ನ್ಯೂಯಾರ್ಕ್:ದಶಕಗಳ ಕಾಲ ಡಬ್ಲ್ಯೂಡಬ್ಲ್ಯೂಇ ಕುಸ್ತಿಯಲ್ಲಿ ಮಿಂಚಿದ್ಧ ಲ್ಯೂಕ್ ಹಾರ್ಪರ್ ಶ್ವಾಸಕೋಶದ ಸಮಸ್ಯೆಯಿಂದ ಶನಿವಾರ ಕೊನೆಯುಸಿರೆಳೆದರು.
ಹ್ಯೂಬರ್ ನಿಧನ ಸುದ್ಧಿಯನ್ನು ಅವರ ಪತ್ನಿ ಅಮಾಂಡ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.

ತಮ್ಮ ಪತಿ ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದಾಗಿ ಡಿಸೆಂಬರ್ 26ರಂದು ಮೃತಪಟ್ಟಿದ್ದಾರೆ. ಆದರೆ ಅವರ ಸಾವಿಗೂ ಕೋವಿಡ್-19ಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಹ್ಯೂಬರ್ ಅಕಾಲಿಕ ಸಾವಿಗೆ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ಗಳಾದ ರ್ಯಾಂಡಿ ಓರ್ಟನ್, ಜಾನ್ ಸೀನಾ , ಆರ್ ಟ್ರೂತ್, ಮಿಜ್, ಡೇನಿಯಲ್ ಬ್ರೈನ್, ಶೇಲ್ಟನ್ ಬೆಂಜಮಿನ್, ಬ್ರೌನ್ಸ್ಟ್ರೋಮನ್, ಕ್ರಿಸ್ ಜೆರಿಕೋ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.