ಡೆಹ್ರಾಡೂನ್:ಪೋಲೆಂಡ್ನಲ್ಲಿ ಬುಧವಾರ ನಡೆದ ಯೂತ್ ವರ್ಲ್ಡ್ ವುಮೆನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ, ಭಾರತೀಯ ಮಹಿಳಾ ಬಾಕ್ಸರ್ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, 7 ಚಿನ್ನ ಹಾಗೂ 3 ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತೀಯ ಯುವ ಬಾಕ್ಸಿಂಗ್ ತಂಡದ ಮುಖ್ಯ ತರಬೇತುದಾರ ಭಾಸ್ಕರ್ ಚಂದ್ರ ಭಟ್ ನೇತೃತ್ವದ 10 ಭಾರತೀಯ ಬಾಕ್ಸರ್ಗಳ ತಂಡ ಪೋಲೆಂಡ್ಗೆ ತೆರಳಿತ್ತು. 7 ಮಹಿಳಾ ಬಾಕ್ಸರ್ಗಳು ಚಿನ್ನದ ಪದಕ ಗೆದ್ದರೆ, ಇತರ ಮೂವರು ಪುರುಷ ಬಾಕ್ಸರ್ಗಳು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಗೀತಿಕಾ (48 ಕೆಜಿ), ಬಾಬಿರೋಜಿಸಾನ ಚಾನು (51 ಕೆಜಿ), ಪೂನಂ (57 ಕೆಜಿ), ವಿಂಕಾ (60 ಕೆಜಿ), ಅರುಂಧತಿ ಚೌಧರಿ (69 ಕೆಜಿ), ತೊಕ್ಕೋಮ್ ಸನಾಮಾಚು ಚಾನು (75 ಕೆಜಿ) ಮತ್ತು ಅಲ್ಫಿಯಾ ಪಠಾಣ್ (+ 81 ಕೆಜಿ) ಚಿನ್ನದ ಪದಕ ಗೆದ್ದಿದ್ದರು.