ಅಕಾಪುಲ್ಕೊ (ಮೆಕ್ಸಿಕೊ): ರಷ್ಯಾದ ಡೇನಿಯಲ್ ಮೆಡ್ವೆಡೆವ್ ಮೆಕ್ಸಿಕೋ ಓಪನ್ನ ಎರಡನೇ ಸುತ್ತಿನಲ್ಲಿ ಸ್ಪೇನ್ನ ಪಬ್ಲೊ ಅ್ಯಂಡುಜರ್ ವಿರುದ್ಧ 6-1, 6-2ರ ಪ್ರಾಬಲ್ಯಯುತ ಗೆಲುವು ಸಾಧಿಸಿ ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವುದಕ್ಕೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಮೆಕ್ಸಿಕೊ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೆಡ್ವೆಡೆವ್, ಅಗ್ರಸ್ಥಾನಕ್ಕೆ ಮತ್ತಷ್ಟು ಹತ್ತಿರ - ಎಟಿಪಿ ಶ್ರೇಯಾಂಕ ಅಗ್ರಸ್ಥಾನ
26 ವರ್ಷದ ಡೇನಿಯಲ್ ಮೆಡ್ವೆಡೆವ್ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಯೊಶಿಹಜಿಟೊ ನಿಶಿಯೋಕ ವಿರುದ್ಧ ಶುಕ್ರವಾರ ಸೆಣಸಾಡಲಿದ್ದಾರೆ.
26 ವರ್ಷದ ಡೇನಿಯಲ್ ಮೆಡ್ವೆಡೆವ್ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಯೊಶಿಹಜಿಟೊ ನಿಶಿಯೋಕ ವಿರುದ್ಧ ಶುಕ್ರವಾರ ಸೆಣಸಾಡಲಿದ್ದಾರೆ. ಹಾಲಿ ಚಾಂಪಿಯನ್ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಅಂಪೈರ್ ಕುರ್ಚಿಗೆ ರಾಕೆಟ್ನಿಂದ ಹೊಡೆದದ್ದಿರಿಂದ ಅವರನ್ನು ಟೂರ್ನಿಯಿಂದ ಅಮಾನತುಗೊಳಿಸಲಾಗಿದೆ. ಹಾಗಾಗಿ ಮೆಡ್ವಡೆವ್ ಈ ಬಾರಿ ಮೆಕ್ಸಿಕೊ ಓಪನ್ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದಾರೆ. ಒಂದು ವೇಳೆ ಮೆಕ್ಸಿಕೊ ಓಪನ್ ಗೆದ್ದರೆ ಸರ್ಬಿಯಾದ ಸ್ಟಾರ್ ನೊವಾಕ್ ಜೊಕೊವಿಕ್ರನ್ನು ಹಿಂದಿಕ್ಕಿ ಮೆಡ್ವೆಡೆವ್ ಅಗ್ರಸ್ಥಾನಕ್ಕೇರಲಿದ್ದಾರೆ.
ಇದನ್ನೂ ಓದಿ:ಎರಡು ವರ್ಷಗಳ ನಂತರ ಐಎಸ್ಎಲ್ ಫೈನಲ್ ಪಂದ್ಯ ವೀಕ್ಷಣೆಗೆ ಬರಲಿದ್ದಾರೆ ಪ್ರೇಕ್ಷಕರು!