ಬಾರ್ಸಿಲೋನಾ (ಸ್ಪೇನ್): ಭಾನುವಾರ ಇಲ್ಲಿ ನಡೆದ ಮೂರು ರಾಷ್ಟ್ರಗಳ 100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಆತಿಥೇಯ ಸ್ಪೇನ್ ಅನ್ನು 3-0 ಗೋಲುಗಳಿಂದ ಸೋಲಿಸಿತು. ಈ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ವಂದನಾ ಕಟಾರಿಯಾ (22'), ಮೋನಿಕಾ (48'), ಮತ್ತು ಉದಿತಾ (58') ಅವರು ಗೋಲುಗಳು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ಭಾರತ ತನ್ನ ಹಿಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ 1-1 ಮತ್ತು ಸ್ಪೇನ್ ವಿರುದ್ಧ 2-2 ಡ್ರಾ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು.
ಟೇಬಲ್ ಟಾಪರ್ ಆದ ಭಾರತವು ಬಲವಾದ ಆರಂಭವನ್ನು ಪಡೆಯಿತು. ನಿಖರವಾದ ಪಾಸ್‌ಗಳೊಂದಿಗೆ ಶಿಸ್ತುಬದ್ಧ ರಚನೆಯಲ್ಲಿ ಆಟಗಾರ್ತಿಯರು ಅಂಕಗಳನ್ನು ಕಲೆಹಾಕಿದರು. ಆದರೆ ಮೊದಲ ಕ್ವಾರ್ಟರ್ನಲ್ಲಿ ಅಂಕ ಗಳಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್‌ನ ಅಂತಿಮ ಐದು ನಿಮಿಷಗಳಲ್ಲಿ ಆತಿಥೇಯರು ಕೆಲವು ಉತ್ತಮ ಅವಕಾಶಗಳನ್ನು ಸೃಷ್ಟಿಸಿದರು. ಆದರೆ 11 ನೇ ನಿಮಿಷದಲ್ಲಿ ಸ್ಪೇನ್‌ಗೆ ಪೆನಾಲ್ಟಿ ಗೋಲ್ ಗಳಿಸುವ ಅವಕಾಶ ಸಿಕ್ಕಿತ್ತು. ಈ ವೇಳೆ ಭಾರತದ ನಾಯಕಿ ಮತ್ತು ಗೋಲಿ ಸವಿತಾ ಅವರು ಪೋಸ್ಟ್ ಅನ್ನು ಕಾಪಾಡುವಲ್ಲಿ ಯಶಸ್ವಿಯಾದರು. ಇದರಿಂದ ಗೋಲಿನ ಅವಕಾಶ ಸ್ಪೇನ್ ಕೈತಪ್ಪಿತು.
ಭಾರತವು ಎರಡನೇ ಕ್ವಾರ್ಟರ್ ಅನ್ನು ಪ್ರಬಲ ಶೈಲಿಯಲ್ಲಿ ಪ್ರಾರಂಭಿಸಿತು. 22ನೇ ನಿಮಿಷದಲ್ಲಿ ಸುಶೀಲಾ ಉತ್ತಮ ಫೀಲ್ಡ್ ಗೋಲ್ ಅವಕಾಶವನ್ನು ಸ್ಥಾಪಿಸುವುದರೊಂದಿಗೆ ಅವರು ಪ್ರಬಲ ದಾಳಿಯನ್ನು ಮಾಡಿದರು. ನೆಹಾ ಗೋಯಲ್‌ಗೆ ಸರ್ಕಲ್‌ನಲ್ಲಿ ವೇಗದ ಪಾಸ್‌ನೊಂದಿಗೆ ಸಹಾಯ ಮಾಡಿದರು. ಆದರೆ ನೇಹಾ ಅವರ ಗೋಲಿನ ಹೊಡೆತವು ಸ್ಪ್ಯಾನಿಷ್ ಗೋಲಿ ಕ್ಲಾರಾ ಪೆರೆಜ್ ಅವರ ಪ್ಯಾಡ್‌ಗಳಿಂದ ಪುಟಿಯಿತು. ಲಾಲ್ರೆಮ್ಸಿಯಾಮಿ ನಂತರ ರೀಬೌಂಡ್ ಅನ್ನು ಎತ್ತಿಕೊಂಡು ಅದನ್ನು ಗೋಲಿಯನ್ನು ದಾಟಿಸಿದರು. ವಂದನಾ ಅವರು ಗೋಲ್ ಪೋಸ್ಟ್ಗೆ ತಲುಪಲು ಸಹಾಯ ಮಾಡಿ ಅಂಕ ಪಡೆದುಕೊಂಡರು.
ಭಾರತ 48ನೇ ನಿಮಿಷದಲ್ಲಿ ಪೆನಾಲ್ಟಿ ಶಾಟ್ನ ಅವಕಾಶವನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಯಶಸ್ಸು ಕಂಡ ವನಿತೆಯರು 2-0ಯ ಮುನ್ನಡೆಯನ್ನು ಪಡೆದುಕೊಂಡರು. ಶಾಟ್ ತೆಗೆದುಕೊಂಡ ಮೋನಿಕಾ ಚೆಂಡನ್ನು ಸ್ಪ್ಯಾನಿಷ್ ಗೋಲ್ ಪೋಸ್ಟ್‌ನಲ್ಲಿ ಪೆರೆಜ್ ಬದಲಿಗೆ ಮರಿಯಾ ರೂಯಿಜ್‌ಗೆ ಕಳುಹಿಸುವ ಗುರಿಯಲ್ಲಿದ್ದರು.
ಅನುಭವಿ ದೀಪ್ ಗ್ರೇಸ್ ಎಕ್ಕಾ, ನಿಕ್ಕಿ ಪ್ರಧಾನ್ ಮತ್ತು ಸುಶೀಲಾ ಚಾನು ಸ್ಪ್ಯಾನಿಷ್ ದಾಳಿಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರಿಂದ ಎದುರಾಳಿಗೆ ಯಾವುದೇ ಗೋಲ್ ಗಳಿಸುವ ಅವಕಾಶ ಸಿಗಲಿಲ್ಲ. ಆತ್ಮವಿಶ್ವಾಸದಿಂದ ಕೂಡಿದ ಉದಿತಾ ತಾಳ್ಮೆಯಿಂದ ಉತ್ತಮ ಡ್ರಿಬ್ಲಿಂಗ್ ಕೌಶಲ್ಯವನ್ನು ಪ್ರದರ್ಶಿಸಿ 58 ನೇ ನಿಮಿಷದಲ್ಲಿ ಗೋಲ್ ಗಳಿಸಿದರು. ಇದರಿಂದ ಭಾರತ 3-0ಯ ಮುನ್ನಡೆಯಿಂದ ಅದ್ಭುತ ಜಯ ದಾಖಲಿಸಿತು.
ಇದನ್ನೂ ಓದಿ:Ashes 5th Test: ಬೇಸ್ ಬಾಲ್ ನೀತಿಯಂತೆ ಅಬ್ಬರದ ಆಟ ಆಡಿದ ಆಂಗ್ಲರು.. ಆಸ್ಟ್ರೇಲಿಯಾಕ್ಕೆ 396 ರನ್ನ ಗುರಿ.. ಉತ್ತಮ ಆರಂಭ ಕಂಡ ಆಸಿಸ್