ಭೋಪಾಲ್, ಮಧ್ಯಪ್ರದೇಶ:ಗುರುವಾರ ಭೋಪಾಲ್‌ನ ಮಧ್ಯಪ್ರದೇಶ ಅಕಾಡೆಮಿಯಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಆಯ್ಕೆ ಟ್ರಯಲ್ಸ್‌ನಲ್ಲಿ ಮನು ಭಾಕರ್ 31-29 ರಿಂದ ಚಿಂಕಿ ಯಾದವ್ ಅವರನ್ನು ಸೋಲಿಸಿ ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದರು. ಅರ್ಹತಾ ಟಾಪರ್ ರಿದಮ್ ಸಾಂಗ್ವಾನ್ (583) ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಸೆಮಿಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನೇಹಾ ನಾಲ್ಕನೇ ಸ್ಥಾನ ಪಡೆದರು. ಮತ್ತು ಚಿಂಕಿ ಯಾದವ್ ಆರನೇ ಸ್ಥಾನಕ್ಕೆ ಕುಸಿದರು.
ಭಾರತದ ಶೂಟರ್ ಮನು ಭಾಕರ್ ಅವರು ರಾಷ್ಟ್ರೀಯ ರೈಫಲ್/ಪಿಸ್ತೂಲ್ ಆಯ್ಕೆ ಟ್ರಯಲ್ಸ್ (3 ಮತ್ತು 4) ಆರಂಭಿಕ ದಿನದಂದು ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ದಿನದ ಇತರ ವಿಜೇತರಲ್ಲಿ ಅರ್ಜುನ್ ಬಾಬುತಾ (ಪುರುಷರ 10 ಮೀ ಏರ್ ರೈಫಲ್) ಮತ್ತು ಆಶಿ ಚೋಕ್ಸಿ (ಮಹಿಳೆಯರ 50 ಮೀ ರೈಫಲ್ 3 ಸ್ಥಾನಗಳು) ಸೇರಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಪ್ರಮುಖ ಸ್ಪರ್ಧೆಗಳಿಗೆ ಭಾರತೀಯ ತಂಡದ ಆಯ್ಕೆಯ ದೃಷ್ಟಿಯಿಂದ ಈ ಸ್ಪರ್ಧೆಗಳು ಬಹಳ ಮುಖ್ಯವಾಗಿದೆ. ಅಷ್ಟೇ ಅಲ್ಲ ಜೂನಿಯರ್ ವಿಶ್ವಕಪ್ ಮತ್ತು ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ತಂಡಗಳ ಸ್ಥಾನಕ್ಕಾಗಿ ಕಿರಿಯರು ಪೈಪೋಟಿ ನಡೆಸುತ್ತಾರೆ.
ಮನು ಭಾಕರ್ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚಿಂಕಿ ಯಾದವ್ ಅವರನ್ನು 31-29 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಮನು ಭಾಕರ್ ಅವರು ಮಧ್ಯಪ್ರದೇಶ ರಾಜ್ಯ ಶೂಟಿಂಗ್ ಅಕಾಡೆಮಿ ರೇಂಜ್‌ನಲ್ಲಿ ನಡೆದ ವಿಶ್ವಕಪ್ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.
ನೇಹಾ ಅವರನ್ನು ಶೂಟ್ ಆಫ್‌ನಲ್ಲಿ ಸೋಲಿಸಿ ರಿದಮ್ ಸಾಂಗ್ವಾನ್ ಕಂಚಿನ ಪದಕ ಗೆದ್ದರು. ಭಾಕರ್ (580) ಗಿಂತ ರಿದಮ್ 583 ರೊಂದಿಗೆ ಅರ್ಹತಾ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದರು, ಚಿಂಕಿ 577 ಅಂಕದೊಂದಿಗೆ ಆರನೇ ಸ್ಥಾನದಲ್ಲಿ ಅರ್ಹತೆ ಪಡೆದರು.
ಪುರುಷರ 10 ಮೀಟರ್ ಏರ್ ರೈಫಲ್ ಟಿ3 ಸ್ಪರ್ಧೆಯಲ್ಲಿ ಪಂಜಾಬ್‌ನ ಬಾಬುತಾ ಅವರು ರೈಲ್ವೇಸ್‌ನ ಅಖಿಲ್ ಶೆರಾನ್ ಅವರನ್ನು 16-6 ರಿಂದ ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಇಬ್ಬರೂ ರ್‍ಯಾಂಕಿಂಗ್ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದು ಶೂಟೌಟ್ ಕೊನೆಯಘಟ್ಟಕ್ಕೆ ತಲುಪಿದ್ದರು. ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್‌ನಲ್ಲಿ ಚೋಕ್ಸಿ 16-10 ಅಂಕಗಳ ಪಡೆದು ಒಡಿಶಾದ ಶ್ರೀಯಾಂಕಾ ಸದಂಗಿ ಅವರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.
ಓದಿ:IPL 2023: ಶುಭಮನ್ ಗಿಲ್ ಅರ್ಧಶತಕ: ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ಗೆ 6 ವಿಕೆಟ್ಗಳ ಗೆಲುವು
ಡೈಮಂಡ್ ಲೀಗ್ 2023 ರ ಸೀಸನ್ 5 ಮೇ 2023 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯನ್ನು ದೋಹಾದ ಕತಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ. ಈ ಲೀಗ್‌ನ ಅಂತಿಮ ಪಂದ್ಯವು 16-17 ಸೆಪ್ಟೆಂಬರ್ 2023 ರಂದು ಯುಎಸ್‌ಎಯ ಯುಜೀನ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಭಾರತದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಈ ಟೂರ್ನಿಯಿಂದ ತಮ್ಮ ಕ್ಷೇತ್ರಕ್ಕೆ ಮರಳಲಿದ್ದಾರೆ. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೇ 5 ರಂದು ದೋಹಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ನೀರಜ್ ಸ್ಟಾರ್-ಸ್ಟಡ್ ಡೈಮಂಡ್ ಲೀಗ್ ಈವೆಂಟ್‌ನೊಂದಿಗೆ ಸೀಸನ್ ಅನ್ನು ಪ್ರಾರಂಭಿಸುತ್ತಾರೆ. ನೀರಜ್ ಜಾವೆಲಿನ್ ಎಸೆತದಲ್ಲಿ 90 ಮೀಟರ್ ದೂರವನ್ನು ಇನ್ನೂ ದಾಟಲು ಸಾಧ್ಯವಾಗಿಲ್ಲ.