ಕರ್ನಾಟಕ

karnataka

ETV Bharat / sports

ಟೇಬಲ್​ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಐತಿಹಾಸಿಕ ಸಾಧನೆಗೆ ಪಾತ್ರರಾದ ಮನಿಕಾ ಬಾತ್ರಾ-ಅರ್ಚನಾ ಜೋಡಿ - ಐಟಿಟಿಎಫ್ ರ‍್ಯಾಂಕಿಂಗ್‌

ಚೀನಾದ ವಾಂಗ್​ ಮನ್ಯು ಮತ್ತು ಸುನ್ ಯಿಂಗ್ಷಾ ವುಮೆನ್ಸ್ ಡಬಲ್ಸ್​ನಲ್ಲಿ 4289 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಭಾರತೀಯ ಜೋಡಿ 1501 ಅಂಕ ಪಡೆದುಕೊಂಡಿದೆ. ಇನ್ನು ಮಹಿಳೆಯರ ಡಬಲ್ಸ್​ನ ವೈಯಕ್ತಿಕ​ ರ‍್ಯಾಂಕಿಂಗ್‌ನಲ್ಲಿ ಅರ್ಚನಾ 10 ಮತ್ತು ಮನಿಕಾ 12ನೇ ಶ್ರೇಯಾಂಕ ಪಡೆದಿದ್ದಾರೆ..

ITTF Rankings
ಟೇಬಲ್ ಟೆನಿಸ್​ ಶ್ರೇಯಾಂಕ ಬಿಡುಗಡೆ

By

Published : Apr 5, 2022, 3:56 PM IST

ನವದೆಹಲಿ :ಭಾರತದ ಮಹಿಳಾ ಟೇಬಲ್​ ಟೆನಿಸ್​ ಜೋಡಿಯಾದ ಅರ್ಚನಾ ಗಿರೀಶ್​ ಕಾಮತ್ ಮತ್ತು ಮನಿಕಾ ಬಾತ್ರಾ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್​ ಫೆಡರೇಷನ್​ ಮಂಗಳವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ, ಈ ಕ್ರೀಡೆಯಲ್ಲಿ ಅಗ್ರ 5ರ ಪಟ್ಟಿ ಪ್ರವೇಶಿಸಿದ ಭಾರತ ಮೊದಲ ಟೇಬಲ್​ ಟೆನಿಸ್​ ಜೋಡಿ ಎನಿಸಿಕೊಂಡಿದ್ದಾರೆ.

ಈ ಹಿಂದೆ ಪುರುಷ ಅಥವಾ ಮಹಿಳೆಯರ್​ ಸಿಂಗಲ್ಸ್ ಅಥವಾ ಡಬಲ್ಸ್​ನಲ್ಲಿ ಈ ಸಾಧನೆಗೆ ಯಾವುದೇ ಪ್ಲೇಯರ್​ ಪಾತ್ರರಾಗಿರಲಿಲ್ಲ. ಅರ್ಚನಾ ಮತ್ತು ಮನಿಕಾ ವುಮೆನ್ಸ್ ಡಬಲ್ಸ್​ನಲ್ಲಿ 2 ಸ್ಥಾನ ಮೇಲೇರಿ 4ನೇ ರ‍್ಯಾಂಕಿಂಗ್‌ ಪಡೆದುಕೊಂಡಿದ್ದಾರೆ. ಕಳೆದ ವಾರ ದೋಹಾದಲ್ಲಿ ನಡೆದಿದ್ದ WTT ಸ್ಟಾರ್​ ಕಂಟೆಂಡರ್​ ಚಾಂಪಿಯನ್​ಶಿಪ್​ನಲ್ಲಿ ಈ ಜೋಡಿ ಸೆಮಿಫೈನಲ್ಸ್​ನಲ್ಲಿ ಸೋಲು ಕಂಡಿತ್ತು.

ಆದರೆ, ಅಂತಿಮ ನಾಲ್ಕರ ಘಟಕ್ಕೆ ಪ್ರವೇಶಿಸಿದ್ದರಿಂದ ಕಂಚಿನ ಪದಕ ಪಡೆಯುವಲ್ಲಿ ಸಫಲವಾಗಿತ್ತು. ಅವರ ಈ ಸಾಧನೆ ಅವರ ರ‍್ಯಾಂಕಿಂಗ್​ ಏರಿಕೆಗೆ ಕಾರಣವಾಗಿದೆ. ಚೀನಾದ ವಾಂಗ್​ ಮನ್ಯು ಮತ್ತು ಸುನ್ ಯಿಂಗ್ಷಾ ವುಮೆನ್ಸ್ ಡಬಲ್ಸ್​ನಲ್ಲಿ 4289 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಭಾರತೀಯ ಜೋಡಿ 1501 ಅಂಕ ಪಡೆದುಕೊಂಡಿದೆ. ಇನ್ನು ಮಹಿಳೆಯರ ಡಬಲ್ಸ್​ನ ವೈಯಕ್ತಿಕ​ ರ‍್ಯಾಂಕಿಂಗ್‌ನಲ್ಲಿ ಅರ್ಚನಾ 10 ಮತ್ತು ಮನಿಕಾ 12ನೇ ಶ್ರೇಯಾಂಕ ಪಡೆದಿದ್ದಾರೆ.

ಇದನ್ನೂ ಓದಿ:ಅಗ್ರಸ್ಥಾನಿ ರಾಯಲ್ಸ್​ ಸವಾಲೊಡ್ಡಲು ಆರ್​ಸಿಬಿ ರೆಡಿ.. ಮತ್ತೊಂದು ಹೈ ಸ್ಕೋರ್​ ಪಂದ್ಯಕ್ಕೆ ವಾಂಖೆಡೆ ಸಿದ್ಧ

ABOUT THE AUTHOR

...view details