ಕರ್ನಾಟಕ

karnataka

ETV Bharat / sports

ಜೊಕೊವಿಕ್‌ ಗಡಿಪಾರು, ವೀಸಾ ರದ್ದು ತೀರ್ಪು: ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಗೆದ್ದ ವಿಶ್ವ ನಂಬರ್ 1 ಟೆನಿಸ್ ಆಟಗಾರ - ನ್ಯಾಯಾಲಯ ಜೊಕೊವಿಕ್‌ ವೀಸಾ ರದ್ದು ಪ್ರಕರಣ ವಿಚಾರಣೆ

ವಿಶ್ವದ ನಂ.1 ಆಟಗಾರ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ದಾಖಲೆಯ 9 ಬಾರಿ ಟ್ರೋಫಿ ಗೆದ್ದಿರುವ ನೊವಾಕ್‌ ನ್ಯಾಯಾಲಯದಲ್ಲಿ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಗೆಲುವು ಸಾಧಿಸಿದ್ದಾರೆ.

Novak Djokovic visa cancel case  Djokovic hearing visa cancel case  Djokovic cancellation of visa  Australian Open  ನೊವಾಕ್ ಜೊಕೊವಿಕ್‌ ವೀಸಾ ರದ್ದು ಪ್ರಕರಣ  ನ್ಯಾಯಾಲಯ ಜೊಕೊವಿಕ್‌ ವೀಸಾ ರದ್ದು ಪ್ರಕರಣ ವಿಚಾರಣೆ  ಆಸ್ಟ್ರೇಲಿಯಾ ಓಪನ್​
ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಗೆದ್ದ ವಿಶ್ವದ ನಂಬರ್ 1 ಟೆನಿಸ್ ಆಟಗಾರ

By

Published : Jan 10, 2022, 1:14 PM IST

ಕ್ಯಾನ್‌ಬೆರಾ: ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ವೀಸಾ ಸಂಬಂಧಿತ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾರೆ. ನೊವಾಕ್ ಜೊಕೊವಿಕ್ ಅವರ ವೀಸಾ ರದ್ದುಗೊಳಿಸುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ಮೆಲ್ಬೋರ್ನ್ ನ್ಯಾಯಾಲಯವು ತಪ್ಪು ಎಂದು ಪರಿಗಣಿಸಿದೆ.

ನೊವಾಕ್ ಜೊಕೊವಿಕ್ ಅವರ ಪಾಸ್‌ಪೋರ್ಟ್ ಮತ್ತು ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿರುವ ಇತರ ಯಾವುದೇ ವಸ್ತುಗಳನ್ನು ತಕ್ಷಣವೇ ಹಿಂದಿರುಗಿಸಬೇಕೆಂದು ಸರ್ಕಾರಕ್ಕೆ ಮೆಲ್ಬೋರ್ನ್ ನ್ಯಾಯಾಲಯ ಆದೇಶಿಸಿದೆ.

ಆಸ್ಟ್ರೇಲಿಯಾ ಕೋರ್ಟ್​ನಿಂದ ಮಧ್ಯಂತರ ತಡೆ ಆದೇಶ

ಜೊಕೊವಿಕ್ ಅವರನ್ನು ಆಸ್ಟ್ರೇಲಿಯಾದಿಂದ ಹೊರಗೆ ಕಳುಹಿಸಲು ಸರ್ಕಾರಕ್ಕೆ ಇನ್ನೂ ಅಧಿಕಾರವಿದೆ. ಅಂತಹ ಪರಿಸ್ಥಿತಿಯಲ್ಲಿ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ನ್ಯಾಯಾಲಯದ ಆದೇಶದ ನಂತರವೂ ಆಸ್ಟ್ರೇಲಿಯಾ ಸರ್ಕಾರದ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಓದಿ:ಕೋವಿಡ್ ನಿಯಮ ಉಲ್ಲಂಘನೆ: ಎಷ್ಟೇ ದೊಡ್ಡ ನಾಯಕರಿರಲಿ ಕ್ರಮ ಖಚಿತ - ಸಿಎಂ ಬೊಮ್ಮಾಯಿ

ಜೊಕೊವಿಕ್ ಅವರು ಕೊರೊನಾ ಲಸಿಕೆ ತೆಗೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದರು. ಇದರ ಹೊರತಾಗಿಯೂ, ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು. ಆದರೆ, ವಿವಾದದ ನಂತರ ಆಸ್ಟ್ರೇಲಿಯಾ ಸರ್ಕಾರವು ಕೊನೆಯ ಸಂದರ್ಭದಲ್ಲಿ ವೀಸಾವನ್ನು ರದ್ದುಗೊಳಿಸಿತ್ತು.

ಜೊಕೊವಿಕ್​ ಪರ ಜಾಥಾ

ಕೊರೊನಾ ನಿಯಮ ಉಲ್ಲಂಘನೆಯಿಂದಾಗಿ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ರದ್ದುಗೊಳಿಸಿದೆ. ಆದರೆ, ಈಗ ನ್ಯಾಯಾಲಯದ ಆದೇಶದ ನಂತರ, ನೊವಾಕ್ ಜೊಕೊವಿಕ್ ತಮ್ಮ ಮನೆಗೆ ಮರಳಲು ಬಯಸಿದ್ದಾರೆ. ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್​ರನ್ನು ನಾಲ್ಕು ದಿನಗಳ ಕಾಲ ವಲಸೆ ವಿಭಾಗದ ಹೋಟೆಲ್‌ನಲ್ಲಿ ಇರಿಸಿತ್ತು. ನೊವಾಕ್ ಜೊಕೊವಿಕ್​ರನ್ನು ಬೆಂಬಲಿಸಿ ಅವರ ಅಭಿಮಾನಿಗಳು ಆಯೋಜಿಸಿದ್ದ ಜಾಥಾದಲ್ಲಿ ಅವರ ಪೋಷಕರು ಕೂಡ ಭಾಗವಹಿಸಿದ್ದರು.

ಓದಿ:Happy Birthday Hrithik Roshan: ಹುಟ್ಟುಹಬ್ಬದ ಸಂಭ್ರಮದಲ್ಲಿ 'ಗ್ರೀಕ್ ಗಾಡ್'

ಸೋಮವಾರ ಮೆಲ್ಬೋರ್ನ್‌ನಲ್ಲಿ ವರ್ಚುಯಲ್ ವಿಚಾರಣೆ ನಡೆಸಲಾದ ನ್ಯಾಯಾಲಯದಲ್ಲಿ ಜೊಕೊವಿಕ್ ತನ್ನ ವೀಸಾ ರದ್ದುಗೊಳಿಸುವಿಕೆಯನ್ನು ಪ್ರಶ್ನಿಸಿದರು. ಕಳೆದ ತಿಂಗಳಷ್ಟೇ ಕೊರೊನಾ ಸೋಂಕಿನಿಂದ ಜೊಕೊವಿಕ್ ಬಳಲಿದ್ದರು. ಹೀಗಾಗಿ ಅವರಿಗೆ ಕಟ್ಟುನಿಟ್ಟಾದ ಲಸಿಕೆ ನಿಯಮಗಳಿಂದ ವೈದ್ಯಕೀಯ ವಿನಾಯಿತಿ ನೀಡಬೇಕು ಎಂದು ಅವರ ವಕೀಲರು ವಾದಿಸಿದ್ದರು. ಜೊಕೊವಿಕ್ ಪರ ವಕೀಲರು ಮೇಲ್ಮನವಿ ಪರವಾಗಿ 11 ಕಾರಣಗಳನ್ನು ನೀಡಿ 35 ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಜನವರಿ 17 ರಂದು ಆರಂಭವಾಗಲಿದೆ.

ಮಗನ ಪರ ಅಳಲು ತೋಡಿಕೊಂಡ ತಾಯಿ

ನೊವಾಕ್ ಇರುವ ಹೋಟೆಲ್‌ನ ಸ್ಥಿತಿ ಅಮಾನವೀಯವಾಗಿದೆ. ಜೊಕೊವಿಕ್ ಉಪಹಾರವನ್ನು ಸಹ ಸೇವಿಸಿಲ್ಲ ಮತ್ತು ಕೊಠಡಿಯಿಂದ ಹೊರಬರಲು ಅಥವಾ ಉದ್ಯಾನವನವನ್ನು ನೋಡಲು ಸಾಧ್ಯವಾಗಿಲ್ಲ ಎಂದು ಜೊಕೊವಿಕ್ ತಾಯಿ ಹೇಳಿದ್ದಾರೆ.

ವಿಶ್ವದ ನಂ.1 ಆಟಗಾರ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ದಾಖಲೆಯ 9 ಬಾರಿ ಟ್ರೋಫಿ ಗೆದ್ದಿರುವ ನೊವಾಕ್‌ಗೆ ಕೋವಿಡ್‌ ಲಸಿಕೆ ಪಡೆಯದೇ ಇದ್ದರೂ ವೈದ್ಯಕೀಯ ಕಾರಣ ಹಿನ್ನೆಲೆ ಟೂರ್ನಿಗೆ ಪ್ರವೇಶ ಲಭ್ಯವಾಗಿತ್ತು. ಆದರೆ, ವೈದ್ಯಕೀಯ ಕಾರಣ ಕೊಟ್ಟು ಪಡೆಯಬೇಕಾದ ವೀಸಾ ತೆಗೆದುಕೊಳ್ಳದೇ ಇದ್ದ ಕಾರಣ ಈ ಗೊಂದಲಕ್ಕೆ ಸಿಲುಕಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಲಸಿಕೆಗಳಿಗೆ ಬಹಳ ಒತ್ತು ಕೊಡಲಾಗಿದೆ. ಅಲ್ಲಿನ ಬಹುತೇಕ ರಾಜ್ಯಗಳಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಬಹುತೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇಂತಹ ಆಸ್ಟ್ರೇಲಿಯಾ ದೇಶದಲ್ಲಿ ನಿಂತು ಲಸಿಕೆ ವಿರುದ್ಧ ಜೋಕೊವಿಚ್ ಮಾತನಾಡುತ್ತಿದ್ದಾರೆ ಎಂಬುದು ಅಲ್ಲಿನ ಸರ್ಕಾರದಲ್ಲಿರುವವರ ಆಕ್ರೋಶ.

ABOUT THE AUTHOR

...view details