ಕರ್ನಾಟಕ

karnataka

ETV Bharat / sports

ಹರಿಯಾಣ ಸ್ಟೀಲರ್ಸ್​ ಬೇಟೆಯಾಡಿದ ಬೆಂಗಾಲ್​ ವಾರಿಯರ್ಸ್

ಪ್ರೊ ಕಬಡ್ಡಿ ಲೀಗ್​ನ 7 ನೇ ಆವೃತ್ತಿಯ 97 ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ಮಣೀಂದರ್​ ಸಿಂಗ್​ ಅವರ ಭರ್ಜರಿ ರೈಡಿಂಗ್​ ನೆರವಿನಿಂದ ಹರಿಯಾಣ ಸ್ಟೀಲರ್ಸ್​ ವಿರುದ್ಧ 48-36 ಅಂಕಗಳ ಅಂತರದಿಂದ ಬಗ್ಗು ಬಡಿದಿದೆ.

PKL 2019

By

Published : Sep 19, 2019, 11:13 PM IST

ಪುಣೆ: ಪ್ರೊ ಕಬಡ್ಡಿ ಲೀಗ್​ನ 7 ನೇ ಆವೃತ್ತಿಯ 97 ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ಮಣೀಂದರ್​ ಸಿಂಗ್​ ಅವರ ಭರ್ಜರಿ ರೈಡಿಂಗ್​ ನೆರವಿನಿಂದ ಹರಿಯಾಣ ಸ್ಟೀಲರ್ಸ್​ ವಿರುದ್ಧ 48-36 ಅಂಕಗಳ ಅಂತರದಿಂದ ಬಗ್ಗು ಬಡಿದಿದೆ.

ಪುಣೆಯ ಶ್ರೀ ಛತ್ರಪತಿ ಕುಸ್ತಿ ಅಂಗಳದಲ್ಲಿ ನಡೆದ ಲೀಗ್​ 97ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಹರಿಯಾಣ ವಿರುದ್ಧ ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾಯಿತು. ಇದರ ಫಲ ಮೊದಲಾರ್ಧದಲ್ಲೇ 30-14 ರ ಮುನ್ನಡೆ ಸಾಧಿಸಿತು. ಅಲ್ಲದೆ ಹರಿಯಾಣ ತಂಡವನ್ನು 2 ಬಾರಿ ಆಲೌಟ್​ ಮಾಡಿತು.

ದ್ವಿತೀಯಾರ್ಧದಲ್ಲಿ ಸ್ಟೀಲರ್ಸ್​ ತಿರುಗಿ ಬೀಳುವ ಮುನ್ಸೂಚನೆ ನೀಡಿತ್ತಾದರೂ ಬೆಂಗಾಲ್​ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರಿಂದ ಹರಿಯಾಣ​ ಸೋಲೊಪ್ಪಿಕೊಳ್ಳಬೇಕಾಯಿತು. ಆದರೆ ದ್ವಿತೀಯಾರ್ಧದಲ್ಲಿ ಹರಿಯಾಣ 22 ಅಂಕ ಪಡೆದರೆ, ಬೆಂಗಾಲ್​ 18 ಅಂಕ ಪಡೆಯಿತು. ಎರಡೂ ತಂಡಗಳು ಒಮ್ಮೆ ಅಲೌಟ್​ ಆದವು.

ಬೆಂಗಾಲ್​ ಪರ ಭರ್ಜರಿ ರೈಡಿಂಗ್​ ನಡೆಸಿದ ಮಣೀಂದರ್​ ಸಿಂಗ್​ 18 ಅಂಕ ಪಡೆದರೆ, ಮತ್ತೊಬ್ಬ ರೈಡರ್​ ಪ್ರಪಂಜನ್​ 7 ಆಂಕ ಪಡೆದರು. ಬಲ್ದೇವ್​ ಸಿಂಗ್​ 6, ಮೊಹಮ್ಮದ್​ ನಬೀಬಕ್ಷ್​ 5 ರಿಂಕು ನರ್ವಾಲ್​ 3, ಜೀವಾಕುಮಾರ್​ 2 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸ್ಟೀಲರ್ಸ್​ ಪರ ವಿನಯ್​ 14, ವಿಕಾಶ್​ ಕಂಡೋಲಾ 9, ವಿಕಾಶ್​ ಕಾಳೆ 3, ರವಿಕುಮಾರ್​ 2, ಪ್ರಶಾಂತ್​ ಕುಮಾರ್​ 1 ಅಂಕಪಡೆದರು. ರೈಡಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಡಿಫೆಂಡಿಗ್​ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದೆ ಹರಿಯಾಣ ಸೋಲಿಗೆ ಕಾರಣವಾಯಿತು.

ABOUT THE AUTHOR

...view details