ವಾಷಿಂಗ್ಟನ್:ಮಾಜಿ ಟೆನಿಸ್ ಆಟಗಾರ್ತಿ, ರಷ್ಯಾದ ಚೆಲುವೆ ಮರಿಯಾ ಶರಪೋವಾ ತಾಯಿಯಾಗಿದ್ದಾರೆ. ಪ್ರಿಯಕರ ಅಲೆಕ್ಸಾಂಡರ್ ಗಿಲ್ಕ್ಸ್ ಮತ್ತು ಮರಿಯಾ ಅವರು ಪುತ್ರ ಸಂತಾನ ಪಡೆದಿದ್ದಾರೆ.
ಈ ಖುಷಿಯ ವಿಚಾರವನ್ನು ಮರಿಯಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ತನಗೆ ಗಂಡು ಮಗು ಜನಿಸಿದೆ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆಗಳ ಮಹಾಪೂರವೇ ಹರಿಸಿದ್ದಾರೆ.
ನವಜಾತ ಶಿಶುವಿನೊಂದಿಗೆ ದಂಪತಿ ಇರುವ ಫೋಟೋ ಹರಿಬಿಟ್ಟಿರುವ ಶರಪೋವಾ, "ನಮ್ಮ ಪುಟ್ಟ ಕುಟುಂಬದ ಅತ್ಯಂತ ಸುಂದರವಾದ, ಸವಾಲಿನ ಮತ್ತು ಲಾಭದಾಯಕ ಉಡುಗೊರೆ ಇದಾಗಿದೆ" ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ, ಮಗುವಿಗೆ 'ಥಿಯೋಡೋರ್' ಎಂದು ನಾಮಕರಣ ಮಾಡಲಾಗಿದ್ದು, 1 ಜುಲೈ 2022 ರಂದು ಜನಿಸಿದ್ದಾನೆ ಎಂದು ರೋಮನ್ ಅಂಕಿಯಲ್ಲಿ ದಿನಾಂಕವನ್ನು ನಮೂದಿಸಿದ್ದಾರೆ.