ಕರ್ನಾಟಕ

karnataka

ETV Bharat / sports

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತದ ಬಿಂದ್ಯಾರಾಣಿ ದೇವಿ - ETV Bharath Kannada news

2023ರ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್​ನ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ 194 ಕೆಜಿ ಲಿಫ್ಟ್​ ಮಾಡಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತದ ಬಿಂದ್ಯಾರಾಣಿ ದೇವಿ
India's Bindyarani Devi wins silver at Asian Championships

By

Published : May 6, 2023, 6:45 PM IST

ಜಿಂಜು (ಕೊರಿಯಾ):ಶನಿವಾರ ಇಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2023ರ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಅವರು ಸ್ನ್ಯಾಚ್‌ ವಿಭಾಗದಲ್ಲಿ 83 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ ವಿಭಾಗದಲ್ಲಿ 111 ಕೆಜಿ ಒಟ್ಟು 194 ಕೆಜಿ ವೇಟ್‌ಲಿಫ್ಟಿಂಗ್ ಮಾಡಿದ್ದಕ್ಕಾಗಿ ಬೆಳ್ಳಿ ಪದಕ ಒಲಿದಿದೆ.

ಕಾಮನ್‌ವೆಲ್ತ್ ಗೇಮ್ಸ್ 2022ರ ಪದಕ ವಿಜೇತರು 80 ಕೆಜಿ ಸ್ನ್ಯಾಚ್‌ನೊಂದಿಗೆ ಸ್ಪರ್ಧೆ ಪ್ರಾರಂಭಿಸಿದರು. ಎರಡನೇ ಪ್ರಯತ್ನದಲ್ಲಿ ಅವರು 83 ಕೆ.ಜಿ. ಭಾರ ಎತ್ತಿದರೆ ಅಂತಿಮ ಪ್ರಯತ್ನದಲ್ಲಿ ಅವರು 85 ಕೆಜಿ ಬಾರ ಎತ್ತಿದರು. ಆದರೆ, ಅದನ್ನು ನೋ-ಲಿಫ್ಟ್ ಎಂದು ಘೋಷಿಸಲಾಯಿತು.

ಕ್ಲೀನ್ ಮತ್ತು ಜರ್ಕ್‌ನಲ್ಲಿ ಬಿಂದ್ಯಾರಾಣಿ ದೇವಿ 109 ಕೆಜಿಯ ಯಶಸ್ವಿ ಲಿಫ್ಟ್‌ನೊಂದಿಗೆ ಪ್ರಾರಂಭಿಸಿದರು. ನಂತರ ತಮ್ಮ ಎರಡನೇ ಪ್ರಯತ್ನದಲ್ಲಿ 111 ಕೆಜಿ ಭಾರ ಎತ್ತಿದರು. ಆಕೆಯ 115 ಕೆಜಿಯ ಮೂರನೇ ಪ್ರಯತ್ನವನ್ನು ನೋ-ಲಿಫ್ಟ್ ಎಂದು ಘೋಷಿಸಲಾಯಿತು. 24 ವರ್ಷದ ಭಾರತೀಯ ಆಟಗಾರ್ತಿ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯಲು 111 ಕೆಜಿ ಲಿಫ್ಟ್​ ಮಾಡಿದ್ದು ಪ್ರಮುಖವಾಗಿತ್ತು.

ಏಷ್ಯನ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಒಟ್ಟು ಲಿಫ್ಟ್‌ಗಳನ್ನು ಪರಿಗಣಿಸಿ ಪದಕಗಳನ್ನು ನೀಡಲಾಗುತ್ತದೆ. ಅಂದರೆ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ಮೂರು ಭಾಗಗಳಿದ್ದು, ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್ ಎಂದು ಅವುಗಳನ್ನು ಕರೆಯಲಾಗುತ್ತದೆ. ಈ ಮೂರರಲ್ಲಿ ಯಶಸ್ವಿ ಲಿಫ್ಟ್​ಗಳ ತೂಕವನ್ನು ಒಟ್ಟು ಮಾಡಿ ಹೆಚ್ಚು ಬಂದವರಿಗೆ ಪದಕ ನೀಡಲಾಗುತ್ತದೆ. 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 59 ಕೆಜಿ ವಿಭಾಗದಲ್ಲಿ ಬಿಂದ್ಯಾರಾಣಿ ದೇವಿ ಸ್ಪರ್ಧಿಸಿದ್ದರು. ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2023ರಲ್ಲಿ ಅವರು 55 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದಾರೆ.

ಚೀನಾದ ಚೆನ್ ಗುವಾನ್ ಲಿಂಗ್ 204 ಕೆಜಿ (ಸ್ನ್ಯಾಚ್ 90 ಕೆಜಿ, ಕ್ಲೀನ್ ಮತ್ತು ಜರ್ಕ್ 114 ಕೆಜಿ) ಎತ್ತಿ ಚಿನ್ನದ ಪದಕ ಗೆದ್ದರು. ವಿಯೆಟ್ನಾಂನ ವೊ ಥಿ ಕ್ವಿನ್ ನು 192 ಕೆಜಿ (88 ಕೆಜಿ + 104 ಕೆಜಿ) ಲಿಫ್ಟ್​ ಮಾಡಿ ಕಂಚಿನ ಪದಕ ಗೆದ್ದರು. ಪುರುಷರ 61 ಕೆಜಿ ವಿಭಾಗದ ಬಿ ಗುಂಪಿನ ಸ್ಪರ್ಧೆಯಲ್ಲಿ ಶುಭಂ ತೋಡ್ಕರ್ ಅವರು ಒಂಬತ್ತು ಸ್ಪರ್ಧಿಗಳಲ್ಲಿ ಆರನೇ ಸ್ಥಾನ ಪಡೆದರು. ಅವರು ಸ್ನ್ಯಾಚ್ 116 ಕೆಜಿ, ಕ್ಲೀನ್ ಮತ್ತು ಜರ್ಕ್ 147 ಕೆಜಿ ಸೇರಿ ಒಟ್ಟು 263 ಕೆಜಿ ಲಿಫ್ಟ್​​ ಮಾಡಿದ್ದರು.

2024ರ ಒಲಿಂಪಿಕ್‌ ಅರ್ಹತಾ ನಿಯಮ:2024ರ ಒಲಿಂಪಿಕ್‌ ಅರ್ಹತಾ ನಿಯಮಗಳ ಪ್ರಕಾರ, ಲಿಫ್ಟರ್‌ಗಳು 2023ರ ವಿಶ್ವ ಚಾಂಪಿಯನ್‌ಷಿಪ್‌ ಮತ್ತು 2024ರ ವಿಶ್ವಕಪ್ ಟೂರ್ನಿಗಳಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕು. ಅಲ್ಲದೇ ಹೆಚ್ಚುವರಿಯಾಗಿ, 2022ರ ವಿಶ್ವ ಚಾಂಪಿಯನ್‌ಶಿಪ್‌, 2023ರ ಕಾಂಟಿನೆಂಟಲ್ ಚಾಂಪಿಯನ್‌ಶಿಪ್ಸ್, 2023ರ ಗ್ರ್ಯಾನ್‌ಪ್ರಿ 1 ಮತ್ತು ಗ್ರ್ಯಾನ್‌ ಪ್ರಿ 2 ಮತ್ತು 2024ರ ಕಾಂಟಿನೆಂಟಲ್‌ ಚಾಂಪಿಯನ್‌ಷಿಪ್‌ಗಳ ಪೈಕಿ ಕನಿಷ್ಠ ಮೂರರಲ್ಲಿ ಪಾಲ್ಗೊಂಡಿರಬೇಕು. ಈ ಚಾಂಪಿಯನ್‌ಷಿಪ್‌ ಮತ್ತು ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿರುವ ಬಿಂದ್ಯಾರಾಣಿ ಮತ್ತು ಮೀರಾಬಾಯಿ ಚಾನು, ಇನ್ನು ಎರಡು ಕಡ್ಡಾಯ ಟೂರ್ನಿಗಳಲ್ಲಿ ಮತ್ತು ಹೆಚ್ಚುವರಿ ಟೂರ್ನಿಯೊಂದರಲ್ಲಿ ಒಲಿಂಪಿಕ್‌ ಅರ್ಹತೆಗಾಗಿ ಸ್ಪರ್ಧಿಸಬೇಕಿದೆ.

ಇದನ್ನೂ ಓದಿ:IPL 2023: ಡಕ್​ ಔಟ್​ನಲ್ಲಿ ದಾಖಲೆ ಬರೆದ ರೋಹಿತ್​ ಶರ್ಮಾ

ABOUT THE AUTHOR

...view details