ನವದೆಹಲಿ: ಯುವ ಬಾಕ್ಸರ್ ನಿಖಾತ್ ಝರೀನ್ರನ್ನು ಮಣಿಸಿ ಒಲಿಂಪಿಕ್ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದ 6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಹಾಗೂ ನಿಖಾತ್ ಝರೀನ್ ಇಬ್ಬರು ಭಾರತದ ಹೆಮ್ಮೆಯ ಬಾಕ್ಸರ್ಗಳು ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಮೇರಿಕೋಮ್ ಲೆಜೆಂಡ್ ಬಾಕ್ಸರ್, ವಿಶ್ವ ಹವ್ಯಾಸಿ ಬಾಕ್ಸಿಂಗ್ನಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ. ಅದೇ ರೀತಿ ಯುವ ಬಾಕ್ಸರ್ ನಿಖಾತ್ ಝರೀನ್ ಕೂಡ ಮೇರಿಕೋಮ್ರನ್ನು ಹಿಂಬಾಲಿಸುತ್ತಿದ್ದಾರೆ, ಭಾರತ ಇಬ್ಬರನ್ನು ಸಮಾನವಾಗಿ ಗೌರವಿಸುತ್ತದೆ" ಎಂದು ಟ್ವೀಟ್ ಮಾಡಿ ಮೇರಿ ಕೋಮ್ ಮತ್ತು ನಿಖಾತ್ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.