ಕರ್ನಾಟಕ

karnataka

ETV Bharat / sports

ಭುಜದ ಸಮಸ್ಯೆ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದ ಜೋಹಾನ್ಸ್ ವೆಟರ್ - ಭುಜದ ಸಮಸ್ಯೆ ಹಿನ್ನೆಲೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದ ಜೋಹಾನ್ಸ್ ವೆಟರ್

ಸ್ಟಾರ್ ಜಾವೆಲಿನ್ ಎಸೆತಗಾರ ಇತ್ತೀಚೆಗೆ ವಿಶ್ವಪ್ರಸಿದ್ಧ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಿದ್ದರು. ಟೂರ್ನಿಯಲ್ಲಿ ಬೆಳ್ಳಿ ಪದಕ ಪಡೆದು ತಮ್ಮದೇ ದಾಖಲೆ ಮುರಿದಿದ್ದರು.

Johannes Vetter to miss World Athletics Championships
ಜಾವೆಲಿನ್ ವಿಶ್ವ ಚಾಂಪಿಯನ್ ಜೋಹಾನ್ಸ್ ವೆಟರ್

By

Published : Jul 7, 2022, 3:25 PM IST

ಮ್ಯೂನಿಚ್:2017ರ ಜಾವೆಲಿನ್ ವಿಶ್ವ ಚಾಂಪಿಯನ್ ಜೋಹಾನ್ಸ್ ವೆಟರ್ ಒರೆಗಾನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಭುಜದ ಸಮಸ್ಯೆ ಇದೆ. ಹಾಗಾಗಿ ನಾನು ಒರೆಗಾನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ನಾನು ಯಾವಾಗ ಮತ್ತೆ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಹೇಳುವುದು ಕಠಿಣವಾಗಿದೆ. ಈ ನಿರ್ಧಾರವನ್ನು ಅರಗಿಸಿಕೊಳ್ಳಲು ನನಗೆ ಹಲವು ದಿನಗಳು ಬೇಕಾಗುತ್ತವೆ. ಅದೇನೇ ಇರಲಿ ನಾನು ನಿಮ್ಮೊಂದಿಗೆ ಹೀಗೆ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತೇನೆ ಎಂದು ಅವರು ಹೇಳಿದ್ದಾರೆ. ಸ್ಟಾರ್ ಜಾವೆಲಿನ್ ಥ್ರೋವರ್ ಇತ್ತೀಚೆಗೆ ವಿಶ್ವಪ್ರಸಿದ್ಧ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಿದ್ದರು. ಅವರು ಅಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದರು.

ಇದನ್ನೂ ಓದಿ:ಟೆನ್ನಿಸ್​ ಮಿಶ್ರ ಡಬಲ್ಸ್‌ : ಸೋಲಿನೊಂದಿಗೆ ವಿಂಬಲ್ಡನ್‌ಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ

ABOUT THE AUTHOR

...view details