ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮಧ್ಯದಲ್ಲಿಯೇ ಒಲಿಂಪಿಕ್ ಕಂಚಿನ ಪದಕ ವಿಜೇತೆ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಎದ್ದು ಹೋಗಿದ್ದಾರೆ. ಬಳಿಕ ಅವರು ಯಾವುದೇ ವಾಹನಗಳು ಇಲ್ಲದೇ ಸುಮಾರು ಒಂದು ಗಂಟೆ ಕಾಲ ಕಾಯಬೇಕಾಯಿತು. ಲೊವ್ಲಿನಾ, ಭಾರತೀಯ ಬಾಕ್ಸಿಂಗ್ ತಂಡದ ಮತ್ತೊಬ್ಬ ಸದಸ್ಯ ಮುಹಮ್ಮದ್ ಹುಸಾಮುದ್ದೀನ್ ಜೊತೆಗೆ ಅಲೆಕ್ಸಾಂಡರ್ ಸ್ಟೇಡಿಯಂನಿಂದ 30 ನಿಮಿಷಗಳ ಮುಂಚೆಯೇ ಡ್ರೈವ್‌ನಿಂದ ಗೇಮ್ಸ್ ವಿಲೇಜ್‌ಗೆ ಬೇಗನೆ ಹೊರಡಲು ನಿರ್ಧರಿಸಿ, ಎದ್ದು ಹೋಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೊವ್ಲಿನಾ, ನಮಗೆ ಬೆಳಗ್ಗೆ ಪಂದ್ಯವಿತ್ತು, ಹಾಗಾಗಿ ತರಬೇತಿ ಪಡೆಯಬೇಕಾಗಿತ್ತು. ಸಮಾರಂಭವು ಇನ್ನೂ ತುಂಬಾ ಹೊತ್ತು ಇತ್ತು. ಆದ್ದರಿಂದ ನಾವು ಹೊರಡಲು ನಿರ್ಧರಿಸಿದೆವು. ನಾವು ಟ್ಯಾಕ್ಸಿಯನ್ನು ಕೇಳಿದೆವು, ಆದರೆ ಅದು ಸಿಗಲಿಲ್ಲ ಎಂದು ಅವರು ಹೇಳಿದರು.
ಭಾರತದ ಬಾಕ್ಸಿಂಗ್ ಫೆಡರೇಶನ್ (BFI) ಉಪಾಧ್ಯಕ್ಷರಾಗಿರುವ ಭಾರತದ ಚೆಫ್ ಡಿ ಮಿಷನ್ ರಾಜೇಶ್ ಭಂಡಾರಿ ಅವರು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ. ನಾವು ಸಮಾರಂಭದ ಮಧ್ಯದಲ್ಲಿದ್ದೆವು. ಅವರು ಇನ್ನೊಬ್ಬ ಬಾಕ್ಸರ್ ಬೇಗನೆ ಹೋದಲು ಎಂದು ನನಗೆ ನಂತರ ತಿಳಿಯಿತು.