ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ 2020 ರ ಮಹಿಳಾ ವಿಭಾಗದ 64-69 ಕೆ.ಜಿ ವಿಭಾಗದಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ, ಸೆಮಿಫೈನಲ್ ತಲುಪಿದ್ದಾರೆ.
Tokyo Olympics: ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ರಚಿಸಿದ ಬಾಕ್ಸರ್ 'ಲವ್ಲಿ'ನಾ.. ಹುಟ್ಟೂರಲ್ಲಿ ಸಂಭ್ರಮ! - ಟೋಕಿಯೋ ಒಲಿಂಪಿಕ್ಸ್ 2020,
ಟೋಕಿಯೋ ಒಲಿಂಪಿಕ್ಸ್ನ ಬಾಕ್ಸಿಂಗ್ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಅವರನ್ನು ಸೋಲಿಸುವ ಮೂಲಕ ಭಾರತದ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಇನ್ನೊಂದು ಪದಕ ಬರುವುದನ್ನ ಪಕ್ಕಾ ಮಾಡಿದ್ದಾರೆ. ಇನ್ನು ಲವ್ಲಿನಾ ಹುಟ್ಟೂರಿನಲ್ಲಿ ವಿಜಯೋತ್ಸವ ನಡೆಯುತ್ತಿದೆ.
ಮಾಜಿ ವಿಶ್ವ ಚಾಂಪಿಯನ್ ತೈಪೆ ಚೀನಾದ ಚೆನ್ ನಿಯಾನ್-ಚಿನ್ ಅವರನ್ನು ಸೋಲಿಸಿದ ಬೊರ್ಗೊಹೈನ್ 4-1 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಐದು ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಲವ್ಲಿನಾ ಎದುರಾಳಿಗೆ ಭರ್ಜರಿ ಪಂಚ್ ನೀಡಿ ತೀರ್ಪುಗಾರರ ಮನ ಗೆಲ್ಲುವಲ್ಲಿ ಸಫಲರಾದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಅವರು ಭಾರತ ಪರ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಒಲಿಂಪಿಕ್ಸ್ನ ಬಾಕ್ಸಿಂಗ್ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಸೆಮಿ ಫೈನಲ್ ತಲುಪಿದ್ದರಿಂದ ಅಸ್ಸೋಂನ ಸರುಪಥಾರ್ ಗ್ರಾಮ ಮತ್ತು ಗ್ರಾಮದ ಸುತ್ತ-ಮುತ್ತಲಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಕುಣಿದು ಕುಪ್ಪಳಿಸಿದ್ದಾರೆ.