ಕರ್ನಾಟಕ

karnataka

ETV Bharat / sports

ಏಷ್ಯನ್ ಗೇಮ್ಸ್ 2023: ಫೈನಲ್​ಗೆ ಲಗ್ಗೆಯಿಟ್ಟ ಭಾರತ ಮಹಿಳಾ ಸಂಯುಕ್ತ ಆರ್ಚರಿ ತಂಡ... ಇಂದೂ ಮುಂದುವರಿಯಲಿದೆ ಪದಕಗಳ ಬೇಟೆ.. - ಇಂಡೋನೇಷ್ಯಾ

Asian Games 2023: ಹ್ಯಾಂಗ್‌ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಬಿಲ್ಲುಗಾರಿಕೆಯಲ್ಲಿ ಭಾರತದ ಮಹಿಳಾ ಸಂಯುಕ್ತ ತಂಡ ಫೈನಲ್​ ಪ್ರವೇಶಿಸಿದೆ. ಜ್ಯೋತಿ, ಅದಿತಿ ಮತ್ತು ಪರಿಣಿತಿ ಬಿಲ್ಲುಗಾರಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು.

Asian Games 2023
ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಸಂಯುಕ್ತ ಆರ್ಚರಿ ತಂಡ

By PTI

Published : Oct 5, 2023, 9:05 AM IST

Updated : Oct 5, 2023, 10:07 AM IST

ಹ್ಯಾಂಗ್‌ಝೌ (ಚೀನಾ):ವಿಶ್ವ ಚಾಂಪಿಯನ್ ಆಗಿರುವ ಭಾರತದ ಮಹಿಳಾ ಸಂಯುಕ್ತ ಆರ್ಚರಿ ತಂಡವು ಗುರುವಾರ ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮುನ್ನ ಕೆಳ ಶ್ರೇಯಾಂಕದ ಹಾಂಕಾಂಗ್‌ಗೆ 231-220 ಅಂಕಗಳ ಗುರಿಯನ್ನು ನೀಡಿ ಸೆಮಿಫೈನಲ್‌ನಲ್ಲಿ ಬೆವರು ಹರಿಸಿತು.

ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರು ತಮ್ಮ ಐದನೇ ಶ್ರೇಯಾಂಕದ ಪ್ರತಿಸ್ಪರ್ಧಿಗಳಾದ ಚೆಂಗ್ ಹಂಗ್ ಟಿಂಗ್, ವಾಂಗ್ ಯುಕ್ ಶೆಯುನ್ ಮತ್ತು ಲುಕ್ ಯಿನ್ ಯಿ 57-57 ರಿಂದ ಎರಡನೇ ಅಂತ್ಯವನ್ನು ಸಮಬಲಗೊಳಿಸಿದ ನಂತರ ನಿಧಾನಗತಿ ಆರಂಭ ಪಡೆದರು. ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು.

ಆದರೆ, ಅಗ್ರ ಶ್ರೇಯಾಂಕದ ಭಾರತೀಯ ತ್ರಿಮೂರ್ತಿಗಳು ಮೂರನೇ ತುದಿಯಲ್ಲಿ ಕೇವಲ ಒಂದು ಅಂಕವನ್ನು ಕಳೆದುಕೊಂಡ ನಂತರ ನಿರ್ಣಾಯಕವಾಗಿ ಎಂಟು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಭಾರತ ತಂಡವು 11 ಪಾಯಿಂಟ್‌ಗಳ ಬೃಹತ್ ಜಯ ಗಳಿಸಿತು.

ಪಿ.ವಿ.ಸಿಂಧುಗೆ ಸೋಲು:ಏಷ್ಯನ್ ಗೇಮ್ಸ್‌ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್​ನ ಕ್ವಾಟರ್​ಫೈನಲ್​ನಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧು ಸೋಲು ಅನುಭವಿಸಿದರು.

ಏಷ್ಯನ್ ಗೇಮ್ಸ್ 2023 ರ 12 ನೇ ದಿನ- ಭಾರತದಿಂದ ಮುಂದುವರಿಯಲಿದೆ ಪದಕಗಳು ಬೇಟೆ: ಏಷ್ಯನ್ ಗೇಮ್ಸ್ 2023 ರ 12 ನೇ ದಿನದಂದು, ಭಾರತೀಯ ಆಟಗಾರರು ಬ್ರಿಡ್ಜ್, ಸ್ಕ್ವಾಷ್ ಮತ್ತು ಬಿಲ್ಲುಗಾರಿಕೆ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ. ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತೀಯ ಕುಸ್ತಿಪಟುಗಳು ಆಡಲಿದ್ದಾರೆ. ಪಂಗಲ್ ಎರಡು ಬಾರಿ ಅಂಡರ್-20 ವಿಶ್ವ ಚಾಂಪಿಯನ್ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಬೆಲ್‌ಗ್ರೇಡ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.

ಈ ಸ್ಪರ್ಧೆಯಲ್ಲಿ ಅವರು ಪ್ಯಾರಿಸ್ 2024 ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಏಷ್ಯನ್ ಗೇಮ್ಸ್ 2023 ರಲ್ಲಿ ಗಾಯಗೊಂಡ ವಿನೇಶ್ ಫೋಗಟ್ ಬದಲಿಗೆ ಪಂಗಲ್ ಸ್ಥಾನ ಪಡೆದಿದ್ದಾರೆ. ಇಂದು ಕೂಡ ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಆತಿಥೇಯ ಚೀನಾ ವಿರುದ್ಧ ಪೈಪೋಟಿ ನಡೆಸಲಿದ್ದು, ಫೈನಲ್‌ಗೆ ಲಗ್ಗೆ ಇಡಲಿದೆ.

ಸಂಯುಕ್ತ ಬಿಲ್ಲುಗಾರರಾದ ಅಭಿಷೇಕ್ ವರ್ಮಾ, ಓಜಸ್ ಪ್ರವೀಣ್ ಡಿಯೋಟಾಲೆ, ಜ್ಯೋತಿ ಸುರೇಖಾ ವೆನ್ನಂ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಅವರು ಪುರುಷರ ಮತ್ತು ಮಹಿಳೆಯರ ತಂಡ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಇಂದು ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಂಧು ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಆಡಲಿದ್ದಾರೆ.

ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಭಾರತದ ಪುರುಷರ ಬ್ರಿಡ್ಜ್ ತಂಡವು ಫೈನಲ್‌ನಲ್ಲಿ ಹಾಂಕಾಂಗ್, ಚೀನಾ ವಿರುದ್ಧ ಪೈಪೋಟಿ ನಡೆಸಲಿದೆ. ಎಚ್.ಎಸ್.ಪ್ರಣೋಯ್ ಮತ್ತು ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ- ಚಿರಾಗ್ ಶೆಟ್ಟಿ ಕೂಡ ಪದಕ ಗೆಲ್ಲುವ ಉದ್ದೇಶದಿಂದ ಏಷ್ಯನ್ ಗೇಮ್ಸ್ ಪ್ರವೇಶಿಸಲಿದ್ದಾರೆ.

ಅಥ್ಲೆಟಿಕ್ಸ್ ಮುಕ್ತಾಯಗೊಳ್ಳಲಿದ್ದು, ಭಾರತದ ಪುರುಷರ ಮ್ಯಾರಥಾನ್ ಓಟಗಾರರಾದ ಮಾನ್ ಸಿಂಗ್ ಮತ್ತು ಬೆಲಿಯಪ್ಪ ಅಪ್ಪಚಂಗಡ ಬೋಪಯ್ಯ ಕೂಡ ಪದಕ ಗೆಲ್ಲಲು ನಿರೀಕ್ಷಯಲ್ಲಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್ ವಿಶ್ವಕಪ್ 2023: 1996ರ ಸಾಧನೆ ಪುನರಾವರ್ತಿಸಬಹುದೇ ಶ್ರೀಲಂಕಾ ..?

Last Updated : Oct 5, 2023, 10:07 AM IST

ABOUT THE AUTHOR

...view details