ಕರ್ನಾಟಕ

karnataka

ETV Bharat / sports

Lionel Messi: ಮೆಸ್ಸಿಯ ರೋಮಾಂಚನಕಾರಿ ಫ್ರೀ ಕಿಕ್.. ಡಲ್ಲಾಸ್​ ವಿರುದ್ಧ ಮಿಯಾಮಿಗೆ ಗೆಲುವು - ETV Bharath Kannada news

ಮಿಯಾಮಿ ಪರ ಆಡುತ್ತಿರುವ ಲಿಯೋನೆಲ್ ಮೆಸ್ಸಿ ನಿನ್ನೆಯ ಪಂದ್ಯದಲ್ಲಿ ಗಳಿಸಿದ ಗೋಲ್​ ಟ್ವಿಟರ್​ನಲ್ಲಿ ವೈರಲ್​ ಆಗುತ್ತಿದೆ.

Lionel Messi
ಲಿಯೋನೆಲ್ ಮೆಸ್ಸಿ

By

Published : Aug 7, 2023, 1:58 PM IST

ನವದೆಹಲಿ: ಕಾಲ್ಚೆಂಡಿನ ಆಟದಲ್ಲಿ ಸೂಪರ್​ ಸ್ಟಾರ್​ ಆಗಿರುವ ಲಿಯೋನೆಲ್ ಮೆಸ್ಸಿ ನಿನ್ನೆ ನಡೆದ ಪಂದ್ಯದಲ್ಲಿ ತಮ್ಮ ಕಾಲ್ಚೆಳಕವನ್ನು ತೋರಿದ್ದಾರೆ. ಇಂಟರ್ ಮಿಯಾಮಿಗಾಗಿ ಅಡುತ್ತಿರುವ ಅವರು ಎಫ್​ಸಿ ಡಲ್ಲಾಸ್​ ವಿರುದ್ಧದ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನ ಫುಟ್ಬಾಲ್​ ಪ್ರಿಯರಿಗೆ ಅಷ್ಟೇ ಅಲ್ಲದೇ ಆಟವನ್ನು ನೋಡಿದ ಇತರರಿಗೂ ಒಮ್ಮೆಗೆ ರೋಮಾಂಚನವನ್ನು ಉಂಟುಮಾಡಿದೆ.

ಲೀಗ್​ ಕಪ್​ನಲ್ಲಿ ಇಂಟರ್​ ಮಿಯಾಮಿ ಪರ ಆಡುತ್ತಿರುವ ಮೆಸ್ಸಿ ಪೆನಾಲ್ಟಿ ಕಿಕ್‌ನಲ್ಲಿ ಎಫ್‌ಸಿ ಡಲ್ಲಾಸ್ ವಿರುದ್ಧ ನಾಲ್ಕನೇ ಗೋಲು ಗಳಿಸಿದ್ದು ಈಗ ವೈರಲ್ ಆಗುತ್ತಿದೆ. ಮೆಸ್ಸಿ ಗೋಲ್​ ಗಳಿಸಿದ್ದರಿಂದಾಗ 4-4 ಸಮಬಲವನ್ನು ಇಂಟರ್​ ಮಿಯಾಮಿ ಸಾಧಿಸಿತು. ಇದರಿಂದ ಅಂತಿಮವಾಗಿ ಪಂದ್ಯದಲ್ಲಿ 5-4ರಿಂದ ಗೆಲುವು ಸಹ ದಾಖಲಿಸಿತು.

85ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಮೆಸ್ಸಿ ಕರಾರುವಕ್ಕಾಗಿ ಬಳಸಿಕೊಂಡಿದ್ದಾರೆ. ಎಫ್​ಸಿ ಡಲ್ಲಾಸ್​ನ ಗೋಲ್ ಕೀಪರ​ನ್ನು ವಂಚಿಸಿ ಗಳಿಸಿದ ಗೋಲ್​ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಘಾರಕ್ಕೆ ಕಾರಣವಾಯಿತು. ನೆಟ್​​ನ ಕಾರ್ನರ್​​ಗೆ ಗುರಿಯಾಗಿಸಿ ಮೆಸ್ಸಿ ಒದ್ದಿದ್ದ ಚೆಂಡು ನೇರವಾಗಿ ನೆಟ್​​ನ್ನು ಸೇರಿತ್ತು. ಗೋಲ್​ ಕೀಪರ್​ಗೆ ಅದನ್ನು ತಡೆಯಲೂ ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ಮಿಯಾಮಿ ನಂತರ ಕಮ್​​ಬ್ಯಾಕ್​ ಮಾಡಿ ಗೆಲುವು ದಾಖಲಿಸಿತು.

ಪಂದ್ಯ ಹೀಗಿತ್ತು: ಇಂಟರ್ ಮಿಯಾಮಿ ಆರಂಭದ 6ನೇ ನಿಮಿಷದಲ್ಲೇ ಒಂದು ಗೋಲ್​ ಗಳಿಸಿತು. ಆದರೆ ನಂತರ ಡಲ್ಲಾಸ್​ ಮುನ್ನಡೆಯನ್ನು ಸಾಧಿಸಿತು. ಮೆಸ್ಸಿ ತಂಡ 1-2 ರಿಂದ ಹಿನ್ನಡೆ ಅನುಭವಿಸಿತು. ನಂತರವೂ ಡೆಲ್ಲಾಸ್​ ಗೋಲ್​ ಪಡೆದು 3-1 ರಿಂದ ಮುನ್ನಡೆಯನ್ನು ಪಡೆದುಕೊಂಡಿತ್ತು. 68 ನೇ ನಿಮಿಷದಲ್ಲಿ ಮಿಯಾಮಿಯ ಅಟಗಾರ ರಾಬರ್ಟ್​ ಟೇಲರ್​ ಅವರು ಗಳಿಸಿ ಗೋಲ್​ನಿಂದ ಅಂತರ ಸ್ಪಲ್ಪ ಕಡಿಮೆ ಆಯಿತು. ನಂತರ ಮೆಸ್ಸಿಗೆ ಸಿಕ್ಕೆ ಫ್ರೀ ಕಿಕ್ ನಿಂದ ಸಮಬಲ ಸಾದಿಸಿತು. ಪಂದ್ಯದ ಕೊನೆಯಲ್ಲಿ ಸಿಕ್ಕ ಫೆನಾಲ್ಟಿ ಶೂಟೌಟ್​ನಲ್ಲಿ ಮಿಯಾಮಿ ಗೋಲ್ ಪಡೆದುಕೊಂಡು ಲೀಗ್ ಕಪ್‌ನ ಕ್ವಾರ್ಟರ್-ಫೈನಲ್‌ಗೆ ಸ್ಥಾನವನ್ನು ಪಡೆದುಕೊಂಡಿದೆ.

ಹೆಚ್ಚು ಗೋಲ್​ ಗಳಿಸಿದ ಆಟಗಾರ: ಮೇಜರ್ ಲೀಗ್ ಸಾಕರ್ (ಎಮ್​ಎಲ್​ಎಸ್​) ಕ್ಲಬ್‌ಗಾಗಿ ಆಡುತ್ತಿರುವ ಮೆಸ್ಸಿ ಲೀಗ್‌ಗಳ ಕಪ್ ಪಂದ್ಯಗಳಲ್ಲಿ ಏಳು ಗೋಲುಗಳನ್ನು ಗಳಿಸಿದರು. ನಿನ್ನೆ ನಡೆದ ಪಂದ್ಯದಲ್ಲಿ ಮಿಯಾಮಿ ಪರ ಎರಡು ಗೋಲ್​ ಗಳಿಸಿದ ನಂತರ 2023 ರಲ್ಲಿ ಇಂಟರ್ ಮಿಯಾಮಿಯ ಟಾಪ್ ಸ್ಕೋರರ್ ಆಗಿದ್ದಾರೆ.

ಇದನ್ನೂ ಓದಿ:Archery Championships: ಚಿನ್ನ ಗೆದ್ದ ಅದಿತಿ, ಓಜಸ್; ವಿಶ್ವ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಐತಿಹಾಸಿಕ ಸಾಧನೆ

ABOUT THE AUTHOR

...view details