ಭುವನೇಶ್ವರ(ಒಡಿಶಾ):ಆರು ಬಾರಿಯ ಚಾಂಪಿಯನ್ ಜರ್ಮನಿ ವಿರುದ್ಧ ಸೆಮಿಫೈನಲ್ನಲ್ಲಿ 2-4 ಅಂತರದಿಂದ ಸೋಲು ಕಾಣುವ ಮೂಲಕ ಭಾರತ ಕಿರಿಯರ ಹಾಕಿ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಹಾಲಿ ಚಾಂಪಿಯನ್ ಭಾರತ ನಿರಾಸೆಗೊಳಗಾಗಿದೆ. ಇದೀಗ ಫ್ರಾನ್ಸ್ ವಿರುದ್ಧ ಕಂಚಿಗಾಗಿ ಹೋರಾಟ ನಡೆಸಲಿದೆ.
ಭುವನೇಶ್ವರದ ಕಾಳಿಂಗ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಜರ್ಮನಿ ವಿರುದ್ಧ ಸೋಲು ಕಂಡು, ಪ್ರಶಸ್ತಿ ಸುತ್ತಿನಿಂದ ಹೊರ ಬಂದಿದೆ. ಆರಂಭದಿಂದಲೂ ಭಾರತದ ಮೇಲೆ ಸವಾರಿ ಮಾಡಿದ ಬಲಿಷ್ಠ ಜರ್ಮನಿ 8ನೇ ಬಾರಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
ಮೊದಲಾರ್ಧದಲ್ಲಿ 2 ಪಾಯಿಂಟ್ ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದ ಜರ್ಮನಿ ತಂಡ ಕೊನೆಯಾರ್ಧದಲ್ಲಿ ಮತ್ತೆರೆಡು ಗೋಲು ಗಳಿಕೆ ಮಾಡಿತ್ತು. ಆದರೆ ಭಾರತ ಎರಡು ಗೋಲು ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.