ಚೆಂಗ್ಡು: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಿಂದ ಭಾರತದ ಮಹಿಳಾ ತಂಡ ಬುಧವಾರ ಹೊರಬಂದಿದೆ. ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ವಿರುದ್ಧ 0-3 ಸೆಟ್ಗಳ ಅಂತರದಿಂದ ಭಾರತ ತಂಡ ಸೋಲನ್ನು ಅನುಭವಿಸಿದೆ. ಮಣಿಕಾ ಬಾತ್ರಾ, ಶ್ರೀಜಾ ಅಕುಲಾ ಮತ್ತು ದಿಯಾ ಚಿತಾಲೆ ಅವರು ಸಿಂಗಲ್ಸ್ನಲ್ಲಿ 16ನೇ ಸುತ್ತಿನಲ್ಲಿ ಸೋತಿದ್ದಾರೆ.
ಪಂದ್ಯದುದ್ದಕ್ಕೂ ಮನಿಕಾ ಅವರ ಆಟ ಕಳಪೆಯಿಂದ ಕೂಡಿದ್ದು, ಅವರು ವಿಶ್ವದ 22 ನೇ ಶ್ರೇಯಾಂಕಿತ ಚೆನ್ ಸ್ಜು-ಯು ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು. ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಮಿಶ್ರ ಡಬಲ್ಸ್ ಚಿನ್ನದ ಪದಕ ವಿಜೇತೆ ಶ್ರೀಜಾ ಅವರು, ವಿಶ್ವದ 35 ನೇ ಶ್ರೇಯಾಂಕಿತ ಚಿಂಗ್ ಐ-ಚಿಂಗ್ ಅವರ ವಿರುದ್ಧ ಸೋಲು ಅನುಭವಿಸಿದರು.