ಕರ್ನಾಟಕ

karnataka

ETV Bharat / sports

ಖೇಲೋ ಇಂಡಿಯಾ: 22 ಚಿನ್ನ ಸೂರೆಗೈದ ಕರ್ನಾಟಕ, ಪದಕ ಪಟ್ಟಿಯಲ್ಲಿ 3ನೇ ಸ್ಥಾನ - Karnataka Performance in Khelo India

ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕರ್ನಾಟಕ, 67 ಪದಕ ಸಾಧನೆಯೊಂದಿಗೆ 3 ನೇ ಸ್ಥಾನ ಪಡೆದುಕೊಂಡಿದೆ. ಹರಿಯಾಣ, ಮಹಾರಾಷ್ಟ್ರ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ.

ಖೇಲೋ ಇಂಡಿಯಾ
ಖೇಲೋ ಇಂಡಿಯಾ

By

Published : Jun 13, 2022, 7:26 PM IST

ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕ ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಿತು. 22 ಚಿನ್ನ, 17 ಬೆಳ್ಳಿ, 28 ಕಂಚು ಸೇರಿದಂತೆ ಒಟ್ಟು 67 ಪದಕಗಳನ್ನು ರಾಜ್ಯದ ಕ್ರೀಡಾಪಟುಗಳು ಗೆದ್ದು ಬೀಗಿದ್ದಾರೆ.

ಈಜು, ಕುಸ್ತಿ, ಕಬ್ಬಡ್ಡಿ, ಖೋ ಖೋ, ಬ್ಯಾಡ್ಮಿಂಟನ್​, ಟ್ರ್ಯಾಕ್​ ರನ್ನಿಂಗ್​ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಕರ್ನಾಟಕದ ಆಟಗಾರರು ಪಾರಮ್ಯ ಮೆರೆದಿದ್ದಾರೆ. ಇದಲ್ಲದೇ, ರಾಜ್ಯದ ಖ್ಯಾತ ಕ್ರೀಡೆಯಾದ ಮಲ್ಲಗಂಬದಲ್ಲಿ ತಂಡ ಚಿನ್ನದ ಸಾಧನೆ ಮಾಡಿದೆ.

ಕರ್ನಾಟಕ ತಂಡದಲ್ಲಿ 84 ಪುರುಷರು, 110 ಮಹಿಳೆಯರು ಸೇರಿ 194 ಕ್ರೀಡಾಪಟುಗಳು ಭಾಗವಹಿಸಿದ್ದರು. ಕಳೆದ ವರ್ಷ ಅಸ್ಸೋಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ 32 ಚಿನ್ನ ಸೇರಿ ಒಟ್ಟು 80 ಪದಕಗಳೊಂದಿಗೆ 4ನೇ ಸ್ಥಾನ ಪಡೆದಿತ್ತು.

ಹರಿಯಾಣ ಪ್ರಥಮ ಸಾಧನೆ: ಹರಿಯಾಣ ಕ್ರೀಡಾಪಟುಗಳು 137 ಪದಕ ಸಾಧನೆ ಮಾಡಿದ್ದು, ಇದರಲ್ಲಿ 52 ಚಿನ್ನ, 39 ಬೆಳ್ಳಿ, 46 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ 125 ಪದಕಗಳ ಸಮೇತ 2ನೇ ಸ್ಥಾನ ಪಡೆದಿದ್ದು, 45+40+40 ಸಾಧನೆ ಮಾಡಿದೆ.

ಇದನ್ನೂ ಓದಿ:'ವಿಕೆಟ್ ಪಡೆಯುವ ಒಬ್ಬ ಬೌಲರ್ ಇಲ್ಲ': ಭಾರತದ ಕಳಪೆ ಆಟಕ್ಕೆ ಗವಾಸ್ಕರ್​ ಕಿಡಿ

ABOUT THE AUTHOR

...view details