ಕರ್ನಾಟಕ

karnataka

ETV Bharat / sports

ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್‌: ಚಿನ್ನದ ಪದಕ ಗೆದ್ದ ಮಹಿಳೆಯರ ತಂಡ - ರ್‍ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆ

ಐಎಸ್​ಎಸ್​ಎಫ್​ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಮೂವರು ಸ್ಪರ್ಧಿಗಳ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮಹಿಳೆಯರ ತಂಡ ಚಿನ್ನದ ಪದಕ ಸಂಪಾದಿಸಿತು.

ISSF Junior World C'ship: India women's 25m Pistol team wins gold
ಐಎಸ್​ಎಸ್​ಎಫ್​ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್: ಚಿನ್ನದ ಪದಕ ಗೆದ್ದ ಮಹಿಳೆಯರ ತಂಡ

By

Published : Oct 7, 2021, 10:29 AM IST

ಲಿಮಾ (ಪೆರು):ಭಾರತದ ಮಹಿಳಾ ಶೂಟರ್​ಗಳ ತಂಡ ಪೆರು ದೇಶದ ಲಿಮಾದಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್​ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ.

25 ಮೀಟರ್ ಪಿಸ್ತೂಲ್ ಇವೆಂಟ್​​ನಲ್ಲಿ ಮನು ಭಾಕರ್, ರಿದಮ್ ಸಾಂಗ್ವಾನ್ ಮತ್ತು ನಮ್ಯಾ ಕಪೂರ್ ಅವರಿದ್ದ ಭಾರತೀಯ ತಂಡ ಅಮೆರಿಕದ ಅಬ್ಬಿ ರಸೆಲ್ ಲೆವೆರೆಟ್, ಕಟೆಲಿನ್ ಮಾರ್ಗನ್ ಅಬೆಲ್ನ್ ಮತ್ತು ಅದಾ ಕ್ಲೌಡಿಯಾ ಕೊರ್ಕಿನ್ ಅವರಿದ್ದ ತಂಡವನ್ನು ಫೈನಲ್​ನಲ್ಲಿ 16-4 ಗೋಲುಗಳಿಂದ ಸೋಲಿಸಿ ಚಿನ್ನದ ಸಾಧನೆ ಮಾಡಿದರು.

25 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ವಿಭಾಗದಲ್ಲಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಇದಕ್ಕೂ ಮೊದಲು 14 ವರ್ಷದ ನಾಯ್ಮ ಕಪೂರ್ ಮನು ಭಾಕರ್ ಅವರ ಜೊತೆಗೂಡಿ ಲಿಮಾದ ಲಾಸ್ ಪಲ್ಮಾಸ್ ಶೂಟಿಂಗ್ ರೇಂಜ್​ನಲ್ಲಿ 25 ಮೀಟರ್ ಪಿಸ್ತೂಲ್ ಫೈರ್​ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಈಗ ಜೂನಿಯರ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ ಭಾರತೀಯ ಶೂಟರ್​ಗಳು 19 ಪದಕಗಳನ್ನು ಗೆದ್ದಿದ್ದು, ಪದಕ ಬೇಟೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಇತಿಹಾಸ ಬರೆದ ಕುಸ್ತಿಪಟು ಅನ್ಶು ಮಲಿಕ್.. ವಿಶ್ವಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಿದ ಮೊದಲ ಭಾರತೀಯ ಮಹಿಳೆ

ABOUT THE AUTHOR

...view details