ಕರ್ನಾಟಕ

karnataka

ETV Bharat / sports

ವುಶುನಲ್ಲಿ ಅವಳಿ ಸಹೋದರಿಯರ ಉನ್ನತ ಸಾಧನೆ: ಏಷ್ಯನ್ ಗೇಮ್ಸ್​ನ ಚಿನ್ನಕ್ಕೆ ಗುರಿ ಇಟ್ಟಿರುವ ಕಾಶ್ಮೀರಿ ಜೋಡಿ - ಅಯೀರಾ ಅನ್ಸಾ ಚಿಸ್ತಿ

ವುಶು ಕ್ರೀಡೆಯಲ್ಲಿ ಶ್ರೀನಗರದ ಅವಳಿ ಸಹೋದರಿಯರಾದ ಅಯೀರಾ ಮತ್ತು ಅನ್ಸಾ ಚಿಸ್ತಿ ಅಸಾಧಾರಣ ಸಾಧನೆ ಮಾಡಿದ್ದಾರೆ. ವಿವಿಧ ಹಂತಗಳ ವುಶು ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಪದಕಗಳನ್ನು ಗಳಿಸುವ ಮೂಲಕ ಇತರರಿಗೂ ಸ್ಫೂರ್ತಿಯಾಗಿದ್ದಾರೆ. ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಚಿಸ್ತಿ ಸಹೋದರಿಯರು ಚಿನ್ನದ ಪದಕವನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ishti Sisters in Wushu  Ayeera and Ansa Chishti  Asian Games 2026  Wushu sport  ವುಶು ಕ್ರೀಡೆ  ಅಯೀರಾ ಅನ್ಸಾ ಚಿಸ್ತಿ  ಏಷ್ಯನ್ ಗೇಮ್ಸ್ 2026
ವುಶುನಲ್ಲಿ ಚಿಸ್ತಿ ಅವಳಿ ಸಹೋದರಿಯರ ಉನ್ನತ ಸಾಧನೆ: ಜೋಡಿಗೆ 2026ರ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಪದಕ ಗೆಲ್ಲುವ ಗುರಿ

By ETV Bharat Karnataka Team

Published : Jan 8, 2024, 9:22 PM IST

ಶ್ರೀನಗರ (ಜಮ್ಮು ಕಾಶ್ಮೀರ):ಇಲ್ಲಿನ ಬೆಮಿನಾ ಪ್ರದೇಶದಲ್ಲಿರುವ ಅವಳಿ ಸಹೋದರಿಯರಾದ ಆಯೀರಾ ಹಸನ್ ಚಿಸ್ತಿ ಮತ್ತು ಅನ್ಸಾ ಹಸನ್ ಚಿಸ್ತಿ ವುಶು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವುಶು (ಸಮರ ಕಲೆಯ ಸ್ಪರ್ಧೆ ವಿಭಾಗ) ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. 18 ವರ್ಷ ವಯಸ್ಸಿನ ಡೈನಾಮಿಕ್ ಜೋಡಿ, ತಮ್ಮ ಅಸಾಧಾರಣ ತಂತ್ರ ಮತ್ತು ಆಕ್ರಮಣಕಾರಿ ಆಟದಿಂದ ಮಹಿಳಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ.

ಅನ್ಸಾ ಅವರಿಗಿಂತ 15 ನಿಮಿಷ ದೊಡ್ಡವರಾಗಿರುವ ಅಯೀರಾ ಅವರು ಬಲವಾದ ಕ್ರೀಡಾ ತಂತ್ರವನ್ನು ಹೊಂದಿದ್ದಾರೆ. ಆದರೆ, ಇವರಿಬ್ಬರು ಸಹೋದರಿಯರು ಆಕ್ರಮಣಕಾರಿ ಆಟಕ್ಕೆ ಹೆಸರು ವಾಸಿಯಾಗಿದ್ದಾರೆ. ಇದು ಅವರ ಯಶಸ್ಸಿನ ಕಥೆಯ ಅವಿಭಾಜ್ಯ ಅಂಗವಾಗಿದೆ. ಚಿಸ್ತಿ ಸಹೋದರಿಯರು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಜೋಡಿಯು ಪ್ರಸ್ತುತ 2026 ರ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ತಮ್ಮ ಗುರಿಯನ್ನು ಇಟ್ಟುಕೊಂಡಿದೆ. ತಮ್ಮ ಕ್ರೀಡಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ದಿನವಿಡೀ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಾರೆ.

ವುಶು ಕ್ರೀಡಾಪಟುಗಳು ಮಾತು:"ನಾವು 2017ರಲ್ಲಿ ವುಶು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಸಮರ ಕಲೆಗಳ ಕ್ರೀಡೆಯಾದ ವುಶುವನ್ನು ಇಷ್ಟಪಟ್ಟೆವು. ಏಕೆಂದರೆ, ಅದು ಕಿಕ್​ ಮತ್ತು ಪಂಚ್‌ಗಳ ಸಂಯೋಜನೆಯಾಗಿದೆ. ನನ್ನ ಅಭ್ಯಾಸದ ಮೊದಲ ದಿನವೇ ಪಂಚ್​ನಿಂದ ಒಬ್ಬ ಹುಡುಗನಿಗೆ ರಕ್ತಸ್ರಾವವಾಗುವುದನ್ನು ನೋಡಿದ್ದೆ. ಆದ್ರೆ, ನಾನು ಎಂದಿಗೂ ಹೆದರಲಿಲ್ಲ. ನಾನು ಈ ಆಟವನ್ನು ಆಡಬೇಕು, ಜಯಿಸಬೇಕು ಎಂದು ನಿರ್ಧರಿಸಿದೆ ಎಂದು ಕ್ರೀಡಾಪಟು ಅಯೀರಾ ETV ಭಾರತಕ್ಕೆ ತಿಳಿಸಿದರು.

''ಇಬ್ಬರೂ ಈಗ ಸಮಾನ ಸಂಖ್ಯೆಯ ಚಿನ್ನದ ಪದಕಗಳನ್ನು ಗಳಿಸಿದ್ದೇವೆ. ಈ ಕ್ರೀಡೆಯಲ್ಲಿ ಕಠಿಣ ಪರಿಶ್ರಮ ಮುಖ್ಯ. ವುಶುನಲ್ಲಿ ನಾವು ಯಾವಾಗಲೂ ನಮ್ಮನ್ನು 100 ಪ್ರತಿಶತವನ್ನು ತೊಡಗಿಸಿಕೊಮಡಿದ್ದೇವೆ. ಅಯೀರಾ ನನಗಿಂತ ಉತ್ತಮ ತಂತ್ರವನ್ನು ಹೊಂದಿದ್ದಾಳೆ. ಮತ್ತು ಅವಳು ನನಗಿಂತ ಉತ್ತಮ ಆಟಗಾರ್ತಿ. ನಾನು ಹೆಚ್ಚು ಕಲಿಯುತ್ತೇನೆ" ಎಂದು ಅಯೀರಾ ಅವರ ಸಹೋದರಿ ಅನ್ಸಾ ETV ಭಾರತಕ್ಕೆ ತಮ್ಮ ಅನುಭವ ಹಂಚಿಕೊಂಡರು.

"ನಾನು ಚಿನ್ನ ಗೆದ್ದಾಗ ನನಗೆ ಸಂತೋಷವಾಯಿತು. ಆದರೆ, ಅಯೀರಾ ಗಾಯದ ಕಾರಣ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ನಮ್ಮಿಬ್ಬರಿಗೂ ಚಿನ್ನದ ಪದಕ ಬಂದಿದ್ದರೆ, ಮತ್ತಷ್ಟು ಸಂತೋಷವಾಗುತ್ತಿತ್ತು" ಎಂದು ಅನ್ಸಾ ತಿಳಿಸಿದರು.

"ನಮ್ಮ ನಡುವೆ ಕೇವಲ ವಾದಗಳು ಮಾತ್ರ ಇಲ್ಲ, ಕಿಕ್ಸ್​ ಮತ್ತು ಪಂಚಸ್​ ಇವೆ. ನಾವು ಒಬ್ಬರನ್ನೊಬ್ಬರು ಸೋಲಿಸಿದ್ದೇವೆ. ಇದರಿಂದ ಸ್ಪರ್ಧೆಯ ಸಂದರ್ಭದಲ್ಲಿ ಆಟವಾಡುವಾಗ ನಮಗೆ ಸಹಾಯವಾಗುತ್ತದೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯೊಂದರಲ್ಲಿ ಗಾಯದಿಂದ ನಾನು ಬೆಳ್ಳಿಯನ್ನು ಕಳೆದುಕೊಂಡೆ. ನನ್ನ ಸಹೋದರಿ ಚಿನ್ನದ ಪದಕವನ್ನು ಗೆದ್ದಳು. ಆಗ ನನ್ನ ಬಗ್ಗೆ ನನಗೆ ನಿರಾಸೆ ಆಗಿತ್ತು. ಆದರೆ, ನನ್ನ ಸಹೋದರಿ ನನ್ನನ್ನು ಪ್ರೇರೇಪಿಸಿ ನನಗೆ ಶಕ್ತಿ ತುಂಬಿದ್ದಳು. ನನ್ನ ಸಹೋದರಿಗೆ ಚಿನ್ನದ ಪದಕ ಲಭಿಸಿದ್ದಕ್ಕೆ ನಾನೂ ಕೂಡಾ ಸಂತೋಷಪಟ್ಟಿದ್ದೆ ಎಂದು ಹೇಳುತ್ತಾರೆ ಅಯೀರಾ.

"ನಾವು ಇನ್ನೂ ಏನನ್ನೂ ಸಾಧಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. 2026 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವುದರ ಮೇಲೆ ನನ್ನ ಗಮನವಿದೆ" ಎಂದು ಅವರು, "ಒಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಒಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ಎರಡು ಬಾರಿ ಎದುರಾಳಿಗಳಾಗಿದ್ದೆವು. ಆದರೆ, ಆಟದ ನಂತರ ನಾವು ಕ್ಷಣಗಳನ್ನು ಇಂದಿಗೂ ಪ್ರೀತಿಸುತ್ತೇವೆ" ಎಂದರು.

"ಕಳೆದ ದಶಕದಲ್ಲಿ ಕಾಶ್ಮೀರದಲ್ಲಿ ವುಶು ಸಾಕಷ್ಟು ವಿಕಸನಗೊಂಡಿದೆ. ಆಟಗಾರರು ಈ ಕ್ರೀಡೆ ಬಗ್ಗೆ ವಿಶೇಷ ಗಮನಹರಿಸಿದ್ದಾರೆ ಮತ್ತು ತರಬೇತಿ ತಂತ್ರಗಳನ್ನು ಸಹ ಸುಧಾರಿಸಿಕೊಂಡಿದ್ದಾರೆ. ನಾವು ಟೈಟ್​ ಶೆಡ್ಯೂಲ್​ನಲ್ಲೂ ಉತ್ತಮವಾದ ಕಾರ್ಯವನ್ನು ಮಾಡಲು ಬಯಸುತ್ತೇವೆ'' ಎಂದು ಅಯೀರಾ ತಿಳಿಸಿದರು.

ವುಶು ಕ್ರೀಡೆಯಲ್ಲಿ ಉನ್ನತ ಸಾಧನೆ:12 ನೇ ತರಗತಿಯಲ್ಲಿ ಓದುತ್ತಿರುವ ಚಿಸ್ತಿ ಸಹೋದರಿಯರು ವುಶು ಕ್ರೀಡೆಯಲ್ಲಿ ಉನ್ನತವಾದ ಸಾಧನೆ ಮಾಡಿದ್ದಾರೆ. ಅವರು ಸವಾಲುಗಳು ಮತ್ತು ಗಾಯಗಳಿಂದ ಎಂದಿಗೂ ಹಿಂಜರಿಯದೆ ಮುನ್ನಡೆಯುತ್ತಿದ್ದಾರೆ. ದೂರದರ್ಶನದಲ್ಲಿ ಚೈನೀಸ್ ಮಾರ್ಷಲ್ ಆರ್ಟ್ಸ್ ಚಲನಚಿತ್ರಗಳಿಂದಲೇ ಸಹೋದರಿಯರಿಗೆ ವುಶು ಕ್ರೀಡೆ ಬಗ್ಗೆ ಆಸಕ್ತಿ ಮೂಡಿತು. ಅವರ ತಾಯಿ ಸಹೋದರಿಯರನ್ನು ವುಶು ಅಸೋಸಿಯೇಷನ್ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿಸಿದರು. ಈ ಸಹೋದರಿಯರ ಉತ್ತಮ ಕ್ರೀಡಾಪಟಗಳಾಗಿ ನಿರ್ಮಿಸುವುದರಲ್ಲಿ ತರಬೇತುದಾರ ಆಸಿಫ್ ಹುಸೇನ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

2026ರ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ:ಪೋಷಕರ ಬೆಂಬಲದ ಪ್ರಮುಖ ಪಾತ್ರವನ್ನು ಗುರುತಿಸಿರುವ ಚಿಸ್ತಿ ಸಹೋದರಿಯರು, ತಮಗೆ ನೀಡಿದ ಪ್ರೋತ್ಸಾಹ ಮತ್ತು ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿದರು. ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026 ರ ಮೇಲೆ ಅವರ ಕಣ್ಣುಗಳು ನೆಟ್ಟಿವೆ. ಅಯೀರಾ ಮತ್ತು ಅನ್ಸಾ ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಚಿನ್ನದ ಪದಕವನ್ನು ಜಯಿಸಿ, ಭಾರತಕ್ಕೆ ಕೀರ್ತಿ ತರಲು ಹಾತೊರೆಯುತ್ತಿದ್ದಾರೆ. ಅವಳಿ ಸಹೋದರಿಯರಿಗೆ ಯಶಸ್ಸು ಸಿಗಲಿ, ಭಾರತದ ಕೀರ್ತಿಯನ್ನು ಅವರು ಇನ್ನಷ್ಟು ಎತ್ತರಕ್ಕೆ ಬೆಳೆಸಲಿ ಎಂದು ಈಟಿವಿ ಭಾರತ ಕಡೆಯಿಂದ ಹಾರೈಸುತ್ತೇವೆ.

ಇದನ್ನೂ ಓದಿ:ಉಡುಪಿ ಸೇರಿದಂತೆ ನಮ್ಮಲ್ಲೂ ಅದ್ಭುತ ಬೀಚ್‌ಗಳಿವೆ: ಮಾಲ್ಡೀವ್ಸ್‌ಗೆ ಕ್ರಿಕೆಟಿಗರ ಟಾಂಗ್‌

ABOUT THE AUTHOR

...view details