ಜ್ಯುರಿಕ್:ಕೊರೊನಾ ಕಾರಣದಿಂದ ವಿಳಂಬವಾಗಿರುವ ಟೋಕಿಯೊ 2020 ಕ್ರೀಡಾಕೂಟದ ಬಗ್ಗೆ ಇರುವ ಉಹಾಪೋಹಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಅವರು ತಳ್ಳಿಹಾಕಿದ್ದಾರೆ. "ಈಗ ಆಟಗಳು ನಡೆಯುತ್ತವೆಯೇ ಎಂಬುದು ಪ್ರಶ್ನೆಯಲ್ಲ, ಅವು ಹೇಗೆ ನಡೆಯುತ್ತವೆ ಎಂಬುದೇ ಪ್ರಶ್ನೆ" ಎಂದಿದ್ದಾರೆ.
ಕೊರೊನಾ ವೈರಸ್ನ ಸ್ವರೂಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರೇಕ್ಷಕರು ಬರುವುದರ ಬಗ್ಗೆ ಮತ್ತು ಕ್ರೀಡಾಪಟುಗಳು ಸ್ವೀಕರಿಸುವ 'ಬಬಲ್' ಬಗ್ಗೆ ಯಾವುದೇ ಭರವಸೆಗಳನ್ನು ನೀಡಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.
ಓದಿ:ಸಿರಾಜ್ ಸಾಧನೆ ಹಿಂದಿನ ಗುಟ್ಟು ಬಿಚ್ಚಿಟ್ಟ ಬೌಲಿಂಗ್ ಕೋಚ್ ಭರತ್ ಅರುಣ್
ಬುಧವಾರ ನಡೆದ ಕಾರ್ಯನಿರ್ವಾಹಕ ಮಂಡಳಿಯ ಸಭೆಯ ನಂತರ ಮಾತನಾಡಿದ ಬಾಕ್, ಕ್ರೀಡಾಕೂಟವನ್ನು ಮತ್ತೆ ಒಲಿಂಪಿಕ್ ಚಕ್ರಕ್ಕೆ ತರಬಹುದೇ ಅಥವಾ ಇತರ ನಗರಗಳಿಗೆ ಸ್ಥಳಾಂತರಿಸಬಹುದೇ ಎಂಬುದನ್ನು ಚರ್ಚಿಸಲಾಯಿತು. ಪ್ರಸ್ತುತ ಸಾಂಕ್ರಾಮಿಕದ ಮಧ್ಯೆ ಕ್ರೀಡಾಕೂಟವನ್ನು ಆಯೋಜಿಸಬಹುದು, ಆದ್ರೆ ಸೋಂಕು ಹರಡಿದ್ರೆ ಯಾರು ಹೊಣೆಗಾರರು ಎಂಬುದನ್ನು ಚರ್ಚಿಸಲಾಯಿತು ಎಂದರು.
"ಈ ಸಮಯದಲ್ಲಿ ಕ್ರೀಡೆಗಳನ್ನು ಆಯೋಜಿಸುವುದು ಸುರಕ್ಷಿತಲ್ಲ, ಹಾಗಾಗಿ ಅದು ಸಾಧ್ಯವಿಲ್ಲ" ಎಂದು ಥಾಮಸ್ ಬಾಕ್ ಹೇಳಿದರು.