ಕರ್ನಾಟಕ

karnataka

ETV Bharat / sports

ಕ್ರೊವೇಷಿಯಾ 'ಶೂಟೌಟ್​'ಗೆ ಜಪಾನ್ ಉಡೀಸ್​.. 3-1 ರಲ್ಲಿ ಗೆದ್ದು ಕ್ವಾರ್ಟರ್​ಗೆ ಲಗ್ಗೆ

ವಿಶ್ವಕಪ್​ನ ಮೂರನೇ ಶೂಟೌಟ್​ನಲ್ಲಿ ಕ್ರೊವೇಷಿಯಾ ಜಯ ಸಾಧಿಸುವ ಮೂಲಕ ಕ್ವಾರ್ಟರ್​ಫೈನಲ್ ತಲುಪಿತು. ಭರ್ಜರಿ ಆರಂಭ ಪಡೆದಿದ್ದ ಜಪಾನ್​ ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿತು.

japan-vs-croatia-match
ಶೂಟೌಟ್​ನಲ್ಲಿ ಕ್ರೊವೇಷಿಯಾ ಜಯ

By

Published : Dec 6, 2022, 9:04 AM IST

ಅಲ್​ವಾಕ್ರಾ (ಕತಾರ್):ಕಳೆದ ಬಾರಿಯ ರನ್ನರ್​ಅಪ್​ ಕ್ರೊವೇಷಿಯಾ ಶೂಟೌಟ್​ನಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ಫೈನಲ್​ಗೆ ಎಂಟ್ರಿ ನೀಡಿತು. ಗುಂಪು ಹಂತದಲ್ಲಿ ಎರಡು ಮಾಜಿ ಚಾಂಪಿಯನ್​ ತಂಡಗಳಿಗೆ ಸೋಲುಣಿಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ಏಷ್ಯಾ ತಂಡ ಜಪಾನ್​ ಆಘಾತ ಅನುಭವಿಸಿ ವಿಶ್ವಕಪ್​ಗೆ ವಿದಾಯ ಹೇಳಿತು.

ಕ್ರೊವೇಷಿಯಾ ಗೋಲ್​ಕೀಪರ್​ ಡೊಮಿನಿಕ್ ಲಿವಾಕೋವಿಕ್ ಜಪಾನ್​ನ ಆಟಗಾರರಿಗೆ ಭದ್ರ ತಡೆಗೋಡೆ ನಿರ್ಮಿಸುವ ಮೂಲಕ ಸೋಲಿಗೆ ಕಾರಣರಾದರು. ಮೂರು ಪೆನಾಲ್ಟಿ ಕಿಕ್​ಗಳನ್ನು ಉಳಿಸಿದ ಡೊಮಿನಿಕ್​ ಜಪಾನ್​ ವಿರುದ್ಧ 3-1 ರಿಂದ ಗೆಲುವು ಧಕ್ಕುವಂತೆ ಮಾಡಿದರು.

ನಿಗದಿತ 90 ನಿಮಿಷಗಳ ಅವಧಿಯಲ್ಲಿ ಜಪಾನ್​ ಮತ್ತು ಕ್ರೊಯೇಷಿಯಾ ತಲಾ 1-1 ಗೋಲು ಗಳಿಸಿದ್ದವು. ಪಂದ್ಯದ ಫಲಿತಾಂಶಕ್ಕಾಗಿ 30 ನಿಮಿಷ ಹೆಚ್ಚುವರಿಯಾಗಿ ಆಡಿಸಲಾಯಿತು. ಆಗಲೂ ಯಾರೂ ಗೋಲು ಗಳಿಸದಿದ್ದಾಗ, ಪೆನಾಲ್ಟಿ ಕಿಕ್​ ಮೊರೆ ಹೋಗಲಾಯಿತು.

​ಹೀಗಿತ್ತು ಪೆನಾಲ್ಟಿ ಶೂಟೌಟ್​:ಶೂಟೌಟ್​ನ ಮೊದಲೆರಡು ಪ್ರಯತ್ನದಲ್ಲಿ ಕಿಕ್​ ಬಾರಿಸಿದ ಜಪಾನ್​ನ ಮಿನಮಿನೊ, ಮಿಟೊಮಾ ಗೋಲು ಗಳಿಸುವಲ್ಲಿ ವಿಫಲವಾದರು. ಕ್ರೊವೇಷಿಯಾದ ವ್ಲಾಸಿಚ್​, ಬ್ರೊಜೊವಿಚ್​ ಜಪಾನ್​ ತಡೆಯನ್ನು ಮೀರಿ ಗೋಲು ಬಾರಿಸಿದರು. ಇದರಿಂದ 2-0 ಯಲ್ಲಿ ಮುನ್ನಡೆ ಪಡೆಯಿತು. ಮೂರನೇ ಯತ್ನದಲ್ಲಿ ಜಪಾನ್​ನ ಅಸಾನೊ ಗೋಲು ಗಳಿಸಿದರು. ಇದರಿಂದ ಪಂದ್ಯ ಮರುಜೀವ ಪಡೆಯಿತು. ಕ್ರೊವೇಷಿಯಾದ ಲಿವಾಜ ವಿಫಲರಾದರು.

4ನೇ ಯತ್ನದಲ್ಲಿ ಜಪಾನ್​ನ ಯೋಶಿದಾ ವಿಫಲರಾಗಿ, ಫಸಾಲಿಚ್​ ಗೋಲು ಬಾರಿಸುತ್ತಿದ್ದಂತೆ ಕ್ರೊವೇಷಿಯಾ ಮೈದಾನದ ತುಂಬೆಲ್ಲಾ ಗೆಲುವಿನ ಸಂಭ್ರಮದಲ್ಲಿ ಕುಣಿದಾಡಿತು. ಕ್ರೊವೇಷಿಯಾ ವಿಶ್ವಕಪ್​ನಲ್ಲಿ ಮೂರು ಬಾರಿ ಶೂಟೌಟ್​ನಲ್ಲಿ ಗೆಲುವು ಸಾಧಿಸಿತು. 2018 ರಲ್ಲಿ ಪ್ರಿಕ್ವಾರ್ಟರ್​ಫೈನಲ್​ ಮತ್ತು ಕ್ವಾರ್ಟರ್​ಫೈನಲ್​ನಲ್ಲಿ ನಡೆದ ಶೂಟೌಟ್​ನಲ್ಲಿ ಗೆಲುವು ಕಂಡಿತ್ತು. ಜಪಾನ್​ ಈ ಹಿಂದೆಯೂ ಪೆರುಗ್ವೆ ವಿರುದ್ಧದ ಶೂಟೌಟ್​ನಲ್ಲಿ ಸೋಲು ಕಂಡಿತ್ತು.

ಓದಿ:36 ನಿಮಿಷದಲ್ಲಿ 4 ಗೋಲು ಬಾರಿಸಿದ ಬ್ರೆಜಿಲ್​ ಕ್ವಾರ್ಟರ್​ಗೆ.. ದಕ್ಷಿಣ ಕೊರಿಯಾ ವಿಶ್ವಕಪ್​ನಿಂದ ಔಟ್​

ABOUT THE AUTHOR

...view details