ಕರ್ನಾಟಕ

karnataka

ETV Bharat / sports

Indonesia Open: ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಓಪನ್‌ನಲ್ಲಿ ಫೈನಲ್​ ಪ್ರವೇಶಿಸಿದ ಚಿರಾಗ್ ಶೆಟ್ಟಿ, ಸಾತ್ವಿಕ್‌ ಜೋಡಿ - ETV Bharath Kannada news

ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ವರ್ಲ್ಡ್ ಟೂರ್ ಸೂಪರ್ 1000 ಸ್ಫರ್ಧೆಯಲ್ಲಿ ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಮೊದಲ ಬಾರಿಗೆ ಫೈನಲ್​ ಪ್ರವೇಶ ಪಡೆದಿವೆ.

ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಓಪನ್‌
ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಓಪನ್‌

By

Published : Jun 17, 2023, 9:41 PM IST

ಜಕಾರ್ತ (ಇಂಡೋನೇಷ್ಯಾ): ಭಾರತದ ಅಗ್ರಮಾನ್ಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್​ನಲ್ಲಿ ಎಚ್.ಎಸ್. ಪ್ರಣಯ್ ಇಂಡೋನೇಷ್ಯಾ ಓಪನ್‌ನ ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೋತರು.

ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾ ಓಪನ್ ಪುರುಷರ ಡಬಲ್ಸ್ ಫೈನಲ್‌ಗೆ ತಮ್ಮ ಚೊಚ್ಚಲ ಪ್ರವೇಶ ಪಡೆದುಕೊಂಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ (BWF )ವರ್ಲ್ಡ್ ಟೂರ್ ಸೂಪರ್ 1000 ಈವೆಂಟ್‌ನಲ್ಲಿ ಮೊದಲ ಬಾರಿಗೆ ಈ ಹಂತವನ್ನು ತಲುಪಿದ್ದಾರೆ. ಮೇನಲ್ಲಿ ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದಿದ್ದ ಪ್ರಣಯ್ ಸೆಮಿಸ್​ನಲ್ಲಿ ಮುಗ್ಗರಿಸಿದರು. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪ್ರಣಯ್ 46 ನಿಮಿಷಗಳಲ್ಲಿ 15-21, 15-21 ರಿಂದ ನೇರ ಸೆಟ್​ನ ಸೋಲನುಭವಿಸಿದರು.

ವಿಶ್ವದ ಆರನೇ ಶ್ರೇಯಾಂಕದ ಮತ್ತು ಭಾರತದ ಏಳನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಅವರು ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಅವರನ್ನು ಮೂರು ಕಠಿಣ ಗೇಮ್‌ಗಳಲ್ಲಿ 17-21, 21-19, 21-18 ರಿಂದ ಮೊದಲ ಸೆಮಿಫೈನಲ್‌ನಲ್ಲಿ ಸೋಲಿಸಿದರು.

ಫೈನಲ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಎರಡನೇ ಸೆಮಿಫೈನಲ್‌ನ ವಿಜೇತರನ್ನು ಎದುರಿಸಲಿದ್ದಾರೆ. ಎರಡನೇ ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಎರಡನೇ ಶ್ರೇಯಾಂಕದ ಜೋಡಿ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರು ಬಿಡಬ್ಲ್ಯೂಎಫ್ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ 25 ನೇ ರ್‍ಯಾಂಕಿಂಗ್​ನ ಇಂಡೋನೇಷ್ಯಾದ ಪ್ರಮುದ್ಯ ಕುಸುಮವರ್ಧನ ಮತ್ತು ಯೆರೆಮಿಯಾ ರಂಬಿಟನ್ ನಡುವೆ ನಡೆಯಲಿದೆ.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಆಟಗಾರರು ಮೊದಲ ಸೆಟ್​ನಲ್ಲಿ ಸೋಲನುಭವಿಸಿದರು. ನಂತರ ಕಮ್​ಬ್ಯಾಕ್​ ಮಾಡಿದ ಜೋಡಿ ಎರಡು ಸೆಟ್​ನ್ನು ಸಲೀಸಾಗಿ ಗೆದ್ದು ಬೀಗಿದರು. ಮೊದಲ ಸೆಟ್​ನಲ್ಲಿ ಇಬ್ಬರು ಜೋರಾದ ಹೋರಾಟವನ್ನು ತೋರಿದರೂ ಎದರುರಾಳಿಗಳು ಪ್ರಾಬಲ್ಯ ಮೆರೆದರು. ಇದರಿಂದ 17-21 ರಿಂದ ಸೆಟ್​ ಅವರ ಪಾಲಾಗಿತ್ತು.

ಕೊರಿಯನ್ನರು ಮೊದಲ ಸೆಟ್​ನಲ್ಲಿ 14-6 ಮುನ್ನಡೆಯನ್ನು ಪಡೆದುಕೊಂಡು ಆಟವನ್ನು ಆಡುತ್ತಿದ್ದರು. ಸಾತ್ವಿಕ್ ಮತ್ತು ಚಿರಾಗ್ ಈ ಅಂತರವನ್ನು 14-18ಕ್ಕೆ ಮತ್ತು ನಂತರ 16-19ಕ್ಕೆ ಇಳಿಸಿದರು. ಆದರೆ ಕೊರಿಯಾ ಜೋಡಿ ನಾಲ್ಕು ಗೇಮ್ ಪಾಯಿಂಟ್‌ಗಳನ್ನು ಸತತವಾಗಿ ಗಳಿಸಿತು. ಇದರಿಂದ ಕಾಂಗ್ ಮತ್ತು ಸಿಯೊ 21-17 ರಲ್ಲಿ ಗೇಮ್ ಅನ್ನು ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ, ಸಾತ್ವಿಕ್ ಮತ್ತು ಚಿರಾಗ್ 3-1 ರಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರು, ಅವರು ಶೀಘ್ರದಲ್ಲೇ 7-3 ಮತ್ತು 11-4 ಗೆ ವಿಸ್ತರಿಸಿದರು. ಕೊರಿಯನ್ನರು ಅಂತರವನ್ನು 12-15 ಕ್ಕೆ ತಗ್ಗಿಸಿದರು ಮತ್ತು ನಂತರ ಅದನ್ನು 16-18 ಕ್ಕೆ ಇಳಿಸಿದರು. ಆದರೆ ಭಾರತೀಯರು ಸತತ ಮೂರು ಪಾಯಿಂಟ್ಸ್ ಗೆದ್ದು ನಾಲ್ಕು ಗೇಮ್ ಪಾಯಿಂಟ್ ಗಳಿಸಿದರು. ಕೊರಿಯನ್ನರು ಮೂರು ಗೇಮ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. ಆದರೆ ಭಾರತೀಯ ಜೋಡಿಯನ್ನು ನಿರಾಕರಿಸಲಾಗಲಿಲ್ಲ ಮತ್ತು ಅವರು 21-17 ಗೇಮ್‌ಗಳನ್ನು ಗೆದ್ದರು ಇದರಿಂದ ಫೈನಲ್​ ಪ್ರವೇಶದ ನಿರ್ಣಯಕ್ಕೆ ಕೊನೆಯ ಗೇಮ್​ ಆಡಿಸಬೇಕಾಯಿತು.

ಮೂರನೇ ಸೆಟ್​​ನಲ್ಲಿ ಎರಡು ಜೋಡಿಗಳು 5-5 ರ ಸಮಬಲದಿಂದ ಆರಂಭವನ್ನು ಪಡೆದರು. ನಂತರ ಭಾರತದ ಜೋಡಿ ಏಳು ಪಾಯಿಂಟ್‌ಗಳನ್ನು ಗೆದ್ದು 12-5 ಮುನ್ನಡೆ ಸಾಧಿಸಿದರು. ಆದಾಗ್ಯೂ, ಕೊರಿಯನ್ನರು 9-12 ಅಂಕಗಳನ್ನು ಕಡಿಮೆ ಮಾಡಿದರು. ಈ ವೇಳೆ ಬಲವಾದ ಹೋರಾಟ ಎದುರಾಳಿಗಳಿಂದ ಭಾರತೀಯ ಜೋಡಿ ಎದುರಿಸಿತು. ಮತ್ತೆ ಎರಡು ಜೋಡಿ 16-16 ಸಮ ಬಲಕ್ಕೆ ಸಾಧಿಸಿದವು. ನಂತರ ಭಾರತೀಯರು ಸತತವಾಗಿ ಮೂರು ಪಾಯಿಂಟ್‌ಗಳನ್ನು ಗೆದ್ದರು ಮತ್ತು 20-17 ರಲ್ಲಿ ಮ್ಯಾಚ್ ಪಾಯಿಂಟ್‌ಗಳನ್ನು ಗಳಿಸಿದರು ಮತ್ತು 21-18 ರಲ್ಲಿ ವಿಜಯವನ್ನು ಪಾಂಯಿಂಟ್​ ಸಾಧಿಸಿ ಫೈನಲ್​ಗೆ ಲಗ್ಗೆ ಇಟ್ಟರು. 67 ನಿಮಿಷಗಳ ಬಿರುಸಿನ ಹೋರಾಟದಲ್ಲಿ ಭಾರತದ ಜೋಡಿಗೆ ಜಯ ಮಾಲೆ ದೊರಕಿತ್ತು.

ಇದನ್ನೂ ಓದಿ:Indonesia Open: ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಓಪನ್‌ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ ಚಿರಾಗ್ ಶೆಟ್ಟಿ, ಸಾತ್ವಿಕ್‌ ಜೋಡಿ

ABOUT THE AUTHOR

...view details