ನವದೆಹಲಿ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತದ ಮನು ಭಾಕರ್, ರಾಹಿ ಸರ್ನೋಬತ್ ಮತ್ತು ಚಿಂಕಿ ಯಾದವ್ ಅವರನ್ನೊಳಗೊಂಡ ಮಹಿಳಾ ತಂಡ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭಾರತೀಯ ತಂಡ 17-7 ಅಂಕಗಳ ಅಂತರದಿಂದ ಪೋಲೆಂಡ್ ತಂಡವನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ. ಇದು ಭಾರತ ತಂಡ ವಿಶ್ವಕಪ್ನಲ್ಲಿ ಗೆದ್ದಂತಹ 10ನೇ ಸ್ವರ್ಣ ಪದಕವಾಗಿದೆ. ವಿಶೇಷವೆಂದರೆ, ನಿನ್ನೆ ನಡೆದಿದ್ದ 25 ಮೀಟರ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಎಲ್ಲಾ ಮೂರು ಪದಗಳನ್ನು ಇವರು ತಮ್ಮದಾಗಿಸಿಕೊಂಡಿದ್ದರು. ಚಿಂಕಿ ಯಾದವ್ ಚಿನ್ನ ಗೆದ್ದರೆ, ಸರ್ನ್ಬೋಟ್ ಮತ್ತು ಭಾಕರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪದಕ ಸಾಧನೆ ಮಾಡಿದ್ದರು.