ಜಿಂದ್ (ಹರಿಯಾಣ): ಭಾರತದ ಯುವ ಪ್ರತಿಭೆ ಅನ್ಶು ಮಲಿಕ್ ಏಷ್ಯನ್ ಕ್ವಾಲಿಫೈಯರ್ನಲ್ಲಿ ಆಕರ್ಷಕ ಪ್ರದರ್ಶನ ತೋರಿ ಜೂನಿಯರ್ ನಿಂದ ಸೀನಿಯರ್ಹಂತಕ್ಕೆ ತೇರ್ಗಡೆಯಾಗಿದ್ದಲ್ಲದೆ, ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.
ಹರಿಯಾಣದ ಜಿಂದ್ ಜಿಲ್ಲೆಯ ನಿಡಾನಿ ಎಂಬ ಪುಟ್ಟಹಳ್ಳಿಯ ಪ್ರತಿಭೆ, ಈಗ ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಯುವತಿ ಅನ್ಶು ಮಲಿಕ್. ಸಣ್ಣ ಹಳ್ಳಿಯಲ್ಲಿ ಆಟ ಶುರು ಮಾಡಿದ ಅನ್ಶು, ಟೋಕಿಯೋ ಒಲಿಂಪಿಕ್ಸ್ಗಾಗಿ ಪೋಲೆಂಡ್ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಜೂನಿಯರ್ ವಿಭಾಗದಲ್ಲಿದ್ದರೂ ಎರಡು ವರ್ಷಗಳ ಹಿಂದೆ ಹಿರಿಯರ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. 57 ಕೆಜಿ ತೂಕ ವಿಭಾಗದಲ್ಲಿ ದೇಶದ ನಂಬರ್ ಒನ್ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನ್ಶು ಮಲಿಕ್ ಈ ಸಾಧನೆಗೆ ಅವರ ಅಜ್ಜಿಯೇ ಸ್ಫೂರ್ತಿಯಂತೆ. ಅಜ್ಜಿಯಿಂದ ಸ್ಫೂರ್ತಿ ಪಡೆದ ಅನ್ಶು 2013 ರಿಂದ ಆಟ ಆರಂಭಿಸಿದರು. ನಂತರ ಸೋಲು ಎಂಬುದು ಇವರ ಬಳಿ ಸುಳಿಯಲೇ ಇಲ್ಲ.