ಕರ್ನಾಟಕ

karnataka

ETV Bharat / sports

ಆಲ್​​ ಇಂಗ್ಲೆಂಡ್​ ಚಾಂಪಿಯನ್​ಶಿಪ್​​​​: ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಲಕ್ಷ್ಯ ಸೇನ್, ತ್ರಿಶಾ-ಗಾಯತ್ರಿ ಜೋಡಿ

ಭಾರತದ ಯುವ ಶಟ್ಲರ್​​ ಲಕ್ಷ್ಯ ಸೇನ್ ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​​ನಲ್ಲಿ ಸೆಮಿಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದು, ಇವರ ಜೊತೆಗೆ ಮಹಿಳಾ ಡಬಲ್ಸ್​​ನಲ್ಲಿ ತ್ರಿಶಾ-ಗಾಯತ್ರಿ ಜೋಡಿ ಕೂಡ ಪ್ರವೇಶ ಪಡೆದುಕೊಂಡಿದೆ.

Lakshya Sen enters semifinals
Lakshya Sen enters semifinals

By

Published : Mar 18, 2022, 7:23 PM IST

Updated : Mar 18, 2022, 8:28 PM IST

ಬರ್ಮಿಂಗ್​ಹ್ಯಾಮ್​: ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​​ನ ಕ್ವಾರ್ಟರ್​​ಫೈನಲ್​ ಪಂದ್ಯದಲ್ಲಿ ಲಕ್ಷ್ಯ ಸೇನ್​​ಗೆ ಚೀನಾದ ಲು ಗುವಾಂಗ್​ ಜು ವಾಕ್​ ವಾಕ್‌ಓವರ್ ನೀಡಿದ್ದು, ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದಾರೆ. ನಾಳೆಯ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿಲ್ ಜಿಯಾ ಮತ್ತು ಜಪಾನ್‌ನ ಸೂಪರ್‌ಸ್ಟಾರ್ ಕೆಂಟೊ ಮೊಮೊಟಾ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ನಿನ್ನೆ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ 21-16, 21-18ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರನನ್ನು ಮಣಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದರು. ಇದರ ಬೆನ್ನಲ್ಲೇ ಇಂದು ಚೀನಾದ ಎದುರಾಳಿ ವಿರುದ್ಧ ಸೆಣಸಾಟ ನಡೆಸಬೇಕಾಗಿತ್ತು. ಆದರೆ, ವಾಕ್​ ಓವರ್​​ ಸಿಕ್ಕಿರುವ ಕಾರಣ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ನಾಳೆ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮಲೇಷ್ಯಾದ ಲಿ ಝಿ ಜಿಯಾ ಅಥವಾ ಜಪಾನ್​ನ ಕೆಂಟೊ ಮೊಮೊಟಾ ವಿರುದ್ಧ ಸೆಮಿಫೈನಲ್​​ನಲ್ಲಿ ಸೆಣಸಾಟ ನಡೆಸಲಿದ್ದಾರೆ.

ಇದನ್ನೂ ಓದಿ:ಆಲ್​ ಇಂಗ್ಲೆಂಡ್ ಓಪನ್: 3ನೇ ಶ್ರೇಯಾಂಕದ ಸ್ಪರ್ಧಿಯ ಮಣಿಸಿ ಕ್ವಾ.ಫೈನಲ್​ ಪ್ರವೇಶಿಸಿದ ಲಕ್ಷ್ಯ ಸೇನ್

ಐದನೇ ಶ್ರೇಯಾಂಕದ ಭಾರತದ ಸಾತ್ವಿಕ್ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಇಂಡೋನೇಷ್ಯಾದ ಅಗ್ರ ಶ್ರೇಯಾಂಕದ ಮಾರ್ಕಸ್​​ ಮತ್ತು ಕೆವಿನ್​ ವಿರುದ್ಧ ಸೋಲು ಕಾಣುವ ಮೂಲಕ ಕ್ವಾರ್ಟರ್​​ಫೈನಲ್​​ ಪ್ರವೇಶ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್​​ ಆಲ್​ ಇಂಡಿಯಾ ಇಂಗ್ಲೆಂಡ್​​ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದು, ಪ್ರಶಸ್ತಿಗೆ ಮುತ್ತಿಕ್ಕುವ ಸಾಧ್ಯತೆ ಇದೆ.

ಮಹಿಳಾ ಡಬಲ್ಸ್​​ನಲ್ಲಿ ತ್ರಿಶಾ-ಗಾಯತ್ರಿ ಕಮಾಲ್​: ಆಲ್​ ಇಂಗ್ಲೆಂಡ್​ ಚಾಂಪಿಯನ್​​ಶಿಪ್​​ನಲ್ಲಿ ಮಹಿಳಾ ಡಬಲ್ಸ್​​ನಲ್ಲಿ ಭಾರತದ ಅನುಭವಿ ಆಟಗಾರರಾದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದಾರೆ. 46ನೇ ಶ್ರೇಯಾಂಕಿತ ಜೋಡಿ ತ್ರಿಶಾ ಮತ್ತು ಗಾಯತ್ರಿ ಮೊದಲ ಗೇಮ್‌ನಲ್ಲಿ 14-21, 22-20, 21-15 ರಿಂದ 14-21, 22-20, 21-15 ರಿಂದ ದಕ್ಷಿಣ ಕೊರಿಯಾದ ಎರಡನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಲೀ ಸೊಹೀ ಮತ್ತು ಶಿನ್ ಸೆಯುಂಗ್‌ಚಾನ್ ಜೋಡಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

Last Updated : Mar 18, 2022, 8:28 PM IST

ABOUT THE AUTHOR

...view details