ಕರ್ನಾಟಕ

karnataka

ETV Bharat / sports

ವಿಶ್ವ ಚಾಂಪಿಯನ್‌ಶಿಪ್‌: ಫೈನಲ್‌ಗೇರಿದ ಜಾವೆಲಿನ್‌ ಥ್ರೋ ಕ್ರೀಡಾಪಟು ಅನು ರಾಣಿ - ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆದ ಜಾವೆಲಿನ್ ಥ್ರೋ ಕ್ರೀಡಾಪಟು ಅನು ರಾಣಿ

ಭಾರತದ ಜಾವೆಲಿನ್ ಎಸೆತಗಾರ್ತಿ ಅನು ರಾಣಿ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದಿದ್ದು, ಪದಕ ಭರವಸೆ ಮೂಡಿಸಿದ್ದಾರೆ.

Annu Rani
ಅನು ರಾಣಿ

By

Published : Jul 21, 2022, 9:34 AM IST

ಯುಜೀನ್: ಭಾರತದ ಜಾವೆಲಿನ್ ಥ್ರೋ ಕ್ರೀಡಾಪಟು ಅನು ರಾಣಿ ತಮ್ಮ ಕೊನೆಯ ಪ್ರಯತ್ನದಲ್ಲಿ 59.60 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದರು.

ಫೌಲ್ ಥ್ರೋದೊಂದಿಗೆ ಆಟ ಪ್ರಾರಂಭಿಸಿದ ನಂತರ ಅನು ಸ್ಪರ್ಧೆಯಿಂದ ನಿರ್ಗಮನದ ಅಂಚಿನಲ್ಲಿದ್ದರು. ಎರಡನೇ ಪ್ರಯತ್ನದಲ್ಲಿಯೂ 55.35 ಮೀ ಕೆಳಗೆ ಎಸೆಯುವ ಮೂಲಕ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಮೂರನೇ ಪ್ರಯತ್ನದಲ್ಲಿ 59.60 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆಯುವಲ್ಲಿ ಯಶಸ್ವಿಯಾಗಿ, ಫೈನಲ್​ಗೆ ಕಾಲಿಟ್ಟರು. ಉತ್ತಮ ಪ್ರದರ್ಶನ ನೀಡಿದ ಒಟ್ಟು 12 ಕ್ರೀಡಾಪಟುಗಳು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಸ್ಪರ್ಧಿಸಿರುವ ಅನು, ಸತತ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದರು. 2014ರ ಏಷ್ಯನ್ ಗೇಮ್ಸ್​ನಲ್ಲಿ ಕಂಚು, 2019ರ ಏಷನ್​ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕಕ್ಕೆ ಅನು ಮುತ್ತಿಕ್ಕಿದ್ದರು. ಮೇ ತಿಂಗಳಲ್ಲಿ ಜಮ್‌ಶೆಡ್‌ಪುರದಲ್ಲಿ ನಡೆದ ಇಂಡಿಯನ್ ಓಪನ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 63.82 ಮೀಟರ್ ದೂರಕ್ಕೆ ಭರ್ಜಿ ಎಸೆದು ಚಿನ್ನದ ಪಕದ ಗೆಲ್ಲುವ ಮೂಲಕ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ:ಜಾವೆಲಿನ್​ ಥ್ರೋದಲ್ಲಿ ಅನು ಹೊಸ ದಾಖಲೆ: ಆದ್ರೂ ಸಿಗಲಿಲ್ಲ ಒಲಿಂಪಿಕ್ಸ್​ಗೆ ಅರ್ಹತೆ!

ABOUT THE AUTHOR

...view details