ಚಂಡೀಗಢ: ರಾಂಚಿಯಲ್ಲಿ ನಡೆಯುತ್ತಿರುವ 10ನೇ ರಾಷ್ಟ್ರೀಯ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ ಅಥ್ಲೀಟ್ ಮಂಜು ಇಂದು 35 ಕಿಮೀ ನಡಿಗೆಯನ್ನು 2:57:54 ಸಮಯದಲ್ಲಿ ಮುಗಿಸಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಮಾನ್ಸಾ ಜಿಲ್ಲೆಯ ಖೈರಾ ಖುರ್ದ್ ಗ್ರಾಮದ ಅಥ್ಲೀಟ್ ಮಂಜು ಕೂಡ ಈ ವರ್ಷದ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಹೊಸ ರಾಷ್ಟ್ರೀಯ ದಾಖಲೆ: ರಾಷ್ಟ್ರೀಯ ನಡಿಗೆ ಚಾಂಪಿಯನ್‌ಶಿಪ್‌ನಲ್ಲಿ ಅಕ್ಷದೀಪ್ ಸಿಂಗ್ ಅವರ ಸಾಧನೆ ಮತ್ತು ಅಥ್ಲೀಟ್ ಮಂಜು ಅವರು ಇಂದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಕ್ಕಾಗಿ ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀತ್ ಹರೆ ಅವರನ್ನು ಅಭಿನಂದಿಸಿದರು. ಏಷ್ಯನ್ ಕ್ರೀಡಾಕೂಟಕ್ಕೆ ಮಂಜು ಅವರು ಆಯ್ಕೆ ಆಗಿರುವುದಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ, ನಿನ್ನೆ ಹೊಸ ರಾಷ್ಟ್ರೀಯ ದಾಖಲೆ ಮಾಡುವ ಮೂಲಕ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಅಕ್ಷದೀಪ್ ಸಿಂಗ್ ಮತ್ತು ಅವರ ತಂದೆ ಗುರ್ಜಂತ್ ಸಿಂಗ್ ಅವರನ್ನು ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀತ್ ಹರೆ ಅಭಿನಂದಿಸಿದರು. ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಕ್ಕೆ ಶುಭ ಹಾರೈಸಿದರು.
ಕ್ರೀಡಾ ಪಟುಗಳಿಗೆ ಗೌರವ:ಏಷ್ಯನ್ ಮತ್ತು ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧರಾಗಲು ಪಂಜಾಬ್ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯವನ್ನು ನೀಡುವಿದಾಗಿ ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀತ್ ಹರೆ ಕ್ರೀಡಾಪಟುಗಳಿಗೆ ಭರವಸೆ ನೀಡಿದರು. ಶೀಘ್ರದಲ್ಲೇ ಗೆದ್ದ ಎಲ್ಲಾ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಭಗವಂತ ಮಾನ್ ಅವರಿಂದ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಹೇಳಿದರು. ಕ್ರೀಡಾ ಸಚಿವರು ಇದೇ ಶನಿವಾರ ಕಹ್ನಕೆ ಗ್ರಾಮಕ್ಕೆ ಆಗಮಿಸಿ ಖುದ್ದು ಅಭಿನಂದಿಸುವುದಾಗಿ ತಿಳಿಸಿದರು.