ಕರ್ನಾಟಕ

karnataka

ETV Bharat / sports

ಒಲಿಂಪಿಕ್​ ಕ್ವಾಲಿಫೈಯರ್​ ಟ್ರೈಯಲ್ಸ್... 6 ಬಾರಿಯ ವಿಶ್ವಚಾಂಪಿಯನ್​ ಮೇರಿ ಕೋಮ್​ಗೆ ಜೂನಿಯರ್​ ಝರೀನ್​ ಸವಾಲು - Nikhat Zareen

ಆರು ಬಾರಿಯ ವಿಶ್ವಚಾಂಪಿಯನ್​ ಮೇರಿಕೋಮ್​ರನ್ನು ಯುವ ಬಾಕ್ಸರ್​ ನಿಖಾತ್​ ಝರೀನ್​ ಇಂದು ಒಲಿಂಪಿಕ್​ ಕ್ವಾಲಿಫೈಯರ್​ಗೆ ನಡೆಯಲಿರುವ ಟ್ರಯಲ್ಸ್​ ಫೈನಲ್​ ಪಂದ್ಯದಲ್ಲಿ ಎದುರಿಸಲಿದ್ದಾರೆ.

Mary Kom vs Nikhat Zareen
Mary Kom vs Nikhat Zareen

By

Published : Dec 28, 2019, 12:00 PM IST

ನವದೆಹಲಿ: ಆರು ಬಾರಿಯ ವಿಶ್ವಚಾಂಪಿಯನ್​ ಮೇರಿಕೋಮ್​ರನ್ನು ಯುವ ಬಾಕ್ಸರ್​ ನಿಖಾತ್​ ಝರೀನ್​ ಇಂದು ಒಲಿಂಪಿಕ್​ ಕ್ವಾಲಿಫೈಯರ್​ಗೆ ನಡೆಯಲಿರುವ ಟ್ರಯಲ್ಸ್​ ಫೈನಲ್​ ಪಂದ್ಯದಲ್ಲಿ ಎದುರಿಸಲಿದ್ದಾರೆ.

ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್​ ಕ್ವಾಲಿಫೈಯರ್​ಗೆ ಪಂದ್ಯಕ್ಕೆ 51 ಕೆಜಿ ವಿಭಾಗದಿಂದ ಪಾಲ್ಗೊಳ್ಳುವ ಮುನ್ನ ಟ್ರಯಲ್​ ಪಂದ್ಯದಲ್ಲಿ 6 ಬಾರಿಯ ವಿಶ್ವ ಚಾಂಪಿಯನ್​ ಮೇರಿಕೋಮ್​ ವಿರುದ್ಧ ಯುವ ಬಾಕ್ಸರ್​ ಝರೀನ್​ ಪೈಪೋಟಿ ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದವರು ಒಲಿಂಪಿಕ್​ ಅರ್ಹತಾ ಟೂರ್ನಿಗೆ ತೇರ್ಗಡೆಯಾಗಲಿದ್ದಾರೆ.

51 ಕೆಜಿ ವಿಭಾಗದಿಂದ ವಿಶ್ವಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಂಡಿದ್ದ ಮೇರಿಕೋಮ್​ ಕಂಚಿನ ಪದಕ ಗೆದ್ದಿದ್ದರು. ಆದರೆ ಅದೇ ವಿಭಾಗದಿಂದ ಟೋಕಿಯೋ ಒಲಿಂಪಿಕ್ ಅರ್ಹತಾ ಸುತ್ತಿಗೆ ನೇರ ಅರ್ಹತೆ ಪಡೆದಿದ್ದರು. ಇದನ್ನು ಪ್ರಶ್ನಿಸಿದ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ನಿಖತ್,​ ಟ್ರಯಲ್​ ಪಂದ್ಯವಿಲ್ಲದೆ ನೇರವಾಗಿ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ಕ್ರೀಡಾಸಚಿವರಿಗೆ ಪತ್ರ ಬರೆದಿದ್ದರು. ನಂತರ ಬಾಕ್ಸಿಂಗ್​ ಫೆಡರೇಷನ್​ ಇಬ್ಬರಿಗೂ ಟ್ರಯಲ್ಸ್​ನಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿತ್ತು

ಇದೀಗ ಮಾಜಿ ಜೂನಿಯರ್​ ಚಾಂಪಿಯನ್ ಝರೀನ್​​ ರಾಷ್ಟ್ರೀಯ ಚಾಂಪಿಯನ್​ ಜ್ಯೋತಿ ಗುಲಿಯಾರನ್ನು ಮಣಿಸಿದ್ದರೆ, ರಿತು ಗ್ರವಾಲ್​ರನ್ನು ಮಣಿಸಿ ಮೇರಿ ಕೋಮ್ ಫೈನಲ್​ ತಲುಪಿದ್ದಾರೆ. ಇಂದು ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೋ ಅವರು ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಕ್ವಾಲಿಫಯರ್​ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಳ್ಳಲಿದ್ದಾರೆ.

ABOUT THE AUTHOR

...view details