ನವದೆಹಲಿ:ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಶನಿವಾರ ಒಲಿಂಪಿಕ್ ಅರ್ಹತಾ ಟೂರ್ನಿಗಾಗಿ ನಡೆದ ಟ್ರಯಲ್ಸ್ ಫೈನಲ್ನಲ್ಲಿ ನಿಖಾತ್ ಝರೀನ್ ಅವರನ್ನು 9-1ರ ಅಂತರದಲ್ಲಿ ಮಣಿಸಿ ಚೀನಾದಲ್ಲಿ ನಡೆಯುವ ಒಲಿಂಪಿಕ್ ಅರ್ಹತಾ ಟೂರ್ನಿಗೆ ಆಯ್ಕೆಯಾದರು.
6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರನ್ನು 51 ಕೆಜಿ ವಿಭಾಗದಲ್ಲಿ ನೇರವಾಗಿ ಒಲಿಂಪಿಕ್ ಅರ್ಹತಾ ಟೂರ್ನಿಗೆ ಆಯ್ಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಿಖಾತ್, ಆಯ್ಕೆ ಟ್ರಯಲ್ಸ್ ಮೂಲಕವೇ ತಂಡಕ್ಕೆ ಆಯ್ಕೆ ಮಾಡಬೇಕೆಂದು ಭಾರತೀಯ ಬಾಕ್ಸಿಂಗ್ ಫೆಡರೇಷನ್ ಹಾಗೂ ಕ್ರೀಡಾ ಸಚಿವಾಲಯದ ಮೊರೆ ಹೋಗಿದ್ದರು. ಮೇರಿ ಕೋಮ್ ಒಪ್ಪಿಗೆಯ ಮೇರೆಗೆ ಇಂದು ನಡೆದ ಟ್ರಯಲ್ಸ್ ಪಂದ್ಯದಲ್ಲಿ ಅನುಭವಿ ಮೇರಿಕೋಮ್ ಯುವ ಬಾಕ್ಸರ್ ಝರೀನ್ರನ್ನು 9-1 ಅಂಕಗಳಿಂದ ಸುಲಭವಾಗಿ ಮಣಿಸಿದರು.