ಹೈದರಾಬಾದ್:ಭಾರತೀಯ ಬಾಕ್ಸಿಂಗ್ ಪಟು ಮೇರಿಕೋಮ್ ಸ್ಪೇನ್ನ ಕ್ಯಾಸ್ಟೆಲ್ಲೋನ್ನಲ್ಲಿ ನಡೆದ 35ನೇ ಬಾಕ್ಸಮ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್ನ 51 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಅಮೆರಿಕದ ಬಾಕ್ಸರ್ ವರ್ಜೀನಿಯಾ ಪುಚ್ ಅವರ ವಿರುದ್ಧ ಸೆಣೆಸಿದ್ದ 37 ವರ್ಷದ ಮೇರಿಕೋಮ್ ಸೋಲನ್ನಪ್ಪಿದ್ದು, ಇದರಿಂದ ಕಂಚಿನ ಪದಕಕ್ಕೆ ತೃಪ್ತಿಗೊಳ್ಳಬೇಕಾಯಿತು. ಮೊದಲ ಮೂರು ನಿಮಿಷಗಳ ಕಾಲ ಇಬ್ಬರು ರಕ್ಷಣಾತ್ಮಕ ಆಟವಾಡಿದ್ದರು. ಎರಡನೇ ಸುತ್ತಿನಲ್ಲಿ ಮೇರಿಕೋಮ್ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು.
ಇದನ್ನೂ ಓದಿ:ಗಂಡು ಮಕ್ಕಳಿಲ್ಲವೆಂದು ಮನೆ ಬಿಟ್ಟು ಹೋದ ಅಪ್ಪ: ಅಮ್ಮನ ಆಸರೆಯಲ್ಲಿ ಬೆಳೆದ ಮಗಳ ಮೇರು ಸಾಧನೆ