ಗೋವಾ : ಲೀಗ್ನಲ್ಲಿ ಸತತ ಸೋಲುಗಳನ್ನು ಕಂಡು ನಂತರ ಪುಟಿದೆದ್ದು ಫೈನಲ್ ಪ್ರವೇಶಿಸಿದ್ದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್ನ ಪ್ರಶಸ್ತಿ ಸನಿಹದಲ್ಲಿ ಎಡವಿ ಬಿತ್ತು. ಬೆಂಗಳೂರು ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೋಲುಗಳಿಂದ ಮಣಿಸಿದ ಎಟಿಕೆ ಮೋಹನ್ ಬಗಾನ್ ಟೀಂ ಈ ಸಲದ ಪ್ರತಿಷ್ಟಿತ ಐಎಸ್ಎಲ್ ಕಪ್ ಎತ್ತಿ ಹಿಡಿದು ಸಂಭ್ರಮಿಸಿತು.
ಗೋವಾದ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ 2022-23ರ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಮೋಹನ್ ಬಗಾನ್ 4ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಎರಡನೇ ಬಾರಿಗೆ ಕಪ್ ಗೆಲ್ಲುವ ಆಸೆಯಲ್ಲಿದ್ದ ಸುನಿಲ್ ಛೆಟ್ರಿ ತಂಡಕ್ಕೆ ನಿರಾಸೆಯಾಗಿದೆ. ನಿಗದಿತ ಸಮಯದಲ್ಲಿ 2-2 ಗೋಲುಗಳಿಂದ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್ನಲ್ಲಿ ಮುನ್ನಡೆ ಸಾಧಿಸಿದ ಎಟಿಕೆ ಗೆಲುವಿನ ಕೇೆಕೆ ಹಾಕಿತು.
ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಬೆಂಗಳೂರು ಎಫ್‌ಸಿ ಮೇಲೆ ಹೆಚ್ಚು ನಿರೀಕ್ಷೆ ಇತ್ತು. ಅದರಂತೆ ಸುನಿಲ್ ಛೆಟ್ರಿ ಪಡೆ ನಿಗದಿತ ಸಮಯದಲ್ಲಿ ಪೈಪೋಟಿಯನ್ನೂ ನೀಡಿತು. ಬೆಂಗಳೂರಿನ ರಾಯ್ ಕೃಷ್ಣ ಅವರ ಕೈಗೆ ಬಾಲ್ ತಗುಲಿದ ಪರಿಣಾಮ 14ನೇ ನಿಮಿಷದಲ್ಲಿ ಎಟಿಕೆ ಪೆನಾಲ್ಟಿ ಕಿಕ್ನ ಅವಕಾಶ ಪಡೆಯಿತು. ಇದನ್ನು ಎಟಿಕೆಯ ಡಿಮಿಟ್ರಿ ಪೆಟ್ರಾಟೋಸ್ ಸದುಪಯೋಗಪಡಿಸಿಕೊಂಡು ಗೋಲ್ ದಾಖಲಿಸಿದರು. ಈ ಮೂಲಕ ಎಟಿಕೆ 1-0 ಯ ಮುನ್ನಡೆ ಪಡೆದುಕೊಂಡಿತು.