ನವದೆಹಲಿ:ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ಸಾವಿರಾರು ಯುವಕರು ಬಾಕ್ಸಿಂಗ್ನತ್ತ ಆಸಕ್ತಿವಹಿಸುವಂತೆ ಮಾಡಿದ ವಿಜೇಂದರ್ ಸಿಂಗ್ ತಮ್ಮ ಹೆಮ್ಮೆಯ ಪ್ರತೀಕವಾಗಿದ್ದ ಒಲಿಂಪಿಯನ್ ಎಂಬ ಐಡೆಂಟಿಟಿಯನ್ನೇ ತೆಗೆದುಹಾಕಿದ್ದಾರೆ. ದಿನವೂ ಜೀವನದಲ್ಲಿ ಹೊಸ ಪಾಠವಿದ್ದಂತೆ ಹಾಗಾಗಿ ಹಳೆಯ ಸಾಧನೆಗೆ ಹಂಟಿ ಕೂರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
"ನೀವು ಒಂದು ಐಡೆಂಟಿಟಿ ಪಡೆಯುವುದು ಒಂದು ಬೆಳವಣಿಗೆ. ಇವೆಲ್ಲವೂ ಸಮಯ ಮತ್ತು ಜವಾಬ್ದಾರಿಯೊಂದಿಗೆ ಬರುತ್ತದೆ. ಜೀವನವೂ ನಿತ್ಯವೂ ಪಾಠವಾಗಿರುತ್ತದೆ. ಆದರೆ, ಹಿಂದಿನ ಸಾಧನೆಗಳು ಕೆಲವು ಸಂದರ್ಭದಲ್ಲಿ ಯಾವುದೇ ಅಪ್ರಸ್ತುತ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪಿಟಿಐ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ಗೆ ಒಂದು ತಿಂಗಳ ಸಮಯವಿದೆ. ಇಡೀ ವಿಶ್ವವೇ ಒಲಿಂಪಿಕ್ಸ್ ದಿನಾಚರಣೆ ಮಾಡುತ್ತಿದೆ. ಆದರೆ, ಬಾಕ್ಸಿಂಗ್‌ನಲ್ಲಿ ದೇಶದ ಮೊದಲ ಒಲಿಂಪಿಕ್ ಪದಕ ಪಡೆದು ಭಾರತೀಯ ಕ್ರೀಡೆಗಳಲ್ಲೇ ಅತ್ಯಂತ ಅಪ್ರತಿಮ ಸಾಧನೆ ಮಾಡಿರುವ ವಿಜೇಂದರ್ ಸಿಂಗ್ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಒಲಿಂಪಿಯನ್ ಎಂಬ ಗುರುತು ತೆಗೆದಿದ್ದಾರೆ.
ಅವು ಸುವರ್ಣ ದಿನಗಳು, ನಾವು ನಿರಾತಂಕದಿಂದ , ಜವಾಬ್ದಾರಿಗಳಿಲ್ಲದೇ ಇದ್ದೆವು. ನಮ್ಮ ತರಬೇತಿ, ಆಹಾರ ಪದ್ದತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕೆಲವು ಸ್ನೇಹಿತರನ್ನು ಹೊಂದಿದ್ದು ಎಂದು 35 ವರ್ಷದ ವಿಜೇಂದರ್ ತಮ್ಮ ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದ ನೆನಪುಗಳನ್ನು ಹಂಚಿಕೊಂಡರು.
ನಾನು ತುಂಬಾ ಒಳ್ಳೆಯ ಒಲಿಂಪಿಕ್ಸ್ ದಿನಗಳನ್ನು ಹೊಂದಿದ್ದೇನೆ. ಬೀಜಿಂಗ್ನಲ್ಲಿ ನಾನು ಉತ್ತಮ ಪ್ರದರ್ಶನ ತೋರಿದ್ದೆ, ಆದರೆ ಅದೃಷ್ಟವಶಾತ್ ನಾನು ಕಂಚಿನ ಪದಕ ಪಡೆದೆ. ಅದರ ಜೊತೆಯಲ್ಲಿ ನಾನು ಭಾರತೀಯ ಬಾಕ್ಸಿಂಗ್ಗೆ ನನ್ನಿಂದಾದ ಕೊಡುಗೆ ನೀಡಿದೆ. ಇದು ಎಲ್ಲರಿಗೂ ಒಳ್ಳೆಯದಾಗಿದೆ ಎಂದು ನಾನು ಭಾವಿಸುತ್ತೇನೆ.