ಕರ್ನಾಟಕ

karnataka

ETV Bharat / sports

IHAI 9ನೇ ರಾಷ್ಟ್ರೀಯ ಮಹಿಳಾ ಐಸ್ ಹಾಕಿ: ಲಡಾಖ್ ತಂಡಕ್ಕೆ ಚಾಂಪಿಯನ್‌ಶಿಪ್ - Kaza area of Himachal Pradesh

9 ನೇ ರಾಷ್ಟ್ರೀಯ ಮಹಿಳಾ ಐಸ್ ಹಾಕಿ ಪಂದ್ಯಾವಳಿಯಲ್ಲಿ ಲಡಾಖ್ ಮಹಿಳಾ ಐಸ್ ಹಾಕಿ ತಂಡ ಚಾಂಪಿಯನ್‌ ಶಿಪ್ ಗೆದ್ದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Jan 22, 2022, 7:15 AM IST

ಶಿಮ್ಲಾ( ಹಿಮಾಚಲ ಪ್ರದೇಶ):ಐಸ್ ಹಾಕಿ ಅಸೋಸಿಯೇಷನ್ ಆಫ್ ಇಂಡಿಯಾ (IHAI) ಆಯೋಜಿಸಿದ್ದ 9 ನೇ ರಾಷ್ಟ್ರೀಯ ಮಹಿಳಾ ಐಸ್ ಹಾಕಿ ಪಂದ್ಯಾವಳಿಯಲ್ಲಿ ಲಡಾಖ್ ಮಹಿಳಾ ಐಸ್ ಹಾಕಿ ತಂಡ ಚಾಂಪಿಯನ್‌ ಶಿಪ್ ಗೆದ್ದಿದೆ.

ಜನವರಿ 15 ರಿಂದ 21ರ ವರೆಗೆ ಹಿಮಾಚಲ ಪ್ರದೇಶದ ಕಾಜಾದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ಆಯೋಜಿಸಲಾಗಿತ್ತು. ನವದೆಹಲಿ, ಲಡಾಖ್, ಹಿಮಾಚಲ ಪ್ರದೇಶ, ಚಂಡೀಗಢ, ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌) ಮತ್ತು ತೆಲಂಗಾಣದಿಂದ ಒಟ್ಟು ಆರು ಮಹಿಳಾ ಐಸ್ ಹಾಕಿ ತಂಡಗಳು ಭಾಗವಹಿಸಿದ್ದವು ಎಂದು ಹಿಮಾಚಲ ಪ್ರದೇಶದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆರ್.ಕೆ ಮಾಥುರ್ ಮತ್ತು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಲಡಾಖ್ ಕಾರ್ಯದರ್ಶಿ ರವೀಂದ್ರ ಕುಮಾರ್ ವಿಜೇತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:IPL 2022: ಹಾರ್ದಿಕ್ ಪಾಂಡ್ಯಗೆ ಅಹಮದಾಬಾದ್ ಫ್ರಾಂಚೈಸಿ ನಾಯಕತ್ವ

ABOUT THE AUTHOR

...view details