ಕರ್ನಾಟಕ

karnataka

ETV Bharat / sports

ದೇಶದ ಮೊದಲ ಕ್ರೀಡಾಪಟುಗಳಾಗಿ ವ್ಯಾಕ್ಸಿನ್​ ಪಡೆದ ಒಲಿಂಪಿಕ್ ಬಾಂಡ್​ ಬಿಲ್ಲುಗಾರರು

ಪುನರಾವರ್ತಿತ ಅರ್ಚರ್ಸ್​(ಬಿಲ್ಲುಗಾರರ) ರಾಷ್ಟ್ರೀಯ ಶಿಬಿರ ನಡೆಯುತ್ತಿರುವ ಆರ್ಮಿ ಸ್ಪೋರ್ಟ್ಸ್ ಇನ್​ಸ್ಟಿಟ್ಯೂಟ್ ಕೈಗೊಂಡ ಉಪಕ್ರಮದಲ್ಲಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಎಲ್ಲ ಎಂಟು ಹಿರಿಯ ಬಿಲ್ಲುಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಇಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಎರಡನೇ ಹಂತದ ಕೋವಿಡ್ 19 ಚುಚ್ಚುಮದ್ದನ್ನು​ ಪಡೆದುಕೊಂಡರು.

ಒಲಿಂಪಿಕ್ ಬಾಂಡ್​ ಬಿಲ್ಲುಗಾರರು
ಒಲಿಂಪಿಕ್ ಬಾಂಡ್​ ಬಿಲ್ಲುಗಾರರು

By

Published : Apr 7, 2021, 5:29 PM IST

ಪುಣೆ:ಭಾರತದ ಒಲಿಂಪಿಕ್ ಬಾಂಡ್​ ಅರ್ಚರಿ ಪಟುಗಳು ಬುಧವಾರ ತಮ್ಮ ಎರಡನೇ ಹಂತದ ಕೋವಿಡ್ 19 ವ್ಯಾಕ್ಸಿನ್​ ಪಡೆದಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಸಂಪೂರ್ಣ ವ್ಯಾಕ್ಸಿನ್ ಪಡೆದ ದೇಶದ ಮೊದಲ ಅಥ್ಲೀಟ್​ಗಳು ಎನಿಸಿಕೊಂಡಿದ್ದಾರೆ.

ಪುನರಾವರ್ತಿತ ಬಿಲ್ಲುಗಾರರ ರಾಷ್ಟ್ರೀಯ ಶಿಬಿರ ನಡೆಯುತ್ತಿರುವ ಆರ್ಮಿ ಸ್ಪೋರ್ಟ್ಸ್ ಇನ್​ಸ್ಟಿಟ್ಯೂಟ್ ಕೈಗೊಂಡ ಉಪಕ್ರಮದಲ್ಲಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಎಲ್ಲ ಎಂಟು ಹಿರಿಯ ಬಿಲ್ಲುಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಇಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಎರಡನೇ ಹಂತದ ಕೋವಿಡ್ 19 ಚುಚ್ಚುಮದ್ದನ್ನು​ ಪಡೆದು ಕೊಂಡರು.

ಪುರುಷರ ವಿಭಾಗದಲ್ಲಿ ಅತನು ದಾಸ್​, ತರುಣ್​ದೀಪ್​ ರಾಯ್​, ಪ್ರವೀಣ್​ ಜಾಧವ್​, ಬಿ ಧೀರಜ್​(ರಿಸರ್ವ್​) ಮತ್ತು ಮಹಿಳೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ, ಅಂಕಿತ ಭಾಕತ್, ಕೋಮಲಿಕಾ ಬಾರಿ ಹಾಗೂ ಮಧು ವಿದ್ವಾನ್​ ಚುಚ್ಚುಮದ್ದನ್ನು ಪಡೆದರು.

ಇದನ್ನು ಓದಿ: ಭಾರತದಲ್ಲಿ ಯೋಜಿಸಿದಂತೆ ಟಿ20 ವಿಶ್ವಕಪ್​ ನಡೆಯಲಿದೆ : ಐಸಿಸಿ ಸಿಇಒ

ಅತನು ದಾಸ್​ ಮತ್ತು ಮಾಜಿ ನಂಬರ್​ ಒನ್​ ಆಟಗಾರ್ತಿ ದೀಪಿಕಾ ಕುಮಾರಿ ಸೇರಿದಂತೆ ಎರಡನೇ ಡೋಸ್​ ವ್ಯಾಕ್ಸಿನ್​ ತೆಗೆದುಕೊಂಡ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲಾತಾಣಗಳ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಆರ್ಮಿ ಸ್ಪೋರ್ಟ್ಸ್​ ಇನ್​ಸ್ಟಿಟ್ಯೂಟ್​ಗೆ ಧನ್ಯವಾದ ತಿಳಿಸಿದ್ದಾರೆ.

ಈ ಅರ್ಚರಿ ಪಟುಗಳು ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಏಪ್ರಿಲ್ 19ರಿಂದ ಆರಂಭವಾಗಲಿರುವ ವಿಶ್ವಕಪ್​ನಲ್ಲಿ ಸ್ಪರ್ಧಿಸಲಿದ್ದಾರೆ.

ABOUT THE AUTHOR

...view details