ಕರ್ನಾಟಕ

karnataka

ETV Bharat / sports

ಜನ್ಮದಿನದಂದೇ 'ಭಾವಿ ಪತಿ'ಯಿಂದ ತಾಯಿಯಾಗ್ತಿರುವ ಖುಷಿ ಸುದ್ದಿ ಹಂಚಿಕೊಂಡ ಶರಪೋವಾ - ಅಲೆಕ್ಸಾಂಡರ್​ ಗಿಲ್ಕ್ಸ್​- ಮರಿಯಾ ಶರಪೋವಾ ಮೊದಲ ಮಗುವಿನ ನಿರೀಕ್ಷೆ

ಪ್ರಸಿದ್ಧ ಮಾಜಿ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ, ಬೀಚ್​ ಬಳಿ ತೆಗೆದಿರುವ ಬೇಬಿ ಬಂಪ್​ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ, "ಅಮೂಲ್ಯ ಆರಂಭ. ಇಬ್ಬರಿಗಾಗಿ ಹುಟ್ಟುಹಬ್ಬದ ಕೇಕ್ ತಿನ್ನುವುದು ನನ್ನ ವಿಶೇಷತೆ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

Maria Sharapova Announces Pregnancy
Maria Sharapova Announces Pregnancy

By

Published : Apr 20, 2022, 4:08 PM IST

ಹೈದರಾಬಾದ್​(ಡೆಸ್ಕ್​): ಟೆನಿಸ್​​ ವೃತ್ತಿ ಜೀವನದಲ್ಲಿ ಎಲ್ಲಾ 4 ಗ್ರ್ಯಾಂಡ್​ ಸ್ಲಾಮ್‌ಗಳನ್ನು ಗೆದ್ದಿರುವ ರಷ್ಯಾದ ಟೆನಿಸ್​ ಸ್ಟಾರ್ ಮರಿಯಾ ಶರಪೋವಾ ಮಂಗಳವಾರ 35ನೇ ಜನ್ಮದಿನ ಆಚರಿಸಿಕೊಂಡಿದ್ದು, ಅದೇ ದಿನ ತಾವು ಮತ್ತು ತಮ್ಮ ಭಾವಿ ಪತಿ ಅಲೆಕ್ಸಾಂಡರ್​ ಗಿಲ್ಕ್ಸ್​ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಪ್ರಸಿದ್ಧ ಮಾಜಿ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ, ಬೀಚ್​ ಬಳಿ ತೆಗೆದಿರುವ ಬೇಬಿ ಬಂಪ್​ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ, "ಅಮೂಲ್ಯ ಆರಂಭ. ಇಬ್ಬರಿಗಾಗಿ ಹುಟ್ಟುಹಬ್ಬದ ಕೇಕ್ ತಿನ್ನುವುದು ನನ್ನ ವಿಶೇಷತೆ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

ವೃತ್ತಿ ಜೀವನದಲ್ಲಿ 5 ಗ್ರ್ಯಾಂಡ್‌ಸ್ಲಾಮ್​ ಗೆದ್ದಿರುವ ಮಾಜಿ ವಿಶ್ವದ ನಂಬರ್​ 1 ಆಟಗಾರ್ತಿ ಎರಡು ವರ್ಷಗಳ ಹಿಂದೆ ಸ್ಪರ್ಧಾತ್ಮಕ ಟೆನಿಸ್​ಗೆ ನಿವೃತ್ತಿ ಘೋಷಿಸಿದ್ದರು. 2020ರ ಡಿಸೆಂಬರ್​ನಲ್ಲಿ ಶರಪೋವಾ ಬ್ರಿಟಿಷ್​ ಉದ್ಯಮಿ ಗಿಲ್ಕ್ಸ್​ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿಸಿದ್ದರು.

ಈ ಜೋಡಿ 2018ರಿಂದಲೂ ರಿಲೇಷನ್​ಶಿಪ್​ನಲ್ಲಿದ್ದಾರೆ. ಗಿಲ್ಕ್ಸ್ ತನ್ನ ವೃತ್ತಿಜೀವನದ ಕೊನೆಯ ಪಂದ್ಯಗಳ ವೇಳೆ ಶರಪೋವಾ ಅವರ ಪ್ಲೇಯಿಂಗ್​ ಬಾಕ್ಸ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಶರಪೋವಾ ಪೋಸ್ಟ್​ ಮಾಡಿರುವ ತಾಯ್ತನದ ಪೋಸ್ಟ್​ಗೆ ಗಿಲ್ಕ್ಸ್​ ಹಾರ್ಟ್​-ಐ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​: ಕನ್ನಡಿಗ ಅರ್ಜುನ್ ಹಲಕುರ್ಕಿ ಸೇರಿ ಭಾರತದ ಮೂವರಿಗೆ ಕಂಚು

ABOUT THE AUTHOR

...view details