ಬೀಜಿಂಗ್(ಚೀನಾ): ಕೋವಿಡ್ 19 ಪಾಸಿಟಿವ್ ವರದಿ ಪಡೆದುಕೊಂಡಿದ್ದ ಚಳಿಗಾಲದ ಒಲಿಂಪಿಕ್ಸ್ನ ಭಾರತ ತಂಡದ ಮ್ಯಾನೇಜರ್ ಮೊಹಮ್ಮದ್ ಅಬ್ಬಾಸ್ ವಾನಿ ಅವರಿಗೆ 24 ಗಂಟೆಗಳ ನಂತರ ನಡೆಸಿದ ಮತ್ತೊಂದು ಟೆಸ್ಟ್ನಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಗುರುವಾರ ಭಾರತ ಒಲಿಂಪಿಕ್ ಅಸೋಸಿಯೇಷನ್ ತಿಳಿಸಿದೆ.
ಬುಧವಾರ ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ನಡೆಸಿದ್ದ ಕೋವಿಡ್ 19 ಟೆಸ್ಟ್ನಲ್ಲಿ ಪಾಸಿಟಿವ್ ಬಂದಿತ್ತು. ಇಂದು ನಡೆಸಿದ ಎರಡು ಪರೀಕ್ಷೆಗಳಲ್ಲಿ ಅವರಿಗೆ ನೆಗೆಟಿವ್ ಬಂದಿದೆ ಎಂದು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮಾಹಿತಿ ನೀಡಿದ್ದಾರೆ.
"ಭಾರತೀಯ ತಂಡದ ಮ್ಯಾನೇಜರ್ ಅಬ್ಬಾಸ್ ವಾನಿ ಅವರಿಗೆ ಕಳೆದ 24 ಗಂಟೆಗಳಲ್ಲಿ ಮಾಡಿದ 2 ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಹಾಗಾಗಿ ಬೀಜಿಂಗ್‌ನಲ್ಲಿರುವ ಇಡೀ ಭಾರತೀಯ ತಂಡವು ಕೋವಿಡ್ ಮುಕ್ತವಾಗಿದೆ. ಪ್ರತಿಯೊಬ್ಬರ ಆರೈಕೆ ಮಾಡಿದ್ದಕ್ಕಾಗಿ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಬಾತ್ರಾ ತಿಳಿಸಿದ್ದಾರೆ.
ಫೆಬ್ರವರಿ 4ರಿಂದ 30ರವರೆಗೆ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿರುವ 6 ಸದಸ್ಯರ ಭಾಗವಾಗಿದ್ದಾರೆ. ಆದರೆ ಆರಿಫ್ ಏಕಮಾತ್ರ ಕ್ರೀಡಾಪಟುವಾಗಿ ಸ್ಪರ್ಧಿಸಲಿದ್ದಾರೆ. ಅವರು ಸ್ಲಾಲೋಮ್ ಮತ್ತು ಜೈಂಟ್ ಸ್ಲಾಸೋಮ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ:ಅನುಷ್ಕಾ ಬೆಂಗಳೂರಿನಲ್ಲಿ ನನಗಿಂತ ಹೆಚ್ಚಿನ ಸಮಯ ಕಳೆದಿದ್ದಾರೆ, ಈ ನಗರದ ಜೊತೆ ವಿಶೇಷ ಬಾಂಧವ್ಯವಿದೆ: ವಿರಾಟ್