ಕರ್ನಾಟಕ

karnataka

ETV Bharat / sports

ಯುವ ಬಾಕ್ಸರ್​ಗಳಿಗೆ ಅವಕಾಶ ಕಲ್ಪಿಸಲು ವಿಶ್ವಚಾಂಪಿಯನ್​ಶಿಪ್, ಏಷ್ಯನ್ ಗೇಮ್ಸ್​ನಿಂದ ಹೊರಬಂದ ಮೇರಿ ಕೋಮ್! - ಕಾಮನ್​ವೆಲ್ತ್​ ಗೇಮ್ಸ್​ ಮೇರಿ ಕೋಮ್

ಯುವ ಬಾಕ್ಸರ್​ಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಮಾಡಿಕೊಡುವುದಕ್ಕಾಗಿ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಿಂದ ಮೇರಿ ಕೋಮ್​ ಹಿಂದಿ ಸರಿದಿದ್ದಾರೆ.

Mary Kom to skip World Championships
ಮೇರಿ ಕೋಮ್ ಬಾಕ್ಸಿಂಗ್

By

Published : Mar 6, 2022, 8:31 PM IST

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ ಅವರು ಮುಂಬರುವ ಐಬಿಎ ಎಲೈಟ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಮತ್ತು 2022ರ ಏಷ್ಯನ್ ಗೇಮ್ಸ್‌ಗಾಗಿ ಸೋಮವಾರದಿಂದ ಪ್ರಾರಂಭವಾಗಲಿರುವ ಟ್ರಯಲ್ಸ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಹಿರಿಯ ಬಾಕ್ಸರ್ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ​ 2022ರ ಕಾಮನ್​ವೆಲ್ತ್​ ಗೇಮ್ಸ್​ಗೆ ಸಿದ್ಧತೆ ನಡೆಸುವುದರ ಕಡೆಗೆ ತಮ್ಮ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

"ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಪೀಳಿಗೆಯ ಬಾಕ್ಸರ್​ಗಳು ತಮ್ಮನ್ನು ತಾವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡುವುದಕ್ಕಾಗಿ ಮತ್ತು ಮೇಜರ್​ ಟೂರ್ನಮೆಂಟ್​ಗಳಲ್ಲಿ ಮಾನ್ಯತೆ ಮತ್ತು ಅನುಭವವನ್ನು ಪಡೆಯಲು ಅನುಕೂಲವಾಗಲೆಂದು ಈ ಟೂರ್ನಮೆಂಟ್​ಗಳಿಂದ ನಾನು ಹಿಂದೆ ಸರಿಯಲು ಬಯಸಿದ್ದೇನೆ ಮತ್ತು ಮುಂಬರುವ ಕಾಮನ್​ವೆಲ್ತ್​ ಗೇಮ್ಸ್​​ ಕಡೆಗೆ ಹೆಚ್ಚಿನ ಗಮನ ನೀಡಲಿದ್ದೇನೆ" ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಗೆ ಕೋಮ್​ ಮಾಹಿತಿ ನೀಡಿದ್ದಾರೆ.

"ಮೇರಿ ಕೋಮ್ ಕಳೆದ ಎರಡು ದಶಕಗಳಿಂದ ಭಾರತೀಯ ಬಾಕ್ಸಿಂಗ್‌ಗೆ ಜ್ಯೋತಿಯಾಗಿದ್ದಾರೆ ಮತ್ತು ಪ್ರಪಂಚದಾದ್ಯಂತದ ಅಸಂಖ್ಯಾತ ಬಾಕ್ಸರ್‌ಗಳು ಮತ್ತು ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದ್ದಾರೆ. ನಾವು ಅವರ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ ಮತ್ತು ಇತರ ಬಾಕ್ಸರ್‌ಗಳಿಗೆ ದಾರಿ ಮಾಡಿಕೊಡಬೇಕೆಂಬ ನಿರ್ಧಾರ ಅವರ ಚಾಂಪಿಯನ್ ನಡತೆಗೆ ಸಾಕ್ಷಿಯಾಗಿದೆ ಎಂದು ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ ಎಲ್ಲಾ 12 ವಿಭಾಗಗಳ ಆಯ್ಕೆ ಟ್ರಯಲ್ಸ್ ಸೋಮವಾರದಿಂದ ಪ್ರಾರಂಭವಾಗಲಿದ್ದು, ಬುಧವಾರ (ಮಾರ್ಚ್ 9) ಕೊನೆಗೊಳ್ಳಲಿದೆ.

ಇದನ್ನೂ ಓದಿ:2022ರ ಐಪಿಎಲ್​ನ ಸಂಪೂರ್ಣ ಲೀಗ್ ವೇಳಾ ಪಟ್ಟಿ ಪ್ರಕಟಿಸಿದ ಬಿಸಿಸಿಐ

ABOUT THE AUTHOR

...view details