ದುಬೈ (ಯುಎಇ): ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು 10 ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಅಭಿಯಾನವನ್ನು ಮುಗಿಸಿದರು.
ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚಿನ ಪದಕ ಸಾಧನೆಯನ್ನು ಭಾರತೀಯ ಮಹಿಳಾ ಬಾಕ್ಸರ್‌ಗಳು ಮಾಡಿದ್ದಾರೆ. ಒಲಿಂಪಿಕ್ ಬೌಂಡ್ ಬಾಕ್ಸರ್ ಪೂಜಾ ರಾಣಿ ಚಾಂಪಿಯನ್ಶಿಪ್ನಲ್ಲಿ ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಭಾನುವಾರ ನಡೆದ 75 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಮಾವ್ಲುಡಾ ಮೊವ್ಲೋನೋವಾ ವಿರುದ್ಧ 5-0ಯಲ್ಲಿ ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. 2019ರ ಆವೃತ್ತಿಯಲ್ಲಿ 81 ಕೆ.ಜಿ ವಿಭಾಗದಲ್ಲಿ ಇವರು ಚಿನ್ನದ ಪದಕ ಗೆದ್ದಿದ್ದರು.