ನವದೆಹಲಿ: ಪ್ರಭಾತ್ ಕೋಲಿ ಭಾರತದ ಅತ್ಯಂತ ಯಶಸ್ವಿ ದೂರದ ತೆರೆದ ನೀರಿನ ಈಜುಗಾರ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಸಮುದ್ರದ ಅಪಾಯಕಾರಿ ಅಲೆಗಳ ವಿರುದ್ಧ ಅವರು ಮತ್ತೆ ಈಜಿ ಇನ್ನೊಂದು ಸಾಧನೆಯನ್ನು ಮಾಡಿದ್ದಾರೆ. ಕಿರಿಯ ವಯಸ್ಸಿನಲ್ಲಿ ಓಷನ್ ಸೆವೆನ್ ಚಾಲೆಂಜ್ನಲ್ಲಿ ಭಾಗವಹಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಸಂಪೂರ್ಣಗೊಳಿಸಿ ಮತ್ತೆ ಅತ್ಯಂತ ಯಶಸ್ವಿ ಈಜುಗಾರರಾಗಿದ್ದಾರೆ.
ಪ್ರಭಾತ್ ನ್ಯೂಜಿಲ್ಯಾಂಡ್ನ ಕುಕ್ ಜಲಸಂಧಿಯಲ್ಲಿ ಈಜಿ ಸಾಧನೆ ಮಾಡಿದ್ದಾರೆ. ಅವರು 26 ಕಿಲೋಮೀಟರ್ ಉದ್ದದ ಕುಕ್ ಸ್ಟ್ರೈಟ್ ಚಾನಲ್ ಅನ್ನು 8 ಗಂಟೆ 41 ನಿಮಿಷಗಳಲ್ಲಿ ಸ್ವಿಮ್ ಮಾಡಿದ್ದಾರೆ. ಓಷನ್ಸ್ ಸೆವೆನ್ ಒಂದು ತೆರೆದ ನೀರಿನ ಈಜು ಸವಾಲಾಗಿದೆ. ವಿಶ್ವದ ಕೆಲವೇ ಈಜುಗಾರರು ಇದನ್ನು ಸಾಧಿಸಲು ಸಮರ್ಥರಾಗಿದ್ದಾರೆ.
ಓಷಿಯನ್ ಸೆವೆನ್‌ನಲ್ಲಿ ಏಳು ಕಣಿವೆಗಳಿವೆ. ಉತ್ತರ ಚಾನಲ್ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವೆ 34 ಕಿಲೋಮೀಟರ್ ಉದ್ದವಿದೆ. ಕುಕ್ ಸ್ಟ್ರೈಟ್ ಚಾನಲ್ ನ್ಯೂಜಿಲ್ಯಾಂಡ್ನ ಉತ್ತರ ಮತ್ತು ದಕ್ಷಿಣ ದ್ವೀಪಗಳ ನಡುವೆ ಇದೆ, ಇದು 26 ಕಿಲೋಮೀಟರ್ ಉದ್ದವಿದೆ. ಮೊಲೊಕೈ ಮತ್ತು ಒವಾಹು ನಡುವೆ ಮೊಲೊಕೈ ಚಾನಲ್ ಇದೆ, ಇದು 44 ಕಿಲೋಮೀಟರ್ ಉದ್ದವಾಗಿದ್ದು, ಇದು ಸೆವೆನ್ ಕಣಿವೆಗಳಲ್ಲಿ ಅತ್ಯಂತ ದೊಡ್ಡದಾಗಿದೆ.
ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ಇರುವ ಇಂಗ್ಲಿಷ್ ಚಾನೆಲ್ 34 ಕಿಲೋಮೀಟರ್ ಉದ್ದವಿದೆ. ಕ್ಯಾಟಲಿನಾ ಚಾನಲ್ ಸಾಂಟಾ ಕ್ಯಾಟಲಿನಾ ದ್ವೀಪ ಮತ್ತು ಕ್ಯಾಲಿಫೋರ್ನಿಯಾ ನಡುವೆ 32 ಕಿಲೋಮೀಟರ್ ಉದ್ದವಿದೆ. ಜಪಾನ್‌ನ ಟ್ಸುಗರು ಜಲಸಂಧಿಯು ಹೊನ್ಶು ಮತ್ತು ಹೊಕ್ಕೈಡೊ ನಡುವೆ 20 ಕಿಲೋಮೀಟರ್ ಉದ್ದವಿದೆ. ಜಿಬ್ರಾಲ್ಟರ್ ಜಲಸಂಧಿ ಸ್ಪೇನ್ ಮತ್ತು ಮೊರಾಕೊ ನಡುವೆ ಇದೆ. ಇದು 16 ಕಿಲೋಮೀಟರ್ ಉದ್ದದ ಚಿಕ್ಕ ಚಾನಲ್ ಆಗಿದೆ.
ಪ್ರಭಾತ್ ಕೋಲಿ ಈಜಿನ ಬಗ್ಗೆ ಬರೆದುಕೊಂಡಿದ್ದು, "ಕುಕ್ ಸ್ಟ್ರೈಟ್ ಪಟ್ಟಿಯಿಂದ ಹೊರಗಿದೆ! ನಾನು ನ್ಯೂಜಿಲ್ಯಾಂಡ್ನ ಕುಕ್ ಸ್ಟ್ರೈಟ್ ಅನ್ನು 8 ಗಂಟೆ ಮತ್ತು 41 ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಕೆಟ್ಟ ಹವಾಮಾನ ಇದ್ದರೂ ಈಜನ್ನು ಪೂರ್ಣಗೊಳಿಸಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೆ! ಆದರೆ, ಈಜುವ ನಡುವೆ ಬಿರುಸಿನ ಗಾಳಿ ಎದುರಾಗಿತ್ತು, ಅದನ್ನೂ ಮೀರಿ ಈಜಿದೆ. ಪ್ರಾರಂಭದಲ್ಲಿ ಹವಾಮಾನವು ಅದ್ಭುತವಾಗಿತ್ತು! ಆದರೆ, ಜಲಸಂಧಿಯಲ್ಲಿ 3-4 ಗಂಟೆಗಳ ನಂತರ, ಗಾಳಿಯು 30knts ವೇಗದಲ್ಲಿ ಅಡ್ಡಲಾಗಿ ಹೋಗುತ್ತಿತ್ತು ಮತ್ತು ಅಲೆಗಳು ನನ್ನ ಸುತ್ತಲೂ ಎಸೆಯುವಂತೆ ಅನುಭವಕ್ಕೆ ಬರುತ್ತಿತ್ತು. ಹೇಗೋ ನಂತರ 8 ಗಂಟೆ 41 ನಿಮಿಷಗಳಲ್ಲಿ ಮುಗಿಸಲು ಸಾಧ್ಯವಾಯಿತು ಮತ್ತು ಅಲ್ಲಿ ನಾನು ನಮ್ಮ ಭಾರತೀಯ ಧ್ವಜದೊಂದಿಗೆ ಹೆಮ್ಮಯಿಂದ ನಿಲ್ಲಲು ಸಾಧ್ಯವಾಯಿತು" ಎಂದು ಬರೆದಿದ್ದಾರೆ.
2008 ರಲ್ಲಿ ಓಷನ್ ಸೆವೆನ್ ಮ್ಯಾರಥಾನ್ ಚಾಲೆಂಜ್ ಆರಂಭಿಸಲಾಗುದ್ದು, ಏಳು ಚಾನಲ್‌ಗಳಲ್ಲಿ ಈಜುವ ಸ್ಪರ್ಧೆ ಇದಾಗಿರುತ್ತದೆ. ಓಶಿಯನ್ಸ್ ಸೆವೆನ್ ಚಾಲೆಂಜ್ ಇಂಗ್ಲಿಷ್ ಚಾನೆಲ್ (ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ), ನಾರ್ಥ್ ಚಾನಲ್ (ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವೆ), ಜಿಬ್ರಾಲ್ಟರ್ ಜಲಸಂಧಿ (ಸ್ಪೇನ್ ಮತ್ತು ಮೊರಾಕೊ ನಡುವೆ), ಕ್ಯಾಟಲಿನಾ ಚಾನೆಲ್ (ಸಾಂಟಾ ಕ್ಯಾಟಲಿನಾ ದ್ವೀಪ ಮತ್ತು ಕ್ಯಾಲಿಫೋರ್ನಿಯಾ ನಡುವೆ), ಮೊಲೊಕೈ ಚಾನೆಲ್ (ಮೊಲೊಕೈ ಮತ್ತು ಒವಾಹು, ಹವಾಯಿ ನಡುವೆ), ತ್ಸುಗರು ಜಲಸಂಧಿ (ಹೊನ್ಶು ಮತ್ತು ಹೊಕ್ಕೈಡೊ, ಜಪಾನ್ ನಡುವೆ) ಮತ್ತು ಕುಕ್ ಜಲಸಂಧಿ (ನ್ಯೂಜಿಲೆಂಡ್‌ನ ಉತ್ತರ ಮತ್ತು ದಕ್ಷಿಣ ದ್ವೀಪಗಳ ನಡುವೆ).
ಇದನ್ನೂ ಓದಿ:WTC 2023: ಅಧಿಕ ರನ್ ಗಳಿಸಿದ ಬ್ಯಾಟರ್ ರೂಟ್, ಭಾರತಕ್ಕೆ ಆಸಿಸ್ ಸರಣಿ ಅಂತಿಮ ಟೆಸ್ಟ್ ನಿರ್ಣಾಯಕ