ಕರ್ನಾಟಕ

karnataka

ETV Bharat / sports

ಸಿಂಗಲ್ಸ್ ಅಖಾಡಕ್ಕೆ ವಿದಾಯ ಹೇಳಿದ ಭಾರತದ ಪ್ರತಿಭಾನ್ವಿತ ಟೆನಿಸ್ಸಿಗ ಯೂಕಿ ಭಾಂಬ್ರಿ - ಡಬಲ್ಸ್​ನತ್ತ ಯೂಕಿ ಭಾಂಬ್ರಿ ಚಿತ್ತ

ಭಾರತದ ಟೆನಿಸ್​ ಆಟಗಾರ ಯೂಕಿ ಭಾಂಬ್ರಿ, ಸಾನಿಯಾ ಮಿರ್ಜಾ ಅವರ ಬಳಿಕ ಸಿಂಗಲ್ಸ್​ ತೊರೆದ 2ನೇ ಆಟಗಾರರಾಗಿದ್ದಾರೆ. ಇನ್ನು ಮುಂದೆ ಇವರು ಡಬಲ್ಸ್​ ಸ್ಪರ್ಧೆಗಳಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.

yuki-bhambri
ಭಾರತದ ಟೆನಿಸ್ಸಿಗ ಯೂಕಿ ಭಾಂಬ್ರಿ

By

Published : Jan 5, 2023, 8:32 AM IST

ಪುಣೆ:ಗಾಯದ ಸಮಸ್ಯೆ, ನಿರೀಕ್ಷೆಯಂತೆ ಸಿಗದ ಯಶಸ್ಸು, ಡಬಲ್ಸ್​ನತ್ತ ಹೆಚ್ಚಿನ ಗಮನ ಕಾರಣಕ್ಕಾಗಿ ಭಾರತದ ಖ್ಯಾತ ಟೆನಿಸ್​ ಆಟಗಾರ ಯೂಕಿ ಭಾಂಬ್ರಿ ಸಿಂಗಲ್ಸ್​ ಸ್ಪರ್ಧೆಗಳಿಗೆ ಸದ್ದಿಲ್ಲದೇ ವಿದಾಯ ಘೋಷಿಸಿದ್ದಾರೆ. ಇನ್ನು ಮುಂದೆ ತಾವು ಸಿಂಗಲ್ಸ್​ ವಿಭಾಗದಲ್ಲಿ ಆಡುವುದಿಲ್ಲ. ಡಬಲ್ಸ್​ ಪಂದ್ಯಗಳಲ್ಲಿ ಮಾತ್ರ ಸೆಣಸಾಡುವೆ ಎಂದು ತಿಳಿಸಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಯೂಕಿ, 'ಸತತ ಗಾಯದ ಸಮಸ್ಯೆಗಳಿಂದಾಗಿ ತಾವು ಟೆನಿಸ್​ ಸಿಂಗಲ್ಸ್​ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಸಿಂಗಲ್ಸ್​ ವಿಭಾಗದ ವೃತ್ತಿಜೀವನದಲ್ಲಿ ಸಾಧ್ಯವಾದಷ್ಟು ಸಾಧನೆ ಮಾಡಿದ್ದೇನೆ. ಅದರಲ್ಲಿ ಹೆಚ್ಚಿನ ಯಶಸ್ಸು ಸಿಗದ ಕಾರಣ, ಡಬಲ್ಸ್​ನಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

2019ರಲ್ಲೇ ನಿರ್ಧಾರ:'ಈ ಕುರಿತಾಗಿ ನಾನು2019ರಲ್ಲೇ ನಿರ್ಧರಿಸಿದ್ದೆ. ಬಹಳ ಹಿಂದಿನ ನಿರ್ಧಾರವನ್ನು ಈಗ ಪ್ರಕಟಿಸಿದ್ದೇನೆ. ಕಳೆದ ವರ್ಷ ಗಾಯದಿಂದ ಚೇತರಿಸಿಕೊಂಡು ಮತ್ತೆ ಅಖಾಡಕ್ಕೆ ಇಳಿದೆ. ಆದರೆ, ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ' ಎಂದು ಯೂಕಿ ತಿಳಿಸಿದ್ದಾರೆ.

ಈಡೇರದ ಟಾಪ್​ 50 ಕನಸು:ಯೂಕಿ ಬಾಂಬ್ರಿ ಅವರು ಸಿಂಗಲ್ಸ್​ ವಿಭಾಗದಲ್ಲಿ ವಿಶ್ವದ ಟಾಪ್​ 50 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎಂಬ ಗುರಿ ಹೊಂದಿದ್ದರು. ಆದರೆ, ಅದು ಈವರೆಗೂ ಸಾಧ್ಯವಾಗಿಲ್ಲ. ಭಾರತದ ಟೆನಿಸ್​ ಆಟಗಾರರು ಸಿಂಗಲ್ಸ್​ನಲ್ಲಿ ಯಶಸ್ಸು ಸಾಧಿಸಿತ್ತು ಕಡಿಮೆ. ಈ ವಿಭಾಗ ಹೆಚ್ಚಿನ ಸ್ಪರ್ಧಾತ್ಮಕತೆಯಿಂದ ಕೂಡಿದೆ. ಯಶಸ್ಸು ಗಳಿಸುವುದು ಸುಲಭವಲ್ಲ ಎಂದೂ ಹೇಳಿದ್ದಾರೆ.

ಡಬಲ್ಸ್​ನತ್ತ ಚಿತ್ತ:'ಮೂರು ವರ್ಷ ಸತತ ಗಾಯದಿಂದ ಬಳಲಿದ್ದೇನೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಕಳೆದ ವರ್ಷ ಮತ್ತೆ ಅಖಾಡಕ್ಕಿಳಿದೆ. ಸಿಂಗಲ್ಸ್ ವಿಭಾಗ ಸವಾಲಾಯಿತು. ಹೀಗಾಗಿ ಗುರಿಯನ್ನು ಬದಲಿಸಿ ಡಬಲ್ಸ್​ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ. ಇದರಲ್ಲಿಯೇ ಯಶಸ್ಸು ಸಾಧಿಸಲು ಶ್ರಮಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

ಭಾರತದ ಸಹ ಆಟಗಾರರಾದ ಸಾಕೇತ್ ಮೈನೇನಿ ಜೊತೆ ಡಬಲ್ಸ್​ ಆಡುವ ಯೂಕಿ ಭಾಂಬ್ರಿ, 2021ರಲ್ಲಿ ಒಟ್ಟು 5 ಚಾಲೆಂಜರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಳಿಕ ಎಟಿಪಿ ಟೂರ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಡಬಲ್ಸ್​ ಶ್ರೇಯಾಂಕ ಪಟ್ಟಿಯಲ್ಲಿ 100 ಆಟಗಾರರಲ್ಲಿ ಒಬ್ಬರಾಗಿದ್ದೇವೆ. ಶೀಘ್ರವೇ ಇದನ್ನು 50 ರೊಳಗೆ ತರುವ ಬಯಕೆ ಇದೆ ಎಂದಿದ್ದಾರೆ.

ಸಿಂಗಲ್ಸ್​ ತೊರೆದ 2ನೇ ಭಾರತೀಯ:ಯೂಕಿ ಭಾಂಬ್ರಿ ಟೆನಿಸ್​ನಲ್ಲಿ ಸಿಂಗಲ್ಸ್​ ವಿಭಾಗ ತೊರೆದ 2ನೇ ಆಟಗಾರರಾಗಿದ್ದಾರೆ. ಇದಕ್ಕೂ ಮೊದಲು ಟೆನಿಸ್​ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರು ಸಿಂಗಲ್ಸ್​​ ಬಿಟ್ಟು ಡಬಲ್ಸ್​ನಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಡಬಲ್ಸ್​ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ್ದರು.

ಇದನ್ನೂ ಓದಿ:ಡೆಹ್ರಾಡೂನ್​ನಿಂದ ಮುಂಬೈಗೆ ರಿಷಭ್​ ಏರ್​ಲಿಫ್ಟ್: ಅಂಬಾನಿ ಆಸ್ಪತ್ರೆಗೆ ಪಂತ್​ ದಾಖಲು

ABOUT THE AUTHOR

...view details