ಐದು ನೆಚ್ಚಿನ ಪ್ರಸ್ತುತ ಬಾಕ್ಸರ್‌ಗಳ ಭಾಗವಾಗಿರದಿದ್ದರೂ, ಬಾಕ್ಸಿಂಗ್ ಶ್ರೇಷ್ಠರು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಈ ಸೂಪರ್‌ ಸ್ಟಾರ್​ನನ್ನು ಹಾಡಿ ಹೊಗಳಿದ್ದಾರೆ.

ABOUT THE AUTHOR

...view details