ನವದೆಹಲಿ:ವಿಶ್ವದ ಅತ್ಯಂತ ವೇಗದ ಓಟಗಾರ ಮತ್ತು ಅಥ್ಲೆಟಿಕ್ಸ್ ದಿಗ್ಗಜ ಉಸೇನ್ ಬೋಲ್ಟ್ ಅವರ ಹೂಡಿಕೆ ಖಾತೆಯಿಂದ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿ ಮಾಯವಾಗಿದೆ. ಜಮೈಕಾದ ಒಲಿಂಪಿಕ್ ದಂತಕಥೆ ಉಸೇನ್ ಬೋಲ್ಟ್ ಅವರು ಕಿಂಗ್‌ಸ್ಟನ್ ಮೂಲದ ಹೂಡಿಕೆ ಸಂಸ್ಥೆ ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ತಮ್ಮ ಖಾತೆಯಲ್ಲಿದ್ದ ಲಕ್ಷಾಂತರ ಡಾಲರ್‌ಗಳನ್ನು ಕಳೆದುಕೊಂಡಿದ್ದಾರೆ.
ಜಮೈಕಾದ ಹಣಕಾಸು ತನಿಖಾ ಇಲಾಖೆ ಮತ್ತು ಹಣಕಾಸು ಸೇವಾ ಆಯೋಗವು ಜಂಟಿಯಾಗಿ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಉಸೇನ್ ಬೋಲ್ಟ್ ಅವರಿಂದ ಹಣ ನಾಪತ್ತೆಯಾಗಿರುವ ಖಾತೆಯು ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್ (SSL) ನಲ್ಲಿದೆ. ಈ ಸಂಬಂಧ SSL ಪೊಲೀಸರನ್ನೂ ಸಂಪರ್ಕಿಸಿದೆ. ಬೋಲ್ಟ್ 2012ರಲ್ಲಿ ಜಮೈಕಾದ ಬ್ರೋಕರೇಜ್ ಸಂಸ್ಥೆ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಖಾತೆಯನ್ನು ತೆರೆದಿದ್ದರು.
ಬೋಲ್ಟ್ ಅವರ ವಕೀಲ ಗಾರ್ಡನ್ ಅವರು, 'ಉಸೇನ್ ಬೋಲ್ಟ್ ಅವರ ಖಾತೆಯಲ್ಲಿದ್ದ $ 12.7 ಮಿಲಿಯನ್ (ಸುಮಾರು 98 ಕೋಟಿ ರೂ.) ವಂಚನೆ ನಡೆದಿದೆ. ಇದು ಅವರ ಇದುವರೆಗಿನ ಗಳಿಕೆಯ ಹಣ ಮತ್ತು ಅವರ ಸಂಪೂರ್ಣ ಜೀವನ ಉಳಿತಾಯ ಹಾಗೂ ಪಿಂಚಣಿ ಹಣವಿತ್ತು ಜನವರಿ 11 ರಂದು ಉಸೇನ್ ಬೋಲ್ಟ್ ವಂಚನೆಯ ಬಗ್ಗೆ ತಿಳಿದಿದೆ' ಎಂದಿದ್ದಾರೆ.
ಸ್ಟಾಕ್ಸ್ ಅಂಡ್ ಸೆಕ್ಯುರಿಟೀಸ್ ಲಿಮಿಟೆಡ್ ಹಣಕಾಸು ಸಂಸ್ಥೆ ಜನವರಿ 12 ರಂದು ತಮ್ಮ ಮಾಜಿ ಉದ್ಯೋಗಿ ಕಂಪನಿಯಲ್ಲಿ ವಂಚನೆ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಕಾನೂನಿನ ಸಹಾಯವನ್ನು ತೆಗೆದುಕೊಳ್ಳುತ್ತಿದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ವಂಚನೆಯಲ್ಲಿ ಉಸೇನ್ ಬೋಲ್ಟ್ ಹೊರತಾಗಿ ಇತರರ ಖಾತೆಗಳೂ ಸೇರಿವೆ ಎಂದು ತಿಳಿಸಿದೆ.