ಕೈರೋ: ಭಾರತದ ಮಹಿಳಾ ಶೂಟರ್ಗಳ ತಂಡದ ಮೂವರು ವರ್ಷದ ಮೊದಲ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ಶಾಟ್‌ಗನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಕೀರ್ತಿ ಗುಪ್ತಾ, ಮನೀಷಾ ಕೀರ್ ಮತ್ತು ರಾಜೇಶ್ವರಿ ಕುಮಾರಿ ಅವರು ರಷ್ಯಾ ವಿರುದ್ಧ 4-6 ಅಂಕಗಳ ಅಂತರದಿಂದ ಸೋತು ಬೆಳ್ಳಿಪದಕಕ್ಕೆ ತೃಪ್ತಿಪಟ್ಟಿದ್ದಾರೆ.