ಕರ್ನಾಟಕ

karnataka

ETV Bharat / sports

Asian Archery Championships: ಆರ್ಚರಿ ಸಿಂಗಲ್ಸ್​ನಲ್ಲಿ ಚಿನ್ನ, ಡಬಲ್ಸ್​ನಲ್ಲಿ ಬೆಳ್ಳಿ ಗೆದ್ದ ಜ್ಯೋತಿ ಸುರೇಖ - ಏಷ್ಯನ್​ ಆರ್ಚರಿ ಚಾಂಪಿಯನ್​ಶಿಪ್

ಕಳೆದ ಸೆಪ್ಟೆಂಬರ್​ನಲ್ಲಿ ಯಂಕ್ಟಾನ್ ವಿಶ್ವಚಾಂಪಿಯನ್​ಶಿಪ್​ನಲ್ಲಿ 3 ಬೆಳ್ಳಿ ಪದಕಗಳನ್ನು ಗೆದ್ದಿದ್ದ ಜ್ಯೋತಿ ಸುರೇಖ, ಫೈನಲ್​ನಲ್ಲಿ ಓಹ್ ಯೂಹ್ಯುನ್ ಅವರನ್ನು 146-145 ಅಂಕಗಳ ಅಂತರದಿಂದ ಮಣಿಸಿಸಿದರು. ಈ ಮುಖೇನ, ಏಷ್ಯನ್​ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದರು.

Asian Archery Championships
ಏಷ್ಯನ್ ಆರ್ಚರಿ ಚಾಂಪಿಯನ್​ಶಿಪ್ ಚಿನ್ನ ಗೆದ್ದ ಜ್ಯೋತಿ ಸುರೇಖ

By

Published : Nov 18, 2021, 5:56 PM IST

Updated : Nov 18, 2021, 6:09 PM IST

ನವದೆಹಲಿ:ಆರ್ಚರಿ (ಬಿಲ್ಲುಗಾರಿಕೆ) ವಿಶ್ವಚಾಂಪಿಯನ್​ಶಿಪ್​ನಲ್ಲಿ 3 ಬೆಳ್ಳಿ ಪದಕ ಗೆದ್ದಿದ್ದ ಜ್ಯೋತಿ ಸುರೇಖ ವೆಣ್ಣಮ್ (Jyothi Surekha Vennam) ಏಷ್ಯನ್ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ (Asian Archery Championships) ದಕ್ಷಿಣ ಕೊರಿಯಾದ ಓಹ್ ಯೂಹ್ಯುನ್ ಅವರನ್ನು ಒಂದು ಅಂಕದಿಂದ ಮಣಿಸಿ ಕಾಂಪೌಂಡ್​ ವಿಭಾಗದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದರು.

ಕಳೆದ ಸೆಪ್ಟೆಂಬರ್​ನಲ್ಲಿ ಯಂಕ್ಟಾನ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ 3 ಬೆಳ್ಳಿ ಪದಕಗಳನ್ನು ಗೆದ್ದಿದ್ದ ಜ್ಯೋತಿ ಫೈನಲ್​ನಲ್ಲಿ ಓಹ್ ಯೂಹ್ಯುನ್ ಅವರನ್ನು 146-145 ಅಂಕಗಳ ಅಂತರದಿಂದ ಮಣಿಸಿ ಏಷ್ಯನ್​ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ಗಣನೀಯ ಸಾಧನೆ ತೋರಿದ್ದಾರೆ.

ಇದಕ್ಕೂ ಮುನ್ನ ಸೆಮಿಫೈಲ್​​ನಲ್ಲಿ 2015ರ ವಿಶ್ವಚಾಂಪಿಯನ್​ ಕಿಮ್ ಯುನ್ಹೀ ವಿರುದ್ಧ ಭಾರತೀಯ ಬಿಲ್ಲುಗಾರ್ತಿ 148-143 ಅಂಕಗಳ ಅಂತರದಲ್ಲಿ ಜಯ ಸಾಧಿಸಿದ್ದರು.

ಡಬಲ್ಸ್​ನಲ್ಲಿ ಬೆಳ್ಳಿ:

ಸಿಂಗಲ್ಸ್​ನಲ್ಲಿ ಚಿನ್ನ ಗೆದ್ದ ಜ್ಯೋತಿ ವೆಣ್ಣಮ್ ಮಿಶ್ರ ಡಬಲ್ಸ್​ನಲ್ಲೂ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಜ್ಯೋತಿ ಮತ್ತು ರಿಷಭ್ ಯಾದವ್​ ಜೋಡಿ ಕೊರಿಯಾದ ಅಗ್ರ ಶ್ರೇಯಾಂಕದ ಕಿಮ್ ಯುನ್ಹೀ ಮತ್ತು ಚೋಯ್ ಯಂಗ್ಹೀ ಜೋಡಿ ವಿರುದ್ಧ 155-154 ಅಂತರದಿಂದ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಇದನ್ನೂ ಓದಿ:Mushtaq Ali Trophy: ಬೆಂಗಾಲ್ ಮಣಿಸಿ ಸೆಮಿಫೈನಲ್ಸ್ ಪ್ರವೇಶಿಸಿದ ಕರ್ನಾಟಕದ ಆಟ 'ಸೂಪರ್‌'

Last Updated : Nov 18, 2021, 6:09 PM IST

ABOUT THE AUTHOR

...view details