ಪಟಿಯಾಲ:ಜಾವೆಲಿನ್ ಥ್ರೋ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿರುವ ಅನು ರಾಣಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. 27 ವರ್ಷದ ವಿಶ್ವದ 12ನೇ ಶ್ರೇಯಾಂಕಿತೆ ಅನು ರಾಣಿ 63 ಮೀಟರ್ ದೂರ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
24ನೇ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 63.24 ಮೀಟರ್ ಉದ್ದ ಜಾವೆಲಿನ್ ಎಸೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ಆದರೆ ಒಲಿಂಪಿಕ್ಸ್ ಅರ್ಹತೆಗಾಗಿ 64 ಮೀಟರ್ ಉದ್ದ ಜಾವೆಲಿನ್ ಎಸೆಯಬೇಕಾಗಿರುವ ಕಾರಣ ಇವರು ಅರ್ಹತೆ ಕಳೆದುಕೊಂಡಿದ್ದಾರೆ.