ಕರ್ನಾಟಕ

karnataka

ETV Bharat / sports

ಫೆಡರೇಷನ್​ ಕಪ್​: 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದ ಜ್ಯೋತಿ - ಈಟಿವಿ ಭಾರತ ಕನ್ನಡ

ಫೆಡರೇಷನ್​ ಕಪ್ 2023ರ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಚಿನ್ನದ ಪದಕ ಗೆದ್ದರು.

ಜ್ಯೋತಿ ಯರ್ರಾಜಿ
ಜ್ಯೋತಿ ಯರ್ರಾಜಿ

By

Published : May 18, 2023, 12:54 PM IST

ರಾಂಚಿ (ಜಾರ್ಖಂಡ್) :ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೆಡರೇಷನ್​ ಕಪ್​ 2023 ಅಥ್ಲೆಟಿಕ್ಸ್​ ಈವೆಂಟ್ಸ್​ನಲ್ಲಿ ಬುಧವಾರ ಜ್ಯೋತಿ ಯರ್ರಾಜಿ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ​12.89 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಕೂಟದಲ್ಲಿ ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅಲ್ಲದೇ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ನಿಗದಿಪಡಿಸಿದ 13.63 ಸೆಕೆಂಡ್‌ಗಳ ಏಷ್ಯನ್ ಚಾಂಪಿಯನ್‌ಶಿಪ್‌ನ ಅರ್ಹತಾ ಮಾನದಂಡವನ್ನೂ ಸಹ ಇವರು ಪುರ್ಣಗೊಳಿಸಿದರು.

ಈ ಸ್ಪರ್ಧೆಯಲ್ಲಿ ತಮಿಳುನಾಡಿನ ಆರ್.ನಿತ್ಯಾ ರಾಮರಾಜ್ 13.44 ಸೆಕೆಂಡ್ ಮತ್ತು ಜಾರ್ಖಂಡ್‌ನ ಸಪ್ನಾ ಕುಮಾರಿ 13.58 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು. ಜೂನ್ 12 ರಿಂದ 16 ರವರೆಗೆ ಬ್ಯಾಂಕಾಕ್‌ನಲ್ಲಿ ನಡೆಯಲಿರುವ 2023 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಆರ್ಹತೆ ಪಡೆದರು. ಆಂಧ್ರ ಪ್ರದೇಶದ ಅಥ್ಲೀಟ್ ಜ್ಯೋತಿ ಯರ್ರಾಜಿ 100 ಮೀ ಹರ್ಡಲ್ಸ್ ಅ​ನ್ನು ಕೇವಲ 12.82 ಸೆಕೆಂಡ್​ಗಳಲ್ಲಿ ತಲುಪುವ ಮೂಲಕ ತಮ್ಮ ಹೆಸರಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.

ಪುರುಷರ 100 ಮೀ ಹರ್ಡಲ್ಸ್‌ನಲ್ಲಿ ಮಹಾರಾಷ್ಟ್ರದ ತೇಜಸ್ ಅಶೋಕ್ ಶಿರ್ಸೆ 13.72 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಸಂಪಾದಿಸಿದರು. 2012ರಲ್ಲಿ ಸಿದ್ದಾಂತ್ ತಿಂಗಳಾಯ 13.65 ಸೆಕೆಂಡ್‌ಗಳ 100 ಮೀ ತಲುಪುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. ಮಹಿಳೆಯರ 800 ಮೀಟರ್‌ ಓಟದ ಫೈನಲ್‌ ಪಂದ್ಯ ಇಂದು ನಡೆಯಲಿದೆ.

ಉಳಿದಂತೆ, ಫೆಡರೇಶನ್ ಕಪ್ ಕೂಟದ ಮಹಿಳೆಯರ ಡಿಸ್ಕಸ್ ಥ್ರೋ ಶಾಲಿನಿ ಚೌಧರಿ 49.35 ಮೀಟರ್‌ ದೂರದವರೆಗೆ ಥ್ರೋ ಮಾಡಿ ವಿಜಯಶಾಲಿಯಾಗಿದ್ದಾರೆ. ಪುರುಷರ ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಪಂಜಾಬ್‌ನ ದಮ್ನೀತ್‌ ಸಿಂಗ್‌ 64.91 ಮೀಟರ್‌ ಥ್ರೋ ಮಾಡಿ ಮೇಲುಗೈ ಸಾಧಿಸಿದರು.

ಇದನ್ನೂ ಓದಿ:ಪ್ಲೇಆಫ್​ ರೇಸಿಂದ ಹೊರಬಿದ್ದ ಪಂಜಾಬ್​​: ದೆಹಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಗೆಲುವು

ABOUT THE AUTHOR

...view details