ಕರ್ನಾಟಕ

karnataka

ETV Bharat / sports

ಖೇಲೋ ಇಂಡಿಯಾ ಕ್ರೀಡಾಕೂಟ: ಫ್ರೀಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜನ್‌ಗೆ ಚಿನ್ನ - ಈಜು ಸ್ಪರ್ಧೆಯಲ್ಲಿ ಶ್ರೀಹರಿಗೆ ಚಿನ್ನ

ಬೆಂಗಳೂರಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಚಿನ್ನದ ಬೇಟೆ ಆರಂಭಿಸಿದ್ದಾರೆ.

ಖೇಲೋ ಇಂಡಿಯಾ ಕ್ರೀಡಾಕೂಟ
ಖೇಲೋ ಇಂಡಿಯಾ ಕ್ರೀಡಾಕೂಟ

By

Published : Apr 25, 2022, 8:05 PM IST

ಬೆಂಗಳೂರು: ಖೇಲೋ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ 50 ಮೀಟರ್ ಫ್ರಿಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಜೈನ್ ವಿವಿಯ ಶ್ರೀಹರಿ ನಟರಾಜನ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ ಶ್ರೀಹರಿ ನಟರಾಜನ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ನಮ್ಮ ಸರ್ಕಾರ ಎಲ್ಲ ಪ್ರೋತ್ಸಾಹ ನೀಡುತ್ತಿದೆ. ಇವತ್ತು ಚಿನ್ನದ ಪದಕ ಗೆದ್ದಿದ್ದು, ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್​ಗೆ ಆಯ್ಕೆಯಾಗುವ ವಿಶ್ವಾಸ ಇದೆ ಎಂದು ಸಚಿವ ಡಾ.ನಾರಾಯಣಗೌಡ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಖೇಲೋ ಇಂಡಿಯಾ ಕ್ರೀಡಾಕೂಟ

ಬ್ಯಾಕ್‌ಸ್ಟ್ರೋಕ್ 200 ಮೀಟರ್‌ನಲ್ಲಿ ಅಣ್ಣಾ ವಿಶ್ವವಿದ್ಯಾಲಯದ ಧನುಷ್ ಸುರೇಶ್ ಚಿನ್ನದ ಪದಕ ಪಡೆದರೇ, 100 ಮೀಟರ್ ಸ್ಪರ್ಧೆಯಲ್ಲಿ ಜೈನ್ ವಿಶ್ವವಿದ್ಯಾಲಯದ ಶಿವ ಶ್ರೀಧರ್ ಚಿನ್ನದ ಪದಕ ಗಳಿಸಿದರು. ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಪದಕ ಪ್ರದಾನ ಮಾಡಿದರು.

ಭಾನುವಾರವಷ್ಟೇ ಈ ಕ್ರೀಡಾಕೂಟಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅಧಿಕೃತವಾಗಿ ಚಾಲನೆ ನೀಡಿದ್ದರು. ಜೊತೆಗೆ ಇದೇ ಮೊದಲ ಬಾರಿಗೆ ಮಲ್ಲಗಂಬಕ್ಕೆ ಈ ಬಾರಿ ಅವಕಾಶ ನೀಡಿರುವುದು ವಿಶೇಷ.

ಖೇಲೋ ಇಂಡಿಯಾ ಕ್ರೀಡಾಕೂಟ

(ಇದನ್ನೂ ಓದಿ: ಖೇಲೋ ಇಂಡಿಯಾಗೆ ಉಪರಾಷ್ಟ್ರಪತಿ ಚಾಲನೆ: ಮೊದಲ ಬಾರಿಗೆ ಮಲ್ಲಕಂಬಕ್ಕೆ ಅವಕಾಶ)

ABOUT THE AUTHOR

...view details