ನವದೆಹಲಿ: ಮಾಂಟೆನೆಗ್ರೊದ ಬುಡ್ವಾದಲ್ಲಿ ನಡೆದ 30ನೇ ಆ್ಯಡ್ರಿಯಾಟಿಕ್ ಪರ್ಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಭಾರತದ ಬೇಬಿರೋಜಿಸನಾ ಚಾನು ಮತ್ತು ಅರುಂಧತಿ ಚೌದರಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಭಾರತ ಟೂರ್ನಿಯಲ್ಲಿ 5 ಚಿನ್ನದ ಪದಕಗಳೊಂದಿಗೆ ಗರಿಷ್ಠ ಪದಕ ಪಡೆದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
51 ಕೆಜಿ ವಿಭಾಗದಲ್ಲಿ ಚಾನು ಉಜ್ಬೆಕಿಸ್ತಾನದ ಸಬಿನಾ ಬೊಬೊಕುಲೊವಾ ವಿರುದ್ಧ 3-2 ಅಂಕಗಳಿಂದ ಗೆದ್ದರೆ, 3 ಬಾರಿಯ ಖೇಲೋ ಇಂಡಿಯಾ ಗೋಲ್ಡ್ ಮೆಡಲಿಸ್ಟ್ ಅರುಂಧತಿ ಚೌದರಿ 5-0 ಅಂತರದಿಂದ ಉಕ್ರೇನ್ನ ಮರ್ಯಾನ ಸ್ಟೋಯ್ನಿಕ್ ವಿರುದ್ಧ ಜಯ ಸಾಧಿಸಿದರು.